Connect with us

Chamarajanagar

50 ಲಕ್ಷ ಮೌಲ್ಯದ ಪಾನ್ ಮಸಾಲ ದರೋಡೆ- ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್

Published

on

ಚಾಮರಾಜನಗರ: ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಪಾನ್ ಮಸಾಲವನ್ನು ಆರೋಪಿಗಳು ದರೋಡೆ ಮಾಡಿದ್ದು, ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಪ್ರಕರಣ ಬೇಧಿಸಿದ್ದಾರೆ.

ಚಾಮರಾಜನಗರದ ಪೂರ್ವ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜಿಲ್ಲೆಯ ಗಡಿಭಾಗದಲ್ಲಿರುವ ಕೋಳಿಪಾಳ್ಯ ಗ್ರಾಮದಲ್ಲಿ ಬವರಲಾಲ್ ಅವರಿಗೆ ಸೇರಿದ ಗೋದಾಮುಗಳಲ್ಲಿನ ಪಾನ್ ಮಸಾಲಾ ದರೋಡೆ ಮಾಡಲಾಗಿತ್ತು. ಸಿಬ್ಬಂದಿಯನ್ನು ಬೆದರಿಸಿ 12 ಮಂದಿ ಇದ್ದ ತಂಡ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಪಾನ್ ಮಸಲಾವನ್ನು ದೋಚಿತ್ತು.

ದೋಚಿದ್ದ ಪಾನ್ ಮಸಾಲವನ್ನು ಗೂಡ್ಸ್ ವಾಹನಗಳಲ್ಲಿ ಸಾಗಿಸಲಾಗಿತ್ತು. ದರೋಡೆಯಾದ ವಿಷಯ ಗೊತ್ತಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಚಾಮರಾಜನಗರ ಪೂರ್ವಗ್ರಾಮಾಂತರ ಪೊಲೀಸರು ಹರದನಹಳ್ಳಿ ಬಳಿ ಹೊಂಚು ಹಾಕಿ ಪಾನ್ ಮಸಾಲ ಸಾಗಿಸುತ್ತಿದ್ದ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡು ತಿರುಪೂರು ಜಿಲ್ಲೆಯ ಧರ್ಮಪುರಿ ತಾಲೂಕಿನ ಅಬುತಲ್ಲಾ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಉಳಿದ 11 ಮಂದಿ ಪರಾರಿಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in