Monday, 16th September 2019

Recent News

ನಡೆದಾಡುವ ದೇವರ ವಿಚಾರದಲ್ಲಿ ಸುಳ್ಳು ಹೇಳಿದ್ರಾ ಮೋದಿ..?

ಬೆಂಗಳೂರು: ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಭಾರೀ ಆಕ್ಷೇಪ ವ್ಯಕ್ತವಾಗಿದ್ದು, ಇದೀಗ ಪ್ರಧಾನಿಯವರು ಸುಳ್ಳು ಹೇಳಿದ್ರಾ ಎಂಬ ಅನುಮಾನವೊಂದು ಮೂಡಿದೆ.

ಹೌದು. ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಬರಲು ಭದ್ರತೆ ಇಲ್ಲ. ಹೀಗಾಗಿ ಪ್ರಧಾನಿಗಳು ದೇವರ ಅಂತಿಮ ದರ್ಶನಕ್ಕೆ ಬರುತ್ತಿಲ್ಲ ಎಂದು ಹೇಳಲಾಗಿತ್ತು. ಆದ್ರೆ `ನಡೆದಾಡುವ ದೇವರ’ ಕೈಲಾಸ ಯಾತ್ರೆ ವೇಳೆ ಕಂಡುಕೇಳರಿಯದ ಭದ್ರತೆ ಒದಗಿಸಲಾಗಿತ್ತು. ತಾವು ನೀಡಿದ್ದ ಭದ್ರತೆಗೆ ‘ಆಪರೇಷನ್ ಆರೆಂಜ್ ಬುಕ್’ ಎಂದು ಪೊಲೀಸರು ಹೆಸರಿಟ್ಟಿದ್ದರು. ಇದರ ಪ್ರಕಾರ ವಿವಿಐಪಿ, ವಿಐಪಿಗಳಿಗೆಲ್ಲಾ ಭದ್ರತೆ ಪಕ್ಕಾ ಆಗಿತ್ತು. ಯಾರೆಲ್ಲಾ ವಿವಿಐಪಿಗಳು ಬರ್ತಾರೆ, ಅವರಿಗೆ ಭದ್ರತೆ ಹೇಗೆ, ಟ್ರಾಫಿಕ್ ಕಂಟ್ರೋಲ್ ಬಗ್ಗೆ ಸ್ಪಷ್ಟ ಸೂತ್ರವನ್ನು 1 ತಿಂಗಳ ಮುಂಚಿತವಾಗಿ ಪ್ಲಾನ್ ಮಾಡಲಾಗಿತ್ತು.

ವಿಐಪಿಗಳು ಬಂದು ದರ್ಶನ ಪಡೆದು ಹೋಗುವವರೆಗೆ ಮಾಡಬೇಕಿದ್ದ ಭದ್ರತಾ ವ್ಯವಸ್ಥೆ ಅಂತಿಮವಾಗಿತ್ತು. ಪ್ರಧಾನಿ ಮೋದಿ ಸೇರಿದಂತೆ ಯಾರೇ ದೊಡ್ಡ ವ್ಯಕ್ತಿಗಳು ಬಂದಿದ್ದರೂ ಒಂದಷ್ಟು ಲೋಪಕ್ಕೂ ಅವಕಾಶ ಇರಲಿಲ್ಲ. ಭದ್ರತೆಯ ಬಗ್ಗೆ ಖಾಕಿಗಳು ಮಾಡಿಕೊಂಡಿದ್ದ ಸಿದ್ಧತೆ, ವ್ಯವಸ್ಥೆ ಎಲ್ಲರ ಪ್ರಶಂಸೆಗೂ ಪಾತ್ರವಾಗಿತ್ತು. ಆದ್ರೆ ಇದೀಗ ಭೇಷ್ ಅನ್ನಿಸಿಕೊಂಡಿದ್ದ ಭದ್ರತಾ ವ್ಯವಸ್ಥೆಯ ಬಗ್ಗೆಯೇ ಶಂಕಿಸಿ ಪ್ರಧಾನಿ ದೇವರ ದರ್ಶನದಿಂದ ದೂರ ಉಳಿದಿದ್ದು, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.  ಇದನ್ನೂ ಓದಿ: ಪ್ರತಿಷ್ಠಿತ ವ್ಯಕ್ತಿಗಳ ಮದ್ವೆಗೆ ಹೋಗ್ತಾರೆ, ಶ್ರೀಗಳ ನೋಡಲು ಮೋದಿಗೆ ಬರಲು ಸಮಯವಿಲ್ಲ- ಪರಮೇಶ್ವರ್

ಶ್ರೀಗಳು ಕಾವಿ ಧರಿಸುತ್ತಿದ್ದರಿಂದ ಪೊಲೀಸರು ಆಪರೇಷನ್ ಆರೆಂಜ್ ಅಂತ ಯಾಕೆ ಹೆಸರಿಟ್ಟಿದ್ದಾರೆ. ಶ್ರೀಗಳೀಗೆ ಸಾವಿರಾರು ಭಕ್ತರಿದ್ದುದರಿಂದ ಭದ್ರೆತಯ ನಿಟ್ಟಿನಲ್ಲಿ 1 ತಿಂಗಳ ಮುಂಚಿತವಾಗಿಯೇ ಪೊಲೀಸರು ಈ ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

ಪ್ರಧಾನಿ, ರಾಷ್ಟ್ರಪತಿಗಳಿಲ್ಲದೇ ಈ ದೇಶದ 10-20 ಪ್ರಧಾನಿಗಳು ಕಾರ್ಯಕ್ರಮಕ್ಕೆ ಬರಬಹುದೆಂದು ಮೊದಲೇ ಭದ್ರತೆಗೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದರು. ಆದ್ರೆ ಮೋದಿ ಬರದೇ ಸೆಕ್ಯೂರಿಟಿ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಿರುವುದು ಸುಳ್ಳು ಎಂಬ ಮಾತುಗಳು ಪೊಲೀಸ್ ವಲಯದಲ್ಲಿ ಕೇಳಿಬರುತ್ತಿವೆ. ಪ್ರಧಾನಿಗಳ ಜೊತೆಗೆ ಬೇರೆ ದೇಶದ ಪ್ರಧಾನಿಗಳು ಬಂದಿದ್ದರೂ ಕೂಡ ನಾವು ಯಾವುದೇ ಲೋಪಗಳಿಲ್ಲದೇ ಅಚ್ಚುಕಟ್ಟಾಗಿ ಭದ್ರತೆ ಒದಗಿಸುತ್ತಿದ್ದೆವು. ಹೀಗಾಗಿ ಪ್ರಧಾನಿಯವರು ಪೊಲೀಸರ ಮೇಲೆ ಬೆರಳು ತೋರಿಸಿರುವುದು ಎಷ್ಟು ಸರಿ ಅನ್ನೋದು ಪೊಲೀಸರ ಪ್ರಶ್ನೆಯಾಗಿದೆ.

ಎರಡು ದಿನದಲ್ಲಿ ದೇವರ ದರ್ಶನಕ್ಕೆ ಸರಿಸುಮಾರು 8 ರಿಂದ 10 ಲಕ್ಷ ಜನ ಬಂದಿದ್ದರು. ಎಲ್ಲರಿಗೂ ಎಲ್ಲೂ ಅಡಚಣೆಯಾಗದಂತೆ ಕೆಲಸ ನಿರ್ವಹಿಸಿದ್ದೇವೆ ಅಂತ ಪೊಲೀಸರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ್ರೆ ಶ್ರೀಗಳ ಅಂತಿಮ ದರ್ಶನಕ್ಕೆ ಬರಬೇಕು ಎಂದು ಪ್ರಧಾನಿಗಳು ನುಣುಚಿಕೊಂಡ್ರಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಯಾಕಂದ್ರೆ ಅಂದೇ ಪ್ರಧಾನಿಗಳು ವಾರಣಾಸಿಯಲ್ಲಿ ಪ್ರವಾಸಿ ಭಾರತ್ ದಿವಸ್ ಕಾರ್ಯಕ್ರಮವಿತ್ತು. ಅಲ್ಲಿಗೆ ಪ್ರಧಾನಿ ಭೇಟಿ ನೀಡಿದ್ದರು. ಈ ವಿಚಾರ ಸಂಬಂಧ ಪ್ರಧಾನಿಗಳು ಸಾಕಷ್ಟು ಟೀಕೆಗೂ ಗುರಿಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *