Recent News

ಗುಜರಾತ್ ಸಿಎಂ ಹುಬ್ಬಳ್ಳಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ಭದ್ರತಾ ವೈಫಲ್ಯ

ಹುಬ್ಬಳ್ಳಿ: ಗುಜರಾತ್ ಸಿಎಂ ವಿಜಯ್ ರೂಪಾನಿ ಬಂದ ವೇಳೆ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಭದ್ರತಾ ವೈಫಲ್ಯವಾಗಿದೆ. ಪೈಲೆಟ್‍ವೊಬ್ಬರು ವಿಮಾನ ನಿಲ್ದಾಣದಲ್ಲೇ ಧೂಮಪಾನ ಮಾಡಿದ್ದಾರೆ.

ಸ್ಫೋಟಕ ವಸ್ತುಗಳು ಏರ್ ಪೋರ್ಟ್ ನಲ್ಲಿ ನಿಷೇಧವಿದ್ರೂ ವಿಶೇಷ ವಿಮಾನದ ಪೈಲೆಟ್ ರಾಜಾರೋಷವಾಗಿ ಸಿಗರೇಟ್ ಸೇವನೆ ಮಾಡಿದ್ದಾರೆ. ಪೊಲೀಸರು ಇದನ್ನ ಕಂಡೂ ಕಾಣದಂತೆ ಇದ್ದರು.

ಅಲ್ಲದೆ ಗುಜರಾತ್ ಮುಖ್ಯಮಂತ್ರಿಯನ್ನು ಸ್ವಾಗತಿಸಲು ಎಲ್ಲ ಮುಖಂಡರಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಬಿಜೆಪಿ ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮೇಯರ್, ವಿಧಾನ ಪರಿಷತ್ ಸದಸ್ಯರಿಗಷ್ಟೇ ಒಳಗೆ ಪ್ರವೇಶ ನೀಡಿಲಾಗಿತ್ತು. ಇದರಿಂದ ಕೆರಳಿದ ಬಿಜೆಪಿ ಮುಖಂಡರಾದ ಉಮೇಶ ಜೋಷಿ, ಜಯತೀರ್ಥ ಕಟ್ಟಿ ಹಾಗೂ ಈರಣ್ಣ ಜಡಿ ಏರುದನಿಯಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ರು. ಕೂಡಲೇ ಬಿಜೆಪಿ ಪ್ರಭಾರಿ ಮಹೇಶ ತೆಂಗಿನಕಾಯಿ ಮಧ್ಯಪ್ರವೇಶಿಸಿದ್ರು. ಎಸಿಪಿ ದಾವೂದ್ ವಿರುದ್ಧ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ರು.

ವಿಶೇಷ ವಿಮಾನದಲ್ಲಿ ಬಂದಿಳಿದ ವಿಜಯ ರೂಪಾನಿ ಹುಬ್ಬಳ್ಳಿಯ ಏರ್‍ಪೋರ್ಟ್‍ನಲ್ಲಿ ವರದಿಗಾರರೊಂದಿಗೆ ಮಾತನಾಡಿ, ಈ ಸಾರಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುಜರಾತ್ ಚುನಾವಣೆ ಎದುರಿಸುತ್ತೇವೆ. 150 ಕ್ಕಿಂತಲೂ ಹೆಚ್ಚಿನ ಸ್ಥಾನ ಮೂಲಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತೇವೆ. ಗುಜರಾತ್‍ನಲ್ಲಿ ಸರ್ಕಾರದ ವಿರೋಧಿ ಅಲೆಯಿಲ್ಲ. ಮೋದಿಯವರನ್ನು 3 ಬಾರಿ ಸಿಎಂ ಮಾಡಿರೋದು ಗುಜರಾತ್ ಜನತೆ. ಈ ಸಾರಿಯೂ ಅತೀ ಹೆಚ್ಚಿನ ಮತಗಳನ್ನು ಬಿಜೆಪಿಗೆ ಗುಜರಾತ್ ಜನತೆ ನೀಡ್ತಾರೆ. ಪಟೇಲ್ ಸಮುದಾಯದ ಯುವ ಮುಖಂಡ ಹಾರ್ದಿಕ್ ಪಟೇಲ್ ಮೀಸಲಾತಿ ವಿಚಾರ ಬಿಜೆಪಿಗೆ ಹಿನ್ನೆಡೆಯಾಗೋದಿಲ್ಲ. ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳುತ್ತೆ ಅಂದ್ರು.

ಹಾವೇರಿಯಲ್ಲಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ರೂಪಾನಿ ಹುಬ್ಬಳ್ಳಿಯಿಂದ ರಸ್ತೆ ಮಾರ್ಗದ ಮೂಲಕ ಹಾವೇರಿಗೆ ಪ್ರಯಾಣ ಬೆಳೆಸಿದ್ರು.

Leave a Reply

Your email address will not be published. Required fields are marked *