Connect with us

Latest

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 6 ರೂ. ಹೆಚ್ಚಳ ಸಾಧ್ಯತೆ

Published

on

– ಲಾಕ್‍ಡೌನ್ ನಷ್ಟ ಸರಿದೂಗಿಸಲು ಕೇಂದ್ರದ ಪ್ಲಾನ್

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 6 ರೂಪಾಯಿ ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇದಕ್ಕೂ ಮೊದಲು ಸರ್ಕಾರ ಮೇ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 10 ರೂ ಮತ್ತು ಡೀಸೆಲ್ 13 ರೂ. ಏರಿಕೆ ಮಾಡಿತ್ತು. ಇದೀಗ ಮತ್ತೊಮ್ಮೆ 3 ರಿಂದ 6 ರೂ. ಅಬಕಾರಿ ಸುಂಕ ಹೆಚ್ಚಿಸಲು ಸರ್ಕಾರದ ಮಟ್ಟದಲ್ಲಿ ಮಹತ್ವದ ಚರ್ಚೆಗಳು ನಡೆದಿರುವ ಕುರಿತು ವರದಿ ಪ್ರಕಟಿಸಿದೆ.

ಬೆಲೆ ಏರಿಕೆ ಗ್ರಾಹಕರ ಜೇಬಿಗೆ ನೇರವಾಗಿ ಕತ್ತರಿ ಹಾಕಲಿದೆ. ಲಾಕ್‍ಡೌನ್ ನಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಜನರು ಚೇತರಿಸಿಕೊಳ್ಳುವಾಗಲೇ ಕೇಂದ್ರ ಸರ್ಕಾರ ಅಬಕಾರಿ ಸುಂಕ ಏರಿಸುವ ಸಾಧ್ಯತೆಯಿದೆ.

ಅಬಕಾರಿ ಸುಂಕ ಏರಿಸಿದರೂ ಜನ ಸಾಮಾನ್ಯರಿಗೆ ಬೆಲೆ ಏರಿಕೆ ಸಮಸ್ಯೆ ಆಗಲಾರದು ಎಂಬುದು ಕೇಂದ್ರದ ಲೆಕ್ಕಾಚಾರ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ತಿಂಗಳ ಹಿಂದೆ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 45 ಡಾಲರ್(3,330 ರೂ.) ಇತ್ತು. ಈಗ ಈ ಬೆಲೆ 40 ಡಾಲರ್ ಗೆ(2,900 ರೂ.) ಇಳಿಕೆಯಾಗಿದೆ. ಹೀಗಾಗಿ ಅಬಕಾರಿ ಸುಂಕ ಏರಿಸಿದರೂ ಸದ್ಯದ ಬೆಲೆಯಲ್ಲಿ ವ್ಯತ್ಯಾಸವಾಗಲಾರದು ಎಂಬುದು ಕೇಂದ್ರದ ಲೆಕ್ಕಾಚಾರ.

2014 ಮೇ ತಿಂಗಳಿನಲ್ಲಿ ಪೆಟ್ರೋಲ್ ಮೇಲೆ 9.48 ರೂ. ಮತ್ತು ಡೀಸೆಲ್ 3.56 ರೂ. ಪ್ರತಿ ಲೀಟರ್ ಮೇಲೆ ತೆರಿಗೆ ಹೊರೆ ಬೀಳುತ್ತಿತ್ತು. ಸದ್ಯ ಪೆಟ್ರೋಲ್ ಮೇಲಿನ ತೆರಿಗೆ 32.98 ರೂ, ಡೀಸೆಲ್ 31.83 ರೂ. ಪ್ರತಿ ಲೀಟರ್ ಗೆ ತಲುಪಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆಯಿಂದಾಗಿ ಕಚ್ಚಾ ತೈಲ ಬೆಲೆ ಬೆಲೆ ಇಳಿಕೆಯಾದ್ರೂ ಸಾರ್ವಜನಿಕರಿಗೆ ಇದರ ಲಾಭ ಸಿಗುತ್ತಿಲ್ಲ.

ಟ್ಯಾಕ್ಸ್ ಹೇಗೆ ಅನ್ವಯವಾಗುತ್ತೆ?: (ಅಕ್ಟೋಬರ್ 16, 2020ರಂತೆ ಪೆಟ್ರೋಲ್ ಬೆಲೆ ಪ್ರತಿ ಲೀಟರ್)
ಮೂಲ ಬೆಲೆ – 25.32 ರೂ.
ಸಾಗಾಣಿಕಾ ವೆಚ್ಚ – 0.036 ರೂ.
ಅಬಕಾರಿ ಸುಂಕ – 32.98 ರೂ.
ಡೀಲರ್ ಕಮೀಷನ್ – 3.69 ರೂ.
ವ್ಯಾಟ್ (ಡೀಲರ್ ಕಮಿಷನ್ ಮೇಲೆ ವಿಧಿಸುವ ವ್ಯಾಟ್ ಒಳಗೊಂಡಂತೆ) – 18.71 ರೂ.
ಗ್ರಾಹಕರಿಗೆ ಮಾರಾಟ ಮಾಡುವ ಬೆಲೆ – 81.06
(25.32+0.036+32.98+3.69+18.71=81.06 ರೂ)

ಕೊರೊನಾ ಮತ್ತು ಲಾಕ್‍ಡೌನ್ ನಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಅರ್ಥ ವ್ಯವಸ್ಥೆಯ ಚೇತರಿಕೆಗಾಗಿ ಸರ್ಕಾರ ಮೂರನೇ ಬಾರಿ ವಿಶೇಷ ಪ್ಯಾಕೇಜ್ ಘೋಷಿಸಲು ಮುಂದಾಗಿದೆ. ಈ ಪ್ಯಾಕೇಜ್ ನಿಧಿ ಸಂಗ್ರಹಣೆಗೆ ಮುಂದಾಗಿರುವ ಸರ್ಕಾರದ ಮುಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಪ್ರಸ್ತಾವ ಮೊದಲ ಪುಟದಲ್ಲಿಯೇ ಇದೆ. ಈ ಹಿನ್ನೆಲೆ ತೈಲಗಳ ಮೇಲೆ ಅಬಕಾರಿ ಸುಂಕ ಹೆಚ್ಚಿಸುವುದು ಸರ್ಕಾರದ ಮೊದಲ ಆಯ್ಕೆಯಾಗಿದೆ ಎಂದು ಮಾಧ್ಯಮ ಪ್ರಕಟಿಸಿದೆ.

Click to comment

Leave a Reply

Your email address will not be published. Required fields are marked *