ಮುಂಬೈ: ಡಿಸೆಂಬರ್ 2 ಮತ್ತು 3ರಂದು ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ವಿದೇಶಿ ಬಾಯ್ ನಿಕ್ ಜೋನ್ಸ್ ರನ್ನು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಹಿಂದೂ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಪ್ರಿಯಾಂಕ ಸೋದರಿ ಪರಿಣೀತಿ ಚೋಪ್ರಾ ಅವರು ಬಾವನ ಶೂ ಕದ್ದು, ಬಳಿಕ ಬರೋಬ್ಬರಿ 37 ಕೋಟಿ ರೂ. ನೀಡಬೇಕೆಂದು ಬೇಡಿಕೆಯಿಟ್ಟಿದ್ದಾರೆ.
ಹೌದು. ಮದುವೆಯಲ್ಲಿ ವಧುವಿನ ಸೋದರಿಯರು ವರನ ಶೂಗಳನ್ನು ಬಚ್ಚಿಟ್ಟು, ಆತನಿಂದ ಹಣ ಪಡೆದುಕೊಳ್ಳುವುದು ಭಾರತದ ಮದುವೆಗಳಲ್ಲಿ ನಡೆಯುವ ಸಂಪ್ರದಾಯವಾಗಿದೆ. ಅದೇ ರೀತಿ ಪರಿಣೀತಿ ಸಹ ಬಾವ ನಿಕ್ ಶೂ ಬಚ್ಚಿಟ್ಟಿದ್ದರಂತೆ. ಶೂ ಸಿಗದೇ ಇದ್ದಾಗ ನಿಕ್, ನೇರವಾಗಿ ಪರಿಣೀತಿ ಬಳಿ ಬಂದು ಕೇಳಿದ್ದಾರೆ. ಈ ವೇಳೆ ಪರಿಣೀತಿ ನಿಮಗೆ ಶೂ ಬೇಕೆಂದರೆ ನನಗೆ 37 ಕೋಟಿ ಬೇಕೆಂದು ಹಠ ಹಿಡಿದಿದ್ದರಂತೆ.
Advertisement
Bride. Groom. Bridesmaids. Groomsmen. ???? pic.twitter.com/iJJQFM1aDO
— Parineeti Chopra (@ParineetiChopra) December 5, 2018
Advertisement
ಕೊನೆಗೆ ನಿಕ್ ಸ್ನೇಹಿತರು ಮತ್ತು ಬಂಧುಗಳು 5 ಲಕ್ಷ ರೂ. ನೀಡುತ್ತೇವೆ ಅಂತಾ ಹೇಳಿದಾಗ ಪರಿಣೀತಿ ಬಚ್ಚಿಟ್ಟ ಶೂ ಕೊಟ್ಟಿದ್ದಾರೆ. ಬಹು ದಿನಗಳ ಗೆಳೆಯ ನಿಕ್ ರನ್ನು ವರಿಸಿರುವ ಪ್ರಿಯಾಂಕ ಜೋಧ್ಪುರದ ಉಮೈದ್ ಭವನದಲ್ಲಿ ಮದುವೆ ಆಗಿದ್ದಾರೆ. ಭಾರತೀಯ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ನಿಕ್ ಕುಟುಂಬಸ್ಥರು ಫುಲ್ ಎಂಜಾಯ್ ಮಾಡಿರೋದನ್ನು ಬಿಡುಗಡೆ ಆಗಿರುವ ಫೋಟೋಗಳು ಹೇಳುತ್ತಿವೆ.
Advertisement
ಪ್ರಿಯಾಂಕ ಮತ್ತು ನಿಕ್ ಮದುವೆಗೆ ಕೇವಲ ಎರಡು ಕುಟುಂಬಗಳ ಬಂಧುಗಳು ಮತ್ತು ಆಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತು. ಆರತಕ್ಷತೆಯಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಿ ನವದಂಪತಿಗೆ ಶುಭಕೋರಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರ ಆರತಕ್ಷತೆಗೂ ಮೋದಿಜೀ ಆಗಮಿಸಿದ್ದು, ಇಬ್ಬರೂ ತಾರೆಯರಿಗೆ ಮದುವೆ ಶುಭಾಶಯ ತಿಳಿಸಿದ್ದರು.
Advertisement
To all those speculating the joota hiding money – you know nothing!! ☺️☺️☺️ All I can say is – you’re wrong!!!!! Haha. Nick was MORE THAN CRAZY HUGELY MADLY GENEROUS! No words. Still reeling. Phew. ❤️ He shocked us. Whatta playa!!! @nickjonas
— Parineeti Chopra (@ParineetiChopra) December 4, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv