Connect with us

ದಾರಿ ಮಧ್ಯೆ ಕೆಟ್ಟು ನಿಂತ ಆಕ್ಸಿಜನ್ ಟ್ಯಾಂಕರ್ – ಬೀದರ್ ಜಿಲ್ಲಾಡಳಿತಕ್ಕೆ ಫುಲ್ ಟೆನ್ಷನ್

ದಾರಿ ಮಧ್ಯೆ ಕೆಟ್ಟು ನಿಂತ ಆಕ್ಸಿಜನ್ ಟ್ಯಾಂಕರ್ – ಬೀದರ್ ಜಿಲ್ಲಾಡಳಿತಕ್ಕೆ ಫುಲ್ ಟೆನ್ಷನ್

ಬೀದರ್: ಆಕ್ಸಿಜನ್ ಬರುವುದು 3 ಗಂಟೆ ತಡವಾದ ಕಾರಣ ಆಕ್ಸಿಜನ್ ಕೊರತೆ ಎದುರಾಗುವ ಪರಿಸ್ಥಿತಿ ಬೀದರ್‌ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ನಿರ್ಮಾಣವಾಗಿತ್ತು.

ಪ್ರತಿದಿನ ಸರಿಯಾದ ಸಮಯಕ್ಕೆ ಬಳ್ಳಾರಿಯಿಂದ ಬೀದರ್‍ಗೆ ಬರುತ್ತಿದ್ದ ಪ್ರಾಣ ವಾಯು ಇಂದು ಮೂರು ಗಂಟೆ ತಡವಾಗಿ ಬಂದಿದೆ. ಪ್ರಾಣ ವಾಯು ಬರುವುದು ತಡವಾದ ಕಾರಣ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಆತಂಕದಿಂದ ಬ್ರೀಮ್ಸ್ ಆಸ್ಪತ್ರೆಗೆ ದೌಡಾಯಿಸಿದ್ದರು.

ಸಮಯ ಕಳೆದಂತೆ ಬ್ರೀಮ್ಸ್ ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಟ್ಯಾಂಕ್ ಖಾಲಿಯಾಗುತ್ತಿದ್ದಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹರಸಾಹಸ ಪಟ್ಟು ಖಾಸಗಿ ಆಸ್ಪತ್ರೆ ಹಾಗೂ ಗ್ಯಾಸ್ ಏಜೆನ್ಸಿಗಳಿಂದ 250 ಜಂಬೂ ಸಂಗ್ರಹ ಮಾಡಿ ಕೋವಿಡ್ ಸೋಂಕಿತರಿಗೆ ಸರಬರಾಜು ಮಾಡಿದರು.

ಜಂಬೂ ಸಿಲಿಂಡರ್ 3 ಗಂಟೆ ಬರುವುದು ತಡವಾದ್ದರಿಂದ 350 ಸೋಂಕಿತನ್ನು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಮಾಧಾನ ಪಡಿಸಲು ಹರಸಾಹಸ ಪಟ್ಟರು. 3 ಗಂಟೆ ಬಳಿಕ ಆಕ್ಸಿಜನ್ ಹೊತ್ತ ಗಾಡಿ ಬೀದರ್‍ಗೆ ಬಂದು ಬ್ರೀಮ್ಸ್ ಆಕ್ಸಿಜನ್ ಟ್ಯಾಂಕ್‍ಗೆ ಡಂಪ್ ಮಾಡಿದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟರು. ಆಕ್ಸಿಜನ್ ಟ್ಯಾಂಕ್ ಗಾಡಿ ಕೆಟ್ಟು ಹೋಗಿದ್ದರಿಂದ ಈ ಸಮಸ್ಯೆಯಾಗಿದ್ದು, ಈಗಾಗಲೇ 14 ಕೆಎಲ್ ಆಕ್ಸಿಜನ್ ಟ್ಯಾಂಕ್ ಹೊತ್ತ ಗಾಡಿ ಬ್ರೀಮ್ಸ್‍ಗೆ ಬಂದಿದೆ.

ಖಾಸಗಿ ಆಸ್ಪತ್ರೆ, ಗ್ಯಾಸ್ ಏಜೆನ್ಸಿಗಳಿಂದ ಸುಮಾರು 250 ಜಂಬೂ ಸಿಲಿಂಡರ್ ಸಂಗ್ರಹ ಮಾಡಿ ಎಲ್ಲಾ ಸೋಂಕಿತರಿಗೆ ಆಕ್ಸಿಜನ್ ನೀಡಿದ್ದೇವೆ. ಆಕ್ಸಿಜನ್ ಸಮಸ್ಯೆಯಿಂದ ಯಾವುದೇ ಸಾವು ಸಂಭವಿಸಿಲ್ಲ. ಹೀಗಾಗಿ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲಾ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಿ ರೆಡ್ಡಿ ತಿಳಿದ್ದಾರೆ.

Advertisement
Advertisement