Connect with us

Latest

ಆಕ್ಸಿಜನ್ ಭರ್ತಿಗೆ ಕ್ಯೂನಲ್ಲಿ ನಿಂತ ಮಗಳು- ಪ್ರಾಣ ಬಿಟ್ಟ ತಾಯಿ

Published

on

ನವದೆಹಲಿ: ಆಕ್ಸಿಜನ್ ಭರ್ತಿಗೆ ಕ್ಯೂನಲ್ಲಿ ನಿಂತಿದ್ದ ವೇಳೆ ತಾಯಿ ಮೃತಪಟ್ಟರು ಎಂದು ಸುದ್ದಿ ಕೇಳಿದ ಮಗಳು ಕುಸಿದು ಬಿದ್ದ ಘಟನೆ ನಡೆದಿದೆ.

ಶ್ರುತಿ ಸಹಾ ತನ್ನ ತಾಯಿಗಾಗಿ ಆಕ್ಸಿಜನ್ ಮರುಭರ್ತಿ ಮಾಡಿಕೊಂಡು ಹೋಗಲು ಬಂದಿರುತ್ತಾರೆ. ತಡವಾಗುತ್ತಿದೆ ಎಂದು ಕಂಗಾಲಾದ ಸಹಾ ಆಕ್ಸಿಜನ್ ಘಟಕದ ಬಾಗಿಲು ತೆರೆಯುವಂತೆ ಕಾಲಿಗೆ ಬಿದ್ದು ಕೇಳಿಕೊಂಡಿದ್ದಾರೆ. ಆದರೆ ಪೋಲಿಸರು ಮತ್ತು ಭದ್ರತಾ ಸಿಬ್ಬಂದಿ ಕಾಯುವಂತೆ ಹೇಳಿದ್ದಾರೆ. ಸಹಾ ಸಾಲಿನಲ್ಲಿ ನಿಂತು ಕಾಯುತ್ತಿದ್ದಳು. ಈ ವೇಳೆ ಮನೆಯಿಂದ ಫೋನ್‍ಕರೆಯೊಂದು ಬಂದಿದೆ. ಆಕ್ಸಿಜನ್ ಇಲ್ಲದೆ ತಾಯಿ ಒದ್ದಾಡಿ ಪ್ರಾಣಬಿಟ್ಟಿದ್ದಾರೆ ಎಂದು ಸುದ್ದಿ ಕೇಳಿದ ತಕ್ಷಣ ಅಲ್ಲಿಯೇ ಸಹಾ ಕುಸಿದು ಬಿದ್ದಿದ್ದಾಳೆ.

ಸುತ್ತಮುತ್ತಲಿದ್ದ ಜನರು ಆಕೆಯನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ. ಎಚ್ಚರಗೊಂಡ ಸಹಾ ಖಾಲಿ ಆಕ್ಸಿಜನ್ ಸಿಲಿಂಡರ್ ಅಲ್ಲಿಯೇ ಬಿಟ್ಟು ಮನೆಗೆ ಓಡಿದ್ದಾಳೆ. ಸಹಾ ಮನೆಗೆ ಹೋಗುವಷ್ಟರಲ್ಲಿ ತಾಯಿ ಪ್ರಾಣ ಬಿಟ್ಟಿದ್ದರು.

ನಾನು ಬೆಳಗ್ಗೆ 2 ಗಂಟೆಯಿಂದ ಆಕ್ಸಿಜನ್‍ಗಾಗಿ ಹುಡುಕಾಡುತ್ತಿದ್ದೇನೆ. ದೆಹಲಿ ಯಾವ ಭಾಗದಲ್ಲಿಯೂ ಆಕ್ಸಿಜನ್ ಇಲ್ಲ. ನನ್ನ ತಾಯಿ ಗಂಭೀರವಾಗಿದ್ದಾರೆ. ದಯವಿಟ್ಟು ಆಕ್ಸಿಜನ್ ತುಂಬಿಕೊಡಿ ಎಂದು ಹೇಳಿದರೆ ಅವರ ಮನಸ್ಸು ಕರಗಲಿಲ್ಲ ಎಂದು ಹೇಳುತ್ತಾ ಸಹಾ ಕಣ್ಣೀರು ಹಾಕಿದ್ದಾರೆ.

Click to comment

Leave a Reply

Your email address will not be published. Required fields are marked *