Connect with us

International

ಕಸ್ಟಮ್ಸ್ ಅಧಿಕಾರಿಗಳಿಂದ 1 ಸಾವಿರ ಇರುವೆ ಸೀಜ್!

Published

on

ಬೀಜಿಂಗ್: ಅಕ್ರಮವಾಗಿ ಸಾಗಾಟ ಮಾಡುವ ಹಣ, ಬಂಗಾರ, ಡ್ರಗ್ಸ್ ಹೀಗೆ ಇತರೆ ವಸ್ತುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡುವುದು ನಿಮಗೆ ಗೊತ್ತೆ ಇದೆ. ಈಗ ಚೀನಾದಲ್ಲಿ 1 ಸಾವಿರ ಇರುವೆಗಳನ್ನು ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಇರುವೆಗಳನ್ನ ಸೀಜ್ ಮಾಡಿದ್ದಾರಾ ಅಂತ ಅಚ್ಚರಿಯಾದರೂ ಇದು ನಿಜ. ಕೋರಿಯರ್ ಮೂಲಕ ಸಾಗಾಣೆಯಾಗುತ್ತಿದ್ದ ಪಾರ್ಸೆಲ್‍ವೊಂದನ್ನು ಸೀಜ್ ಮಾಡಿದ್ದ ಕಸ್ಟಮ್ ಅಧಿಕಾರಿಗಳಿಗೆ ಅದನ್ನು ತೆರೆದಾಗ ಅದರಲ್ಲಿದ್ದ ಇರುವೆಗಳನ್ನು ನೋಡಿ ಶಾಕ್ ಆಗಿದ್ದಾರೆ.

ಅಕ್ರಮವಾಗಿ ಕೋರಿಯರ್ ಮೂಲಕ ಬ್ರಿಟನ್‍ನಿಂದ ಚೀನಾಗೆ ಈ ಇರುವೆಗಳನ್ನು ಕಳುಹಿಸಲಾಗಿತ್ತು. ಈ ಇರುವೆಗಳು ವಿಲಕ್ಷಣ ಸಾಕುಪ್ರಾಣಿಗಳ ಪಟ್ಟಿಗೆ ಸೇರಿದರಿಂದ ಕಸ್ಟಮ್ಸ್ ಅಧಿಕಾರಿಗಳು ತಕ್ಷಣ ಪಾರ್ಸಲ್‍ನಲ್ಲಿದ್ದ ಒಂದು ಸಾವಿರ ಇರುವೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದರಲ್ಲಿ 37 ಕೆಂಪು ಮತ್ತು ಕಪ್ಪು ಬಣ್ಣದ ರಾಣಿ ಇರುವೆಗಳು ಸೇರಿದಂತೆ ಇತರೆ ಇರುವೆಗಳು ಇವೆ. ಜೀವಂತ ಇರುವೆಗಳನ್ನು ಪಾರ್ಸೆಲ್ ಮೂಲಕ ಸಾಗಾಟ ಮಾಡುವುದು ಚೀನಾದಲ್ಲಿ ನಿಷೇಧಿಸಲಾಗಿದ್ದು, ಸ್ಥಳೀಯವಲ್ಲದ ಇಂಥಹ ಇರುವೆಗಳ ಸಾಗಾಟ ನಮ್ಮ ಪರಿಸರಕ್ಕೆ ಹಾನಿ ತಂದೊಡ್ಡುತ್ತವೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.

ಅಲ್ಲದೆ ಇತ್ತೀಚೆಗೆ ಇ-ಕಾಮರ್ಸ್ ಹಾಗೂ ಆನ್‍ಲೈನ್ ಮೂಲಕ ಚೀನಾಕ್ಕೆ ಇಂತಹ ಹಾವುಗಳು, ಹಲ್ಲಿಗಳು ಹಾಗೂ ವಿವಿಧ ರೀತಿಯ ಕೀಟಗಳ ಅಕ್ರಮ ಸಾಗಾಟ ಹೆಚ್ಚಾಗಿದ್ದು, ದೇಶದಲ್ಲಿ ವಿದೇಶಿ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ ಕಳ್ಳಸಾಗಣೆಗಾಗಿ ಇ-ಕಾಮರ್ಸ್ ಬಳಕೆ ಆಗುತ್ತಿರುವುದು ಚೀನಾ ಸರ್ಕಾರಕ್ಕೆ ತಲೆನೋವು ತಂದೊಡ್ಡಿದೆ.