Connect with us

Corona

ವಿಜ್ಞಾನಿಗಳು, ಸಂಶೋಧಕರಿಗೆ ಪ್ರಧಾನಿ ಮೋದಿ ಧನ್ಯವಾದ

Published

on

– ಭಾರತಕ್ಕೆ ಧನ್ಯವಾದಗಳು

ನವದೆಹಲಿ: ಕೋವಿಶೀಲ್ಡ್ ಮತ್ತು ದೇಶಿಯ ಲಸಿಕೆ ಕೋವ್ಯಾಕ್ಸಿನ್ ಬಳಕೆಗೆ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ (ಡಿಸಿಜಿಐ) ಷರತ್ತು ಬದ್ಧ ಅನುಮತಿ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ವಿಜ್ಞಾನಿಗಳು, ಸಂಶೋಧಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕೊರೊನಾ ಮುಕ್ತ ಆರೋಗ್ಯಕರ ಭಾರತ ಆಗಲಿದೆ ಎಂದು ಪ್ರಧಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಸೀರಮ್ ಮತ್ತು ಭಾರತ ಬಯೋಟೆಕ್ ತಯಾರಿಸಿದ ಲಸಿಕೆಗೆ ಡಿಸಿಜಿಐ ಅನುಮತಿ ನೀಡಿದ್ದು, ಇದು ಭಾರತೀಯರ ಹೆಮ್ಮೆ ಪಡುವ ದಿನವಾಗಿದೆ. ಎರಡು ಲಸಿಕೆಗಳು ಭಾರತದಲ್ಲಿಯೇ ಉತ್ಪಾದನೆಯಾಗಿದ್ದು, ಆತ್ಮನಿರ್ಭರ ಭಾರತದ ಕನಸು ನನಸಿನತ್ತದ ದೊಡ್ಡ ಹೆಜ್ಜೆ ಇದಾಗಿದೆ.

ಕೋವಿಡ್ ಸಂಕಷ್ಟ ಕಾಲದಲ್ಲಿ ಸೇವೆ ಸಲ್ಲಿಸಿದ ನಮ್ಮ ಎಲ್ಲ ವೈದ್ಯರ, ವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿ ಸೇರಿದಂತೆ ಎಲ್ಲ ಕೊರೊನಾ ವಾರಿಯರ್ ಗಳಿಗೆ ಮತ್ತೊಮ್ಮೆ ಧನ್ಯವಾದ ಸಲ್ಲಿಸುತ್ತೇನೆ. ಅನೇಕ ಜೀವಗಳನ್ನು ಉಳಿಸಿದ ನೀವು ಸದಾ ನೆನಪಿನಲ್ಲಿರುತ್ತೀರಿ ಎಂದು ಪ್ರಧಾನಿಗಳು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in