Connect with us

Bengaluru City

ಮೊದಲ ಮಗುವಿನ ನಿರೀಕ್ಷೆಯಲ್ಲಿ ಪವನ್ ಒಡೆಯರ್ ದಂಪತಿ – ಫೋಟೋಶೂಟ್

Published

on

ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ದಂಪತಿ ಗುಡ್‍ನ್ಯೂಸ್ ಕೊಟ್ಟಿದ್ದು, ಶೀಫ್ರದಲ್ಲೇ ತಂದೆ-ತಾಯಿಯಾಗುತ್ತಿದ್ದಾರೆ.

ಹೌದು..ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರವನ್ನು ಪವನ್ ಒಡೆಯರ್ ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ. ಅಲ್ಲದೇ ಅಪೇಕ್ಷಾ ಪುರೋಹಿತ್ ಗರ್ಭಿಣಿ ಫೋಟೋಶೂಟ್ ಮಾಡಿಸಿದ್ದಾರೆ. ಪತ್ನಿಯ ಜೊತೆ ಪವನ್ ಒಡೆಯರ್ ಕೂಡ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ವಿವಿಧ ರೀತಿಯಲ್ಲಿ ದಂಪತಿ ಫೋಟೋಶೂಟ್ ಮಾಡಿದ್ದು, ಇಬ್ಬರು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಈ ಫೋಟೋವನ್ನು ಪವನ್ ಅವರು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದು, “ಸದಾ ವಟ ವಟ ಮಾತನಾಡುವ ನಾನು. ಮೌನಿಯಾದ ಕ್ಷಣಗಳು. ಹೌದು ನಮ್ಮ ಜೀವನದ ಅತ್ಯಂತ ಸುಂದರ ದಿನಗಳಿಗಾಗಿ ಹಾತೊರೆಯುತ್ತಿದ್ದೇವೆ. ಮಾತುಗಳಲ್ಲಿ ಆ ಖುಷಿ ಹೇಳಲಾಗದೆ. ಹಾಡಿನ ರೂಪದಲ್ಲಿ ವ್ಯಕ್ತಪಡಿಸುವ ಪ್ರಯತ್ನ ಮಾಡಿದ್ದೇವೆ. ಆ ಮುಗುಳುನಗೆ ಹಾಡಿಗಾಗಿ ನಿರೀಕ್ಷಿಸಿ” ಎಂದು ಬರೆದುಕೊಂಡಿದ್ದಾರೆ.

ಪವನ್ ಒಡೆಯರ್ ಹಾಡಿನ ಮೂಲಕ ತಾವು ತಂದೆಯಾಗುತ್ತಿರುವ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶೀಫ್ರದಲ್ಲೇ ಹಾಡನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಪವನ್ ಒಡೆಯರ್ ಫೋಟೋ ಅಪ್ಲೋಡ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

ಪವನ್ ಒಡೆಯರ್ ಮತ್ತು ನಟಿ ಅಪೇಕ್ಷಾ ಅವರು 2018ರ ಮೇ 20ರಂದು ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ್ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.

ಅಪೇಕ್ಷಾ ಪುರೋಹಿತ್ ಬಾಗಲಕೋಟೆಯ ಮೂಲದವರಾಗಿದ್ದು, ಕನ್ನಡದ ಕಿರುತೆರೆ ನಟಿಯಾಗಿ ‘ತ್ರಿವೇಣಿ ಸಂಗಮ’, ‘ಕಿನ್ನರಿ’, ‘ಸಾಗುತ ದೂರ ದೂರ’ ‘ಮರಳಿ ಬಂದಳು ಸೀತೆ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ಟಿಎನ್ ಸೀತಾರಾಮ್ ಅವರ ‘ಕಾಫೀ ತೋಟ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು.

ನಿರ್ದೇಶಕ ಪವನ್ ಒಡೆಯರ್ ‘ರಣವಿಕ್ರಮ’, ‘ನಟರಾಜ ಸರ್ವಿಸ್’, ‘ಗೂಗ್ಲಿ’, ‘ಗೋವಿಂದಾಯ ನಮಃ’ ಹಾಗೂ ‘ನಟ ಸಾರ್ವಭೌಮ’ ಸಿನಿಮಾಗಳನ್ನು ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *