Sunday, 18th August 2019

ರೈಲಿನಲ್ಲಿ ಪೋರ್ನ್ ಆಡಿಯೋ ಕೇಳಿ ಶಾಕ್ ಆದ ಪ್ರಯಾಣಿಕರು: ವಿಡಿಯೋ ವೈರಲ್

ಲಂಡನ್: ರೈಲಿನಲ್ಲಿ ಆಕಸ್ಮಿಕವಾಗಿ ಪೋರ್ನ್ ಆಡಿಯೋ ಪ್ರಸಾರವಾಗಿದ್ದು, ಇದನ್ನು ಕೇಳಿದ ಪ್ರಯಾಣಿಕರು ಒಂದು ಕ್ಷಣ ಶಾಕ್ ಆದ ಘಟನೆ ದಕ್ಷಿಣ ಲಂಡನ್‍ನಲ್ಲಿ ನಡೆದಿದೆ.

ರೈಲಿನ ಚಾಲಕ ಆಕಸ್ಮಿಕವಾಗಿ ಸೌಂಡ್ ಸಿಸ್ಟಮ್‍ನಲ್ಲಿ ಪೋರ್ನ್ ಆಡಿಯೋವನ್ನು ಪ್ರಸಾರ ಮಾಡಿದ್ದಾನೆ. ಈ ಆಡಿಯೋ ಕೇಳಿದ ಕೆಲವು ಪ್ರಯಾಣಿಕರು ಕನ್ಫೂಸ್ ಆಗಿ ನಗುವುದಕ್ಕೆ ಶುರು ಮಾಡಿದ್ದರು. ಮತ್ತೆ ಕೆಲವು ಪ್ರಯಾಣಿಕರು ಮುಜುಗರಕ್ಕೆ ಒಳಗಾದರು.

ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಾದ ಪಾಲ್ ಬರ್ಟನ್ ಪೋರ್ನ್ ಆಡಿಯೋವನ್ನು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೆ ಆ ಆಡಿಯೋ ಇರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಆಡಿಯೋ ಪ್ರಸಾರವಾಗುತ್ತಿದ್ದಂತೆ ರೈಲಿನಲ್ಲಿ ಇದ್ದ ಪ್ರಯಾಣಿಕರು ನಗಲು ಶುರು ಮಾಡಿದ್ದಾರೆ. ಪೋಲ್ ಈ ವಿಡಿಯೋವನ್ನು ಟ್ವೀಟ್ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅಲ್ಲದೆ ಈ ವಿಡಿಯೋಗೆ 56 ಸಾವಿರಕ್ಕೂ ಕ್ಕೂ ಹೆಚ್ಚು ಲೈಕ್ಸ್, 14,500ಕ್ಕೂ ಹೆಚ್ಚು ರೀ-ಟ್ವೀಟ್ ಆಗಿದೆ.

Leave a Reply

Your email address will not be published. Required fields are marked *