Tuesday, 17th September 2019

Recent News

ಡಬ್ಬಿಂಗ್ ಬೇಕೋ ಬೇಡ್ವೋ ಜನರೇ ತೀರ್ಮಾನ ಮಾಡ್ತಾರೆ: ನಟ ಶಿವರಾಜ್‍ಕುಮಾರ್

ಬೆಂಗಳೂರು: ಡಬ್ಬಿಂಗ್ ಬೇಕೋ ಬೇಡವೋ ಅಂತ ಜನ ನಿರ್ಧಾರ ಮಾಡ್ತಾರೆ. ಡಬ್ಬಿಂಗ್ ಬೇಡ ಅನ್ನೋಕೆ ನನ್ಯಾರು? ಕನ್ನಡಿಗರು ಹುಲಿಗಳು. ಕನ್ನಡ ಜನರಲ್ಲಿ ಜಾಗೃತಿ ಮೂಡಿಸುವುದು ಬೇಡ, ಅವರಿಗೆ ಎಲ್ಲ ಗೊತ್ತಿದೆ ಅಂತ ನಟ ಶಿವರಾಜ್‍ಕುಮಾರ್ ಹೇಳಿದ್ದಾರೆ.

ಕನ್ನಡದ ಜನತೆ ಡಬ್ಬಿಂಗ್ ವಿರೋಧಿಸಿದ್ದಾರೆ. ಕಳೆದ ವಾರ ತೆರೆಕಂಡ ತಮಿಳಿನ ಕನ್ನಡ ಡಬ್ಬಿಂಗ್ ಚಿತ್ರವನ್ನ ಯಾರೂ ನೋಡಿಲ್ಲ. ಇದರಿಂದ ಪ್ರೇಕ್ಷಕರ ಅಭಿಪ್ರಾಯ ಡಬ್ಬಿಂಗ್ ಬೇಡವೆಂದಿದ್ದಾರೆ. ಇದೇ ಅಭಿಪ್ರಾಯ ಮುಂದುವರೆಯಬೇಕು. ಆಗ ಯಾವ ಡಬ್ಬಿಂಗ್ ಚಿತ್ರವೂ ಬರುವುದಿಲ್ಲ. ವೈಯಕ್ತಿಕವಾಗಿ ನಾನು ಡಬ್ಬಿಂಗ್ ವಿರೋಧಿಸುತ್ತೇನೆ. ಅದ್ರೆ ಜನರ ಅಭಿಪ್ರಾಯ ಮುಖ್ಯ. ಕನ್ನಡತನ ಅನ್ನೋದು ಎಲ್ಲರಲ್ಲೂ ಬರಬೇಕು ಅಂತ ಶಿವಣ್ಣ ಹೇಳಿದ್ರು.

ಇಂದು ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಶಿವಣ್ಣ, ಡಬ್ಬಿಂಗ್ ವಿರುದ್ಧ ಪ್ರತಿಭಟನೆ ಇವತ್ತಿಂದ ನಡೆಯುತ್ತಿಲ್ಲ. ಜನರೇ ಡಬ್ಬಿಂಗ್ ಬೇಡ ಅಂತ ಅಂದ್ಮೇಲೆ ಪ್ರತಿಭಟನೆ ಯಾಕೆ? ಜನರೊಂದಿಗೆ ನಾವ್ ಇರ್ತೀವಿ ಅಂತ ತಿಳಿಸಿದ್ರು.

ಇಂದು ಡಬ್ಬಿಂಗ್ ವಿರುದ್ದ ಪ್ರತಿಭಟನೇ ಮಾಡಲು ವಾಟಾಳ್ ನಾಗರಾಜ್ ಸಾರಥ್ಯದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಮಾಡಲು ವೇದಿಕೆ ಸಜ್ಜಾಗಿದೆ. ಮೈಸೂರ್ ಬ್ಯಾಂಕ್ ಸರ್ಕಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಡಬ್ಬಿಂಗ್ ವಿರುದ್ದ ಜಾಥವನ್ನ ಹಮ್ಮಿಕೊಳ್ಳಲಾಗಿದೆ. ಜ್ಞಾನಜ್ಯೋತಿ ಸಂಭಾಂಗಣದಲ್ಲಿ ಕಿರುತೆರೆ ಹಾಗೂ ಹಿರಿತೆರೆಯ ಎಲ್ಲಾ ಕಲಾವಿದರು ಒಟ್ಟಾಗಿ ಸೇರಿ ಜಾಥಾಗೆ ಸಾಥ್ ನೀಡಲಿದ್ದಾರೆ.

Leave a Reply

Your email address will not be published. Required fields are marked *