ಮೋದಿಯವರ ಅಚ್ಛೇ ದಿನ್ ಇನ್ನೂ ಪರಿಣಾಮಕಾರಿ ಆಗಬೇಕಿದೆ: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ - Public TV
Connect with us

ಮೋದಿಯವರ ಅಚ್ಛೇ ದಿನ್ ಇನ್ನೂ ಪರಿಣಾಮಕಾರಿ ಆಗಬೇಕಿದೆ: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

ಮೋದಿಯವರ ಅಚ್ಛೇ ದಿನ್ ಇನ್ನೂ ಪರಿಣಾಮಕಾರಿ ಆಗಬೇಕಿದೆ: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

ರಾಯಚೂರು: ನರೇಂದ್ರ ಮೋದಿಯವರ ಸರ್ಕಾರ ಬಂದು ನಾಲ್ಕು ವರ್ಷವಾದರು, ಚುನಾವಣೆ ಪೂರ್ವದಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು ತರುವುದಾಗಿ ಭರವಸೆ ನೀಡಿ ಈಡೇರಿಸಿಲ್ಲ ಎಂದು ಮಂತ್ರಾಲಯದಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೋದಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಆರ್ಥಿಕತೆ ಸುಧಾರಣೆಯನ್ನು ಹೆಚ್ಚು ಮಾಡುವುದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಮಾಡಿದ್ದಾರೆ. ಅಲ್ಲದೇ ಶ್ರೀಮಂತರಿಗೂ ಭ್ರಷ್ಟಾಚಾರ ಮಾಡಲಾಗದಂತಹ ಸನ್ನಿವೇಶವನ್ನು ನಿರ್ಮಿಸಿದ್ದಾರೆ. ಆದರೆ ಅಚ್ಚೆದಿನ್ ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ. ಈ ಕಾರ್ಯವನ್ನು ಬೇಗ ಮಾಡಲಿ ಎಂಬ ಉದ್ದೇಶದಿಂದ ಹೇಳಿದ್ದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ನಡೆದ ಚಂದ್ರಿಕಾ ತಾತ್ಪರ್ಯ ಮಂಗಳೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಶ್ರೀಗಳು, ಗಂಗಾ ನದಿಯು ಎಷ್ಟೋ ಜನರ ಜೀವ ನದಿಯಾಗಿದೆ. ಆದ್ರೆ ಪವಿತ್ರ ನದಿ ಕಲುಷಿತಗೊಂಡಿದೆ. ಚುನಾವಣಾ ಪೂರ್ವದಲ್ಲಿ ಗಂಗಾ ನದಿಯನ್ನು ಶುದ್ಧೀಕರಿಸಲಾಗುವುದು ಮೋದಿ ಭರವಸೆ ನೀಡಿದರು. ಆದರೆ ಅದು ಸಹ ಸಂಪೂರ್ಣವಾಗಿ ಈಡೇರಿಲ್ಲ. ಇನ್ನು ಉಳಿದಿರೋದು ಒಂದು ವರ್ಷ ಮಾತ್ರ ನೀಡಿರುವ ಭರವಸೆಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಲಿ ಎಂಬ ಹೇಳಿದರು.

ಆದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಗೆಲ್ಲುವುದಿಲ್ಲ ಎನ್ನಲಾಗದು, ಆದರೆ ಮೋದಿಯವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿರುವುದನ್ನು ಜನರು ತಿಳಿದಿದ್ದಾರೆ. ಜನ ತಮ್ಮ ಮತಗಳು ಯಾವ ಪಕ್ಷಕ್ಕೆಂದು ಮತದಾರರ ಮನಸ್ಸಿನ ಮೇಲಿದೆ ಎಂದರು.

ಇದೇ ವೇಳೆ ಇಫ್ತೀಯಾರ್ ಕೂಟದ ಬಗ್ಗೆ ಮಾಹಿತಿ ನೀಡಿದ ಅವರು, ಜೂ.13ಕ್ಕೆ ಉಡುಪಿ ಮಠದಲ್ಲಿ ಇಫ್ತೀಯಾರ್ ಕೂಟ ಆಯೋಜನೆಯ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಈ ಯೋಜನೆಯ ಬಗ್ಗೆ ಯಾವುದೇ ರೀತಿಯ ಮಠದ ವಿರೋಧವಿಲ್ಲ ಆದರೆ ಮುಸ್ಲಿಂರಲ್ಲಿಯೇ ಸಂಕೋಚವಿದೆ. ಆದರೆ ಮುಸ್ಲಿಮರು ಒಪ್ಪಿಗೆ ನೀಡಿದರೆ ಈ ವರ್ಷವು ಈ ಕಾರ್ಯ ಮಾಡುತ್ತೇನೆ. ಒಳ್ಳೆ ಕಾರ್ಯ ಮಾಡಲು ವಿರೋಧ ವಿದ್ದರು ಮಾಡಬಹುದು ಎಂದು ತಿಳಿಸಿದರು. ಇದನ್ನು ಓದಿ: ಮುಸ್ಲಿಮರು ಒಪ್ಪಿದ್ರೆ ಈ ಬಾರಿಯೂ ಇಫ್ತಾರ್ ಕೂಟ- ವಿಶ್ವೇಶತೀರ್ಥ ಸ್ವಾಮೀಜಿ

Advertisement
Advertisement