Connect with us

ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ

ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ

ಬೆಳಗಾವಿ: ನಗರಕ್ಕೆ ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತವಾಗಿರುವ ಘಟನೆ ತಾಲೂಕಿನ ಮುತ್ನಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಂಭವಿಸಿದೆ.

ಓವರ್ ಟೇಕ್ ಮಾಡುವ ವೇಳೆ ಮುಂಬದಿಯ ಲಾರಿಗೆ ಆಕ್ಸಿಜನ್ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಅಪಘಾತ ವೇಳೆ ಆಕ್ಸಿಜನ್ ಲಿಕ್ವಿಡ್‍ಗೆ ಹಾನಿ ಇಲ್ಲ. ಡಿಕ್ಕಿ ರಭಸಕ್ಕೆ ಟ್ಯಾಂಕರ್ ಟೈರ್ ಬ್ಲಾಸ್ಟ್ ಆಗಿ, ಎಕ್ಸಲ್ ಕಟ್ ಆಗಿದೆ. ಎಕ್ಸಲ್ ಕಟ್ ಆಗಿರುವ ಹಿನ್ನೆಲೆ ಬೇರೆ ಆಕ್ಸಿಜನ್ ಟ್ಯಾಂಕರ್ ಕರೆತರಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬೇರೆ ಖಾಲಿ ಆಕ್ಸಿಜನ್ ಟ್ಯಾಂಕರ್ ತರಿಸಿ, ಆಕ್ಸಿಜನ್ ಲಿಕ್ವಿಡ್ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ. 16 ಕೆಎಲ್ ಸಾಮಥ್ರ್ಯದ ಆಕ್ಸಿಜನ್ ಲಿಕ್ವಿಡ್ ಪೂರೈಸುತ್ತಿದ್ದ ಟ್ಯಾಂಕರ್ ಇದಾಗಿದ್ದು, ಅಪಘಾತವಗಾಗಿದೆ. ಇದೀಗ ಖಾಲಿ ಟ್ಯಾಂಕರ್ ತರಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

Advertisement
Advertisement