ಪವನ್ ಕಲ್ಯಾಣ್ ಒಂದು ಕೂದಲು ಸಹ ಕೀಳಲಾರ: ನಟಿ ರೋಜಾ ವಿವಾದಿತ ಮಾತು

Advertisements

ಟ ಪವನ್ ಕಲ್ಯಾಣ್ ಬಗ್ಗೆ ಆಡಿದ ಮಾತಿನಿಂದಾಗಿ ನಟಿ ರೋಜಾ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದಾರೆ. ಇದು ಸಿನಿಮಾ ಸಂಬಂಧಿ ವಿಚಾರವಲ್ಲವಾದರೂ, ರೋಜಾ ಆ ರೀತಿಯಲ್ಲಿ ಮಾತನಾಡಬಾರದಿತ್ತು ಎನ್ನುವ ಮಾತು ತೆಲುಗು ಸಿನಿಮಾ ರಂಗದಲ್ಲಿ ಕೇಳಿ ಬಂದಿದೆ. ಅಷ್ಟಕ್ಕೂ ರಾಜಕಾರಣಿಯಾಗಿ ರೋಜಾ ಮಾತನಾಡಿದ್ದರೂ, ಕೀಳುಮಟ್ಟದ ಭಾಷೆಯಲ್ಲಿ ಒಬ್ಬ ಹೆಸರಾಂತ ನಟನನ್ನು ಜರಿಯುವುದು ಸರಿ ಅಲ್ಲ ಎಂದು ಹಲವರು ಕಿವಿ ಮಾತು ಕೂಡ ಹೇಳಿದ್ದಾರೆ.

Advertisements

ಜಗನ್ ಸರಕಾರದ ವಿರುದ್ಧ ಪವನ್ ಕಲ್ಯಾಣ್ ತೊಡೆತಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ರೋಜಾ, ‘ಜಗನ್ ವಿಚಾರದಲ್ಲಿ ಪವನ್ ಕಲ್ಯಾಣ್ ಒಂದು ಕೂದಲನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಮುಂದುವರೆದು ಮಾತನಾಡಿದ ಅವರು, ‘ಏನೇ ಅರಚಾಡಿದರೂ ಜಗನ್ ಅವರನ್ನು ಏನೂ ಮಾಡಲು ಆಗುವುದಿಲ್ಲ. ಪವನ್ ಕಲ್ಯಾಣ್ ಅವರು ನಾಲಿಗೆಯನ್ನು ಹಿಡಿದಿಟ್ಟುಕೊಂಡು ಮಾತನಾಡಬೇಕು. ಜಗನ್ ಅವರನ್ನು ಮುಟ್ಟುವುದಲ್ಲ, ಅವರ ಕಾಲಿನ ಕಿರುಬೆರಳಿನಲ್ಲಿರುವ ಕೂದಲನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ ರೋಜಾ. ಇದನ್ನೂ ಓದಿ: ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಔಟ್

Advertisements

ಇಪ್ಪಟಂ ಗ್ರಾಮದಲ್ಲಿ ಹಾದು ಹೋಗಿರುವ ಹೈವೆ ಸಂಬಂಧಿಸಿದ ವಿಚಾರವಾಗಿ ಪವನ್ ಗರಂ ಆಗಿದ್ದಾರೆ. ಆ ಗ್ರಾಮದ ರೈತರ ಪರವಾಗಿ ನಿರಂತರ ಹೋರಾಟ ಮಾಡುತ್ತಲೇ ಇದ್ದಾರೆ. ಈ ಹೋರಾಟ ಜಗನ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಶಾಸಕಿ ಆಗಿರುವ ರೋಜಾ, ತಮ್ಮ ಸರಕಾರದ ಬಗ್ಗೆ ಸಲ್ಲದ ಆರೋಪವನ್ನು ಪವನ್ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅಂತಹ ಮಾತುಗಳನ್ನು ಆಡಿದ್ದಾರೆ.

Live Tv

Advertisements