ಬೆಂಗಳೂರು: ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ಗೆ (Darshan) ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನಿನ್ನೆಯಷ್ಟೇ ಹೈಕೋರ್ಟ್ನಿಂದ (High Court) ದರ್ಶನ್ಗೆ ಜಾಮೀನು (Bail) ಸಿಕ್ಕಿದೆ. ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಮುಂದಿನ ಇನ್ನೊಂದು ವಾರಗಳ ಕಾಲ ದರ್ಶನ್ಗೆ ಚಿಕಿತ್ಸೆ ಮುಂದುವರೆಯಲಿದೆ.
ಸರ್ಜರಿ ಬದಲಿಗೆ ಫಿಸಿಯೋಥೆರಪಿ, ಕನ್ಸರ್ವೇಟಿವ್ ಟ್ರೀಟ್ಮೆಂಟ್ (Conservative Treatment) ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರ ಮಾರ್ಗದರ್ಶನದಂತೆ ದರ್ಶನ್ ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಗರ್ಭಿಣಿಯರ ಹಿಂದೇಟು – ದಾಖಲಾತಿ ಪ್ರಮಾಣ ಅರ್ಧಕರ್ಧ ಇಳಿಕೆ
Advertisement
Advertisement
ಕನ್ಸರ್ವೇಟಿವ್ ಟ್ರೀಟ್ಮೆಂಟ್ ಹೇಗಿರುತ್ತೆ?
ಸರ್ಜರಿ ಮಾಡದೇ ಬೆನ್ನು ನೋವಿಗೆ ಮಾತ್ರೆ ಮತ್ತು ಔಷಧಗಳ ಮೂಲಕ ಗುಣಮುಖ ಮಾಡಲಾಗುತ್ತದೆ. ಆಪರೇಷನ್ ಮಾಡದೇ ಫಿಸಿಯೋಥೆರಪಿ, ವ್ಯಾಯಾಮಗಳನ್ನ ಮಾಡಿಸಿ ಬೆನ್ನು ನೋವನ್ನು ಕಡಿಮೆ ಮಾಡಲಾಗುತ್ತದೆ.
Advertisement
ಮಾತ್ರೆ, ಔಷಧಿಗಳ ಜೊತೆಗೆ ಕೆಲ ದಿನಗಳ ಕಾಲ ವಿಶ್ರಾಂತಿಗೆ ಅವಕಾಶ. ಆಪರೇಷನ್ ಮಾಡದೇ ಅಲ್ಟ್ರಾ ಸೌಂಡ್ ನೀಡಿ ಚಿಕಿತ್ಸೆ. ಆಪರೇಷನ್ ಮಾಡದೆಯೇ ಶಾಖ ಕೊಟ್ಟು ಚಿಕಿತ್ಸೆ ಮುಂದುವರೆಸಬಹುದು.
Advertisement