Monday, 22nd July 2019

ಗಡಿ ದಾಟಿದ ಪಾಕ್ ಹೆಲಿಕಾಪ್ಟರ್- ವಿಡಿಯೋ ನೋಡಿ

ನವದೆಹಲಿ: ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಪಾಕ್ ಹೆಲಿಕಾಪ್ಟರ್ ಪೂಂಚ್ ನಲ್ಲಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದೆ.

ಭಾನುವಾರ ಮಧ್ಯಾಹ್ನ 12.13ಕ್ಕೆ ಈ ಘಟನೆ ನಡೆದಿದ್ದು, ಭಾರತೀಯ ಸೇನೆ ಗುಂಡು ಹಾರಿಸಿದೆ. ಕೆಲ ನಿಮಿಷ ಹಾರಾಟ ನಡೆಸಿ ಮತ್ತೆ ಪಾಕ್ ಭೂ ಪ್ರದೇಶಕ್ಕೆ ತೆರಳಿದೆ. ಸದ್ಯ ಗಡಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು ಗುಂಡಿನ ದಾಳಿ ನಡೆಯುತ್ತಿದೆ.

ಶನಿವಾರ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನೀವಾಗಿ ಗುಂಡು ಹಾರಿಸಲು ಹೋಗಬೇಡಿ. ಪಾಕ್ ಸೇನೆ ಗುಂಡು ಹಾರಿಸಿದರೆ ಲೆಕ್ಕವಿಲ್ಲದ್ದಷ್ಟು ಗುಂಡು ಸಿಡಿಸಿ ಎಂದು ಸೈನಿಕರಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದರು.

ವಿಶ್ವ ಸಂಸ್ಥೆಯ 73ನೇ ಸಾಮಾನ್ಯ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಾಕಿಸ್ತಾನ ಒಂದು ಕಡೆ ಭಾರತದ ಜೊತೆ ಮಾತುಕತೆ ನಡೆಸಲು ಸಿದ್ಧ ಎಂದು ಹೇಳುತ್ತಿದೆ ಮತ್ತೊಂದು ಕಡೆ ಉಗ್ರರನ್ನು ಪೋಷಣೆ ಮಾಡುತ್ತಿದೆ. ಅಷ್ಟೇ ಅಲ್ಲದೇ ಉಗ್ರರ ಸ್ಟ್ಯಾಂಪ್ ಬಿಡುಗಡೆಗೊಳಿಸುತ್ತದೆ. ಈ ವಿಚಾರದ ಬಗ್ಗೆ ಸಾಕಷ್ಟು ಎಚ್ಚರಿಕೆ ನೀಡಿದರೂ ತನ್ನ ಮೊಂಡುವಾದವನ್ನು ಮುಂದುವರಿಸುತ್ತದೆ ಎಂದು ಕಿಡಿಕಾರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *