Monday, 22nd April 2019

Recent News

ಹಿಂದೂ ಧರ್ಮದ ಪ್ರಚಾರ ನನ್ನ ಕೆಲ್ಸ, ರಾಜಕೀಯ ಗೊತ್ತಾಗಲ್ಲ: ಪೇಜಾವರ ಶ್ರೀ

ಕೊಪ್ಪಳ: ಹಿಂದೂ ಧರ್ಮದ ಬಗ್ಗೆ ಪ್ರಚಾರ ಮಾಡುವದು ನನ್ನ ಕೆಲಸ ನನಗೆ ರಾಜಕೀಯ ಗೊತ್ತಾಗಲ್ಲ ಎಂದ ಪೇಜಾವರ ಶ್ರೀಗಳು ಹೇಳಿದ್ದಾರೆ.

ಗಂಗಾವತಿಯ ಅನೆಗುಂದಿ ಬಳಿ ಇರುವ ನವ ವೃಂದಾವನಕ್ಕೆ ಆಗಮಿಸಿದ್ದ ಶ್ರೀಗಳು ಮಾಧ್ಯಮಗಳೊಂದಿಗೆ ಮಾತನಾಡಿದರು. ಸದ್ಯದ ಚುನಾವಣೆಯಿಂದ ನಾನು ತಟಸ್ಥನಾಗಿದ್ದೇನೆ. ಎಲ್ಲ ಪಕ್ಷದಲ್ಲೂ ನನ್ನ ಶಿಷ್ಯರಿದ್ದಾರೆ. ನಾನು ರಾಜಕೀಯ ಬಿಟ್ಟಿದ್ದೇನೆ, ಕೇಳಿದರೆ ಮಾತ್ರ ಸಲಹೆ ಕೊಡುತ್ತೇನೆ ಎಂದರು.

ಇದೇ ವೇಳೆ ಮಾಧ್ಯಮಗಳ ಕುಟುಂಬ ರಾಜಕಾರಣದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಎಲ್ಲಾ ಪಕ್ಷದಲ್ಲೂ ಕುಟುಂಬ ರಾಜಕರಾಣ ಇದೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ ಎಂದರು. ಅಲ್ಲದೇ ಮೋದಿಯವರು ಕರ್ನಾಟಕದಿಂದ ಸ್ಪರ್ಧೆ ಮಾಡುವುದು ಪಕ್ಷದ ವಿಷಯ. ಚುನಾವಣೆ ಸಮಯ ಇರುವುದಿರಂದ ರಾಜಕೀಯವಾಗಿ ನನ್ನ ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಹಿಂದೂ ಧರ್ಮದ ಬಗ್ಗೆ ಪ್ರಚಾರ ಮಾಡುವದು ನನ್ನ ಕೆಲಸ. ನನಗೆ ರಾಜಕೀಯ ಗೊತ್ತಾಗಲ್ಲ. ದೇಶದ ಹಿತ, ದೇಶದ ಅಭಿವೃದ್ಧಿ ಮುಖ್ಯ ಎಂದು ತಿಳಿಸಿದರು.

Leave a Reply

Your email address will not be published. Required fields are marked *