Connect with us

International

ಆರ್ಥಿಕ ದಿವಾಳಿ ಸರಿದೂಗಿಸಲು ಕತ್ತೆಗಳ ಮೊರೆ ಹೋದ ಪಾಕಿಸ್ತಾನ

Published

on

ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ವಿಶ್ವದಲ್ಲೇ ಅತಿ ಹೆಚ್ಚು ಕತ್ತೆಗಳನ್ನು ಹೊಂದಿರುವ 3ನೇ ರಾಷ್ಟ್ರ ಎಂಬ ಹೆಗ್ಗಳಿಕೆ ಗಳಿಸಿರುವ ಪಾಕಿಸ್ತಾನ, ಸದ್ಯ ತನ್ನ ಆರ್ಥಿಕ ದಿವಾಳಿತನವನ್ನ ಸರಿದೂಗಿಸಲು ಕತ್ತೆಗಳ ಮಾರಾಟಕ್ಕೆ ಮುಂದಾಗಿದೆ.

ಈ ಕುರಿತು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದ್ದು, ಕತ್ತೆಗಳನ್ನು ಚೀನಾ ದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುವ ಮೂಲಕ ಮಿಲಿಯನ್ ಗಟ್ಟಲೇ ಆದಾಯ ಪಡೆಯುವ ಉದ್ದೇಶವನ್ನು ಹೊಂದಿದೆ ಎಂದು ಬಿತ್ತರಿಸಿದೆ.

ಮುಖ್ಯವಾಗಿ ಕತ್ತೆಗಳಿಗೆ ಚೀನಾದಲ್ಲಿ ಭಾರೀ ಬೇಡಿಕೆ ಇದ್ದು, ಚೀನಾ ಪ್ರಾಚೀನ ಔಷದಿಗಳ ತಯಾರಿಕೆಗೆ ಕತ್ತೆಗಳ ಅಗತ್ಯವಿದೆ. ಅಲ್ಲದೇ ಕತ್ತೆ ಚರ್ಮ, ರಕ್ತದಿಂದಲೂ ಕೂಡ ಕೆಲ ಔಷಧಿಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಾಂದರ್ಭಿಕ ಚಿತ್ರ

ಈಗಾಗಲೇ ಕತ್ತೆಗಳ ಸಂಖ್ಯೆಗಳಲ್ಲಿ ಚೀನಾ ವಿಶ್ವದಲ್ಲಿ ಮೊದಲ ಸ್ಥಾನ ಪಡೆದಿದ್ದು, ಕೆಲ ಚೀನಾ ಕಂಪನಿಗಳು ಕತ್ತೆ ಖರೀದಿಗೆ ಮುಂದಾಗಿದೆ. ಇದರ ಭಾಗವಾಗಿ 3 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಆಸಕ್ತಿ ತೋರಿದೆ. ಕತ್ತೆ ರಫ್ತು ಮತ್ತಷ್ಟು ಹೆಚ್ಚಳ ಮಾಡಲು ಪಾಕಿಸ್ತಾನ ಫಾರ್ಮ್‍ಗಳನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಿದೆ. ಒಪ್ಪಂದ ಭಾಗವಾಗಿ ಮೊದಲ 3 ವರ್ಷಗಳಲ್ಲಿ 80 ಸಾವಿರ ಕತ್ತೆಗಳನ್ನು ರಪ್ತು ಮಾಡುವ ಚಿಂತನೆ ಮಾಡಲಾಗಿದೆ. ಇದಕ್ಕಾಗಿ ಆರಂಭಿಕವಾಗಿ 2 ಫಾರ್ಮ್‍ಗಳನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ.

ಆರಂಭದಿಂದಲೂ ಚೀನಾ ದೇಶ ಪಾಕಿಸ್ತಾನ ಆರ್ಥಿಕತೆಯನ್ನು ಸರಿದೂಗಿಸಲು ವ್ಯವಹಾರದಲ್ಲಿ ಸಾಕಷ್ಟು ಹಣ ಹೂಡಿಕೆ ಮಾಡಿದೆ. ಸದ್ಯ ಕತ್ತೆಗಳನ್ನು ಪಾಕಿಸ್ತಾನದ ಫಾರ್ಮ್‍ಗಳಲ್ಲೇ ಬೆಳೆಸಿ ಅಲ್ಲಿಂದ ಆಮದು ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv