Connect with us

International

100 ಪ್ರಯಾಣಿಕರಿದ್ದ ವಿಮಾನ ಪತನ

Published

on

ಇಸ್ಲಮಾಬಾದ್: 100 ಪ್ರಯಾಣಿಕರಿದ್ದ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ಕರಾಚಿ ವಿಮಾನ ನಿಲ್ದಾಣದ ಬಳಿ ಪತನಗೊಂಡಿದೆ.

ಈ ವಿಮಾನ ಲಾಹೋರ್ ನಿಂದ ಕರಾಚಿಗೆ ಹೊರಟಿತ್ತು. ಕರಾಚಿ ಬಳಿ ಬರುತ್ತಿದ್ದಂತೆ ವಿಮಾನ ಪತನಗೊಂಡಿದ್ದು, ದಟ್ಟ ಹೊಗೆ ಆವರಿಸಿದೆ. ವಿಮಾನದಲ್ಲಿ ನೂರು ಜನರಿದ್ದರು ಎಂದು ವರದಿಯಾಗಿದೆ.

ಕರಾಚಿಯ ರನ್ ವೇಯಲ್ಲಿ ಲ್ಯಾಂಡ್ ಆಗುವ ಒಂದು ನಿಮಿಷ ಮೊದಲು ವಿಮಾನ ಪತನವಾಗಿದೆ. ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಕಾರ, ಲಾಹೋರ್ ನಿಂದ ಹೊರಟಿದ್ದ ಪಿಕೆ-303 ಕರಾಚಿಯಲ್ಲಿ ಲ್ಯಾಂಡ್ ಆಗುವ ಮೊದಲೇ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದೆ.