Thursday, 25th April 2019

Recent News

ಕೊಹ್ಲಿ ದಾಖಲೆ ಮುರಿದ ಪಾಕ್ ಆಟಗಾರ ಫಖಾರ್ ಜಮಾನ್

ಬುಲಬಾಯೊ: ಪಾಕಿಸ್ತಾನದ ಆರಂಭಿಕ ಆಟಗಾರ ಕಳೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದ ಬೆನ್ನಲ್ಲೇ ಮತ್ತೊಂದು ದಾಖಲೆ ನಿರ್ಮಿಸಿದ್ದು, ಏಕದಿನ ಪಂದ್ಯಗಳಲ್ಲಿ 1 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಕಡಿಮೆ ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಗಳಿಸಿದ್ದ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ.

28 ವರ್ಷದ ಫಖಾರ್ ಜಮಾನ್ 18 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಪೂರೈಸಿದ್ದು, ಈ ಹಿಂದೆ ವಿರಾಟ್ ಕೊಹ್ಲಿ 1 ಸಾವಿರ ರನ್ ಗಳಿಸಲು 24 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಉಳಿದಂತೆ ವಿವ್ ರಿಚರ್ಡ್ಸ್, ಕೆವಿನ್ ಪೀಟರ್ ಸನ್, ಜೋನಾಥನ್ ಟ್ರಾಟ್, ಬಾಬರ್ ಅಜಂ, ಕ್ವಿಂಟನ್ ಡಿ ಕಾಕ್ 21 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಗಳಿಸಿದ್ದರು.

ಫಖಾರ್ ಜಮಾನ್ 18 ಏಕದಿನ ಪಂದ್ಯಗಳಲ್ಲಿ 3 ಅರ್ಧ ಶತಕ, 5 ಶತಕ ಗಳಿಸಿದ್ದು, ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ 106 ಎಸೆತಗಳಲ್ಲಿ 114 ರನ್ ಸಿಡಿಸಿದ್ದರು. ಸದ್ಯ ಜಿಂಬಾಬೆ ವಿರುದ್ಧ ಏಕದಿನ ಟೂರ್ನಿಯ ಕೊನೆ ಪಂದ್ಯದಲ್ಲಿ ಫಖಾರ್ ಜಮಾನ್ 85 ರನ್ ಗಳಿಸಿ ಔಟಾಗಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ 505 ರನ್ ಗಳಿಸಿದ್ದಾರೆ.

ಜಿಂಬಾಂಬ್ವೆ ಕಳೆದ ಪಂದ್ಯದಲ್ಲಿ ಇಮಾಮ್ ಹುಲ್ ಹಕ್ (112 ಎಸೆತ, 112 ರನ್) ರೊಂದಿಗೆ ಉತ್ತಮ ಜೊತೆಯಾಟ ನೀಡಿದ ಫಖಾರ್ ಜಮಾನ್ 304 ರನ್ ಗಳ ದಾಖಲೆಯ ಆರಂಭಿಕ ಜೊತೆಯಾಟ ನೀಡಿದರು. 2006 ರಲ್ಲಿ ಶ್ರೀಲಂಕಾ ಆಟಗಾರ ಉಪುಲ್ ತರಂಗ, ಜಯಸೂರ್ಯ ಜೋಡಿ ಗಳಿಸಿದ್ದ 286 ರನ್ ಗಳ ಆರಂಭಿಕ ಜೊತೆಯಾಟದ ದಾಖಲೆ ಮುರಿದಿದ್ದರು. ಈಗಾಗಲೇ ಜಿಂಬಾಬ್ವೆ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಜಯಿಸಿರುವ ಪಾಕ್, ಈ ಪಂದ್ಯದ ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.

Leave a Reply

Your email address will not be published. Required fields are marked *