Saturday, 16th February 2019

ಇಂಟರ್ವ್ಯೂ ಭಾಗವಾಗಿ ಡೇಟಿಂಗ್ ಮಾಡಬೇಕು, ರೆಸಾರ್ಟ್ ನಲ್ಲಿ ರೂಮ್ ಬುಕ್ ಮಾಡು ಎಂದವನು ಅರೆಸ್ಟ್!

ಬೆಂಗಳೂರು: ಉದ್ಯೋಗ ಕೊಡಿಸುವ ನೆಪದಲ್ಲಿ ಅಶ್ಲೀಲವಾಗಿ ಸಂಭಾಷಣೆ ನಡೆಸುತ್ತಿದ್ದ ಆರೋಪಿಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಅನಂತ್ ಹೆಬ್ಬಾರ್ ಅಲಿಯಾಸ್ ಮಹೇಶ್ ರಾವ್ ಬಂಧಿತ ಆರೋಪಿ. ಅನಂತ್ ಫೇಸ್‍ಬುಕ್ ಹೆಚ್ ಆರ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದ. ನೌಕರಿ. ಕಾಮ್ ನಲ್ಲಿ ಉದ್ಯೋಗ ಅರಸಿ ರೆಸ್ಯೂಮ್ ಅಪ್ಲೋಡ್ ಮಾಡುತ್ತಿದ್ದ ಯುವತಿಯನ್ನು ಟಾರ್ಗೆಟ್ ಮಾಡುತ್ತಿದ್ದ.

ಆರೋಪಿ ಒಮ್ಮೊಮ್ಮೆ ಗಂಡಸು ಇನ್ನೂ ಕೆಲವೊಮ್ಮೆ ಹೆಂಗಸಿನ ಧ್ವನಿಯಲ್ಲಿ ಮಾತನಾಡ್ತಿದ್ದನು. ಅಲ್ಲದೇ ದೂರುದಾರ ಮಹಿಳೆಗೆ ಡೇಟಿಂಗ್ ಮಾಡಬೇಕು ಎಂದಿದ್ದ. ಇಂಟರ್ವ್ಯೂ ಭಾಗವಾಗಿ ಡೇಟಿಂಗ್ ಸಹ ಮಾಡಬೇಕು ಎಂದಿದ್ದ. ಇದಕ್ಕಾಗಿ ರೆಸಾರ್ಟ್ ನಲ್ಲಿ ರೂಮ್ ಬುಕ್ ಮಾಡುವಂತೆ ಮಹಿಳೆಗೆ ಆರೋಪಿ ಅನಂತ್ ಹೇಳಿದ್ದನು.

ಅನುಮಾನಗೊಂಡ ಮಹಿಳೆಯಿಂದ ಸೈಬರ್ ಕ್ರೈಂ ಠಾಣೆಗೆ ದೂರು ದಾಖಲಿಸಿದ್ದಾರೆ. ಆರೋಪಿ 2017 ರಲ್ಲಿ ಯಶವಂತಪುರ ಪೊಲೀಸರಿಂದ ಬಂಧಿತನಾಗಿದ್ದ.

Leave a Reply

Your email address will not be published. Required fields are marked *