Connect with us

Chitradurga

ಪೊಲೀಸನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಇನ್ನೋರ್ವ ಪೇದೆಗೆ ಬಿತ್ತು ಗೂಸಾ

Published

on

ಚಿತ್ರದುರ್ಗ: ವಿವಾಹಿತ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ, ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಪೇದೆಗೆ ಗ್ರಾಮಸ್ಥರು ಭರ್ಜರಿ ಗೂಸಾ ಕೊಟ್ಟ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಕೆ.ಹಟ್ಟಿಯಲ್ಲಿ ನಡೆದಿದೆ.

ಲೋಕೇಶ್ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಪೇದೆ. ಸುಮಾರು ದಿನಗಳಿಂದ ಗ್ರಾಮಸ್ಥರ ಕಣ್ಣು ತಪ್ಪಿಸಿ ಅಕ್ರಮ ಸಂಬಂಧ ಹೊಂದಿದ್ದ ಲೋಕೇಶ್ ಭಾನುವಾರ ಸಿಕ್ಕಿಬಿದ್ದಿದ್ದಾನೆ.

ಲೋಕೇಶ್ ಮೂಲತಃ ರಾಮನಗರ ಸಮೀಪದ ಗಿರೇಹಳ್ಳಿ ಗ್ರಾಮದ ನಿವಾಸಿ. ಪಕ್ಕದ ಹಳ್ಳಿಯ ಹುಡುಗಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡಿದ್ದು, ಫೇಸ್ ಬುಕ್, ವಾಟ್ಸಪ್‍ನಲ್ಲಿ ಸಂಪರ್ಕದಲ್ಲಿದ್ದನು. ಕೆಲವು ದಿನಗಳ ನಂತರ ನಂಬರ್ ಬದಲಾಗಿದ್ದರಿಂದ ಸಂಪರ್ಕ ಕಳೆದುಕೊಂಡಿದ್ದರು. ಆದರೆ ಸಂತ್ರಸ್ತ ಮಹಿಳೆ ಪೊಲೀಸ್ ಪೇದೆ ದೇಹದಾಢ್ರ್ಯ ಪರೀಕ್ಷೆಗೆ ಬಂದಿದ್ದ ವೇಳೆ ಲೋಕೇಶ್ ಮತ್ತೇ ನಂಬರ್ ಪಡೆದಿದ್ದಾನೆ.

ಲೋಕೇಶ್ ಮಹಿಳೆಯೊಂದಿಗೆ ನಡೆಸುತ್ತಿದ್ದನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಮದುವೆ ನಂತರವೂ ಸಂಪರ್ಕದಲ್ಲಿ ಇರುವಂತೆ ಒತ್ತಾಯಿಸಿದ್ದನು. ಹೀಗಾಗಿ ತನ್ನ ಪತಿಗೆ ಗೊತ್ತಾಗದಂತೆ ಇವರ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿತ್ತು.

ಇಂದು ಮಾರು ವೇಷದಲ್ಲಿ ಗ್ರಾಮಕ್ಕೆ ಬಂದಿದ್ದ ಲೋಕೇಶ್ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನ ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಶನಿವಾರ ಮಧ್ಯರಾತ್ರಿ ನನ್ನ ಪತ್ನಿಯ ಫೋನ್‍ಗೆ ಲೋಕೇಶ್ ನಂಬರ್‍ನಿಂದ ವಾಟ್ಸಪ್ ಮೆಸೇಜ್ ಬಂದಿತ್ತು. ನಾನು ರಿಪ್ಲೈ ಮಾಡಿದ ಮೇಲೆ ಇವರ ಮಧ್ಯೆ ಅಕ್ರಮ ಸಂಬಂಧ ಇರುವುದು ಖಚಿತವಾಗಿ, ಪತ್ನಿಯನ್ನು ವಿಚಾರಿಸಿದಾಗ ಸತ್ಯ ತಿಳಿಯಿತು. ಈ ಹಿಂದೆ ಅಕ್ರಮ ಸಂಬಂಧದ ವಿಚಾರವಾಗಿ ನಮ್ಮಿಬ್ಬರ ನಡುವೆ ಅನೇಕ ಬಾರಿ ಜಗಳವಾಗಿದೆ. ಆದರೆ ಸೂಕ್ತ ಸಾಕ್ಷಿಯಿರಲಿಲ್ಲ, ಈಗ ಲೋಕೇಶ್ ಸಿಕ್ಕಿಬಿದ್ದಿದ್ದಾನೆ ಎಂದು ಸಂತ್ರಸ್ತೆಯ ಪತಿ ಲೋಕಣ್ಣ ಹೇಳಿದ್ದಾರೆ.