ಮೈಸೂರು: ಇಂದು ಆಷಾಢ ಮಾಸದ ಮೂರನೇ ಶುಕ್ರವಾರ. ಇದರ ಜೊತೆಗೆ ಚಾಮುಂಡಿ ತಾಯಿಯ ವರ್ಧಂತಿ ಅರ್ಥಾತ್ ಹುಟ್ಟುಹಬ್ಬ. ಆದ್ದರಿಂದ ನಾಡದೇವಿ ಚಾಮುಂಡಿಗೆ ವರ್ಧಂತಿ ಉತ್ಸವ ನಡೆಯುತ್ತಿದೆ.
ವರ್ಧಂತಿ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರವೇ ಹರಿದಿದೆ. ಪ್ರಾತಃಕಾಲದಿಂದಲೇ ವಿವಿಧ ಅಭಿಷೇಕ ಮತ್ತು ಪೂಜೆಗಳು ನಡೆದಿವೆ. ಬೆಳಗ್ಗೆ 9.30 ಕ್ಕೆ ಮಹಾಮಂಗಳಾರತಿ ನೆರವೇರಿದ್ದು, 10.25ಕ್ಕೆ ಚಾಮುಂಡಿ ದೇವಿಯ ಚಿನ್ನದ ಪಲ್ಲಕ್ಕಿ ಉತ್ಸವ ಪ್ರಾರಂಭವಾಗಿದೆ. ಈ ವರ್ಧಂತಿ ಉತ್ಸವದಲ್ಲಿ ಯದುವಂಶದ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಭಾಗಿಯಾಗಿದ್ದು. ಅಲ್ಲದೆ ಸಾವಿರಾರು ಭಕ್ತರು ಆಗಮಿಸಿ ಈ ಕ್ಷಣವನ್ನ ಕಣ್ತುಂಬಿಕೊಂಡರು.
Advertisement
ಪ್ರತಿ ಆಷಾಢ ಶುಕ್ರವಾರಕ್ಕಿಂತ ಇಂದು ಹೆಚ್ಚಿನ ಭಕ್ತರು ಬೆಟ್ಟದಲ್ಲಿ ಸೇರಿದ್ದಾರೆ. ಚಾಮುಂಡಿ ದೇವಾಲಯದಲ್ಲಿ ವಿವಿಧ ರೀತಿ ಪುಷ್ಪಗಳಿಂದ ದೇವಾಸ್ಥಾನವನ್ನು ಅಲಂಕಾರ ಮಾಡಲಾಗಿದೆ. ಹೂವಿನ ಅಲಂಕಾರ ಭಕ್ತರನ್ನು ಹೆಚ್ಚು ಆಕರ್ಷಿಸುತ್ತಿದೆ. ಚಾಮುಂಡಿ ವರ್ಧಂತಿ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ದೇವಿಯ ಚಿನ್ನದ ಫಲ್ಲಕ್ಕಿ ಉತ್ಸವ ಅದ್ಧೂರಿಯಿಂದ ನೆರವೇರಿದೆ.