Connect with us

Latest

ಪುಲ್ವಾಮಾ ದಾಳಿಯ 3 ದಿನಗಳ ಬಳಿಕ ಪಾಕ್ ಸರ್ಕಾರದ ವೆಬ್‍ಸೈಟ್ ಹ್ಯಾಕ್

Published

on

-ಭಾರತದ ವಿರುದ್ಧ ಪಾಕ್ ಅಧಿಕಾರಿಗಳ ಆರೋಪ

ಇಸ್ಲಾಮಾಬಾದ್: ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವೆಬ್‍ಸೈಟ್ ಹ್ಯಾಕ್ ಆಗಿದ್ದು, ಪಾಕ್ ಅಧಿಕಾರಿಗಳು ಹ್ಯಾಕಿಂಗ್ ಹಿಂದೆ ಭಾರತ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನದ ಡಾನ್ ಪತ್ರಿಕೆ ಈ ಕುರಿತು ವರದಿ ಮಾಡಿದ್ದು, ಪಾಕ್ ವಿದೇಶಾಂಗ ವಕ್ತಾರ ಡಾ. ಮಿಹಮ್ಮದ್ ಫೈಸಲ್ ನೀಡಿರುವ ಮಾಹಿತಿಯಂತೆ ಆಸ್ಟ್ರೇಲಿಯಾ, ಸೌದಿ ಆರೇಬಿಯಾ, ಬ್ರಿಟನ್, ಹಾಲೆಂಡ್ ದೇಶಗಳಲ್ಲಿ ವೆಬ್‍ಸೈಟ್ ಭೇಟಿ ನೀಡಲು ಸಮಸ್ಯೆ ಆಗುತ್ತಿದೆ. ಆದರೆ ಪಾಕಿಸ್ತಾನದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾಗಿ ವರದಿ ಮಾಡಿದೆ.

ಕೆಲ ವರದಿಗಳ ಅನ್ವಯ ಪಾಕಿಸ್ತಾನ ಆರ್ಮಿ ವೆಬ್ ಸೈಟ್ ಸೇರಿದಂತೆ 7ಕ್ಕೂ ಹೆಚ್ಚು ಇಲಾಖೆಗಳ ವೆಬ್ ಸೈಟ್ ಹ್ಯಾಕ್ ಆಗಿದೆಯಂತೆ. ಸದ್ಯ ಪಾಕ್ ವೆಬ್ ಸೈಟ್ ಸರಿಯಾಗಿ ಕಾರ್ಯನಿರ್ವಹಿಸುಂತೆ ಮಾಡಲು ಐಟಿ ತಂಡ ಕಾರ್ಯ ನಿರ್ವಹಿಸಿದ್ದು, ರಕ್ಷಣೆ ಮಾಡಲು ಯಶಸ್ವಿಯಾಗಿದೆ ಎನ್ನಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಸಿಆರ್ ಪಿಎಫ್ ಪಡೆಯ ಮೇಲೆ ದಾಳಿ ನಡೆದ 3 ದಿನಗಳ ಬಳಿಕ ಹ್ಯಾಕ್ ಆಗಿದೆ. ಪುಲ್ವಾಮಾ ದಾಳಿಯ ಹೊಣೆಯನ್ನು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ವಹಿಸಿಕೊಂಡಿತ್ತು. ಇದಾದ ಬಳಿಕ ಭಾರತ 1996ರಲ್ಲಿ ನೀಡಿದ್ದ ಪರಮಾಪ್ತ ರಾಷ್ಟ್ರ ಸ್ಥಾನವನು ರದ್ದು ಪಡಿಸಿತ್ತು. ಅಲ್ಲದೇ ಆ ಬಳಿಕ ಪಾಕಿಸ್ತಾನದಿಂದ ಆಮದಾಗುವ ವಸ್ತುಗಳ ಮೇಲೆ ಶೇ.200 ರಷ್ಟು ಸುಂಕವನು ಹೆಚ್ಚಳ ಮಾಡಿದೆ.

ಭಾರತದ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ವಿಶ್ವದ ಪ್ರಮುಖ ರಾಷ್ಟಗಳು ಪಾಕಿಸ್ತಾನ ಉಗ್ರವಾದಕ್ಕೆ ನೀಡುತ್ತಿದ್ದ ಬೆಂಬಲಕ್ಕೆ ಟೀಕೆ ವ್ಯಕ್ತಪಡಿಸಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv