Connect with us

300 ರೂ. ಆಕ್ಸಿಜನ್ ಸಿಲಿಂಡರ್ 3 ಸಾವಿರಕ್ಕೆ ಮಾರಾಟ- ಸಿಸಿಬಿ ದಾಳಿ, ಆರೋಪಿ ವಶಕ್ಕೆ

300 ರೂ. ಆಕ್ಸಿಜನ್ ಸಿಲಿಂಡರ್ 3 ಸಾವಿರಕ್ಕೆ ಮಾರಾಟ- ಸಿಸಿಬಿ ದಾಳಿ, ಆರೋಪಿ ವಶಕ್ಕೆ

ಬೆಂಗಳೂರು: ಬೆಡ್ ಬ್ಲಾಕಿಂಗ್ ದಂಧೆ ಸದ್ದು ಮಾಡಿದ ಬೆನ್ನಲ್ಲೇ ಇದೀಗ ಆಕ್ಸಿಜನ್ ಮಾಫಿಯಾ ಸಹ ಬೆಳಕಿಗೆ ಬಂದಿದ್ದು, 300 ರೂ. ಬೆಲೆಯ ಆಕ್ಸಿಜನ್ ಸಿಲಿಂಡರ್‍ನ್ನು 3 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ ಗ್ಯಾಸ್ ಏಜೆನ್ಸಿ ಮೇಲೆ ದಾಳಿ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಪೀಣ್ಯ ಇಂಡಸ್ಟ್ರೀಯಲ್ ಏರಿಯಾದಲ್ಲಿನ ಸೀಗಾ ಗ್ಯಾಸ್ ಏಜೆನ್ಸಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿಯ ವೇಳೆ ಸೀಗಾ ಗ್ಯಾಸ್ ಏಜೆನ್ಸಿ ಉಸ್ತುವಾರಿಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿ ರವಿಕುಮಾರ್ ದುಪ್ಪಟ್ಟು ಹಣಕ್ಕೆ ಆಕ್ಸಿಜನ್ ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.

ಸರ್ಕಾರದ ಬೆಲೆ 300 ರೂಪಾಯಿ ಆದರೆ ಆರೋಪಿ ರವಿಕುಮಾರ್ 3 ಸಾವಿರ ರೂಪಾಯಿಯಂತೆ 47 ಲೀಟರ್ ಸಿಲಿಂಡರ್ ಗ್ಯಾಸ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಆರೋಪಿಯನ್ನು ಆರೋಪಿಯನ್ನು ವಶಕ್ಕೆ ಪಡೆದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ದಾಳಿಯ ವೇಳೆ 47 ಲೀಟರ್ ಆಕ್ಸಿಜನ್ ಗ್ಯಾಸ್ 6 ಸಾವಿರಕ್ಕೆ ಮಾರಾಟ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಆರೋಪಿ ವಿರುದ್ಧ ಸೆಕ್ಷನ್ 420 ಡ್ರಗ್ಸ್ ಪ್ರೈಸ್ ಕಂಟ್ರೋಲ್ ಆರ್ಡರ್ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.

Advertisement
Advertisement