Bengaluru City
ನಮ್ಮನೆಗಿಂತ ನೆಂಟರ ಮನೆ ಚೆಂದ – ಪಾಲಿಕೆಯಲ್ಲಿ ಉಳಿಯಲು ಬೇರೆ ಇಲಾಖೆ ಅಧಿಕಾರಿಗಳ ವ್ಯಾಮೋಹ

– 2 ವರ್ಷ ಮಾತ್ರ ಎರವಲು ಸೇವೆಗೆ ಅವಕಾಶ
– ಹಲವು ವರ್ಷಗಳಿಂದ ಅಧಿಕಾರಿಗಳ ಠಿಕಾಣಿ
– ನಗರಾಭಿವೃದ್ಧಿ ಇಲಾಖೆಯಿಂದ ಮಾತೃ ಇಲಾಖೆಗೆ ಹೋಗುವಂತೆ ಆದೇಶ
ಬೆಂಗಳೂರು: ಬಿಬಿಎಂಪಿ ವರ್ಗಾವಣೆ ಹಗ್ಗ ಜಗ್ಗಾಟ ಜೋರಾಗಿಯೇ ಸಾಗುತ್ತಿದೆ. ಎರವಲು ಸೇವೆಗೆ ಬಂದವರು ಬಿಬಿಎಂಪಿ ಬಿಟ್ಟು ಹೋಗಲು ಮನಸ್ಸಿಲ್ಲ. ಬೇರೆ ಬೇರೆ ಇಲಾಖೆಯವರಿಗೆ ಪಾಲಿಕೆಯಲ್ಲೇ ಉಳಿಯುವ ಆಸೆ ಹೆಚ್ಚಾಗಿದೆ ಹೀಗಂತ ಸಾಮಾಜಿಕ ಕಾರ್ಯಕರ್ತ ಅಮರೇಶ್ ಆರೋಪ ಮಾಡಿದ್ದಾರೆ.
ಆದಾಯ ಮಾಡಲು ಬಿಬಿಎಂಪಿ ಬೇಕೆ ಬೇಕು ಎಂಬ ಮಾತಿದೆ. ಹೀಗಾಗಿ ಅವಧಿ ಮೀರಿ ಪಾಲಿಕೆಯ ಅಧಿಕಾರದಲ್ಲೇ ಇರಲು ಮಿನಿಸ್ಟರ್, ಶಾಸಕರ ಪತ್ರಗಳ ವ್ಯವಹಾರ ನಡೆಸಿದ್ದಾರೆ. ಒಂದೇ ದಿನ 25 ಕಾರ್ಯಪಾಲಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕರಗಳ ವರ್ಗಾವಣೆ ಆದೇಶ ಹೊರಡಿಸಲಾಗಿದೆ. 6 ರಿಂದ 8 ವರ್ಷ ಪಾಲಿಕೆಯಲ್ಲಿರುವ ಅಧಿಕಾರಿಗಳ ವ್ಯಾಮೋಹ ಹಾಗೇ ಮುಂದುವರೆದಿದೆ.
ನಗರದ ಎಲ್ಲ ಕ್ಷೇತ್ರಗಳಿಂದಲೂ ವರ್ಗಾವಣೆ ಆದೇಶ ಹೊರಡಿಸಲಾಗಿದೆ. ನೌಕರರು ತಮ್ಮ ಮಾತೃ ಇಲಾಖೆಗೆ ವಾಪಸ್ ಆಗಲು ಮನಸ್ಸಿಲ್ಲ. ಸಿಕ್ಕ ಸಿಕ್ಕ ಕಡೆ ಮಿನಿಸ್ಟರ್ , ಶಾಸಕರಿಂದ ಶಿಫಾರಸ್ಸು ಪತ್ರಗಳ ಪಡೆಯಲು ಅಲೆದಾಡುತ್ತಿದ್ದಾರೆ. 3,800 ಕ್ಕೂ ಹೆಚ್ಚು ಜನರು ಪಾಲಿಕೆಯ ನೇಮಕಾತಿ ಇರುವ ಸಿಬ್ಬಂದಿ , 1,900 ಕ್ಕೂ ಹೆಚ್ಚು ಜನರು ಎರವಲು ಸೇವೆಯಿಂದ ಬೇರೆ ಇಲಾಖೆಯಿಂದ ಬಂದವರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬಿಬಿಎಂಪಿಯಲ್ಲೇ ಉಳಿಸಿಕೊಳ್ಳಿ ಎಂದು ಶಿಫಾರಸ್ಸು ಪತ್ರಗಳ ಪರಭಾರೆಗಾಗಿ ಸಿದ್ಧತೆ ನಡೆಯುತ್ತಿದೆ. ಪಾಲಿಕೆಯಲ್ಲಿ 2 ವರ್ಷಗಳು ಮಾತ್ರ ಎರವಲು ಸೇವೆಯಲ್ಲಿ ಮಾತ್ರ ಇರಲು ಅವಕಾಶ ಇದೆ. ಆದರೆ ನಗರದ ಹಲವೆಡೆ 8 ವರ್ಷಗಳಿಂದ ಎರವಲು ಸೇವೆಯಲ್ಲಿ ಮುಂದುವರೆಯಲು ಕಸರತ್ತು ನಡೆಯುತ್ತಿದೆ.
ನಗರಾಭಿವೃದ್ಧಿ ಇಲಾಖೆಯಿಂದಲೇ ವರ್ಗಾವಣೆಗೆ ಆದೇಶ ಹೊರಬಿದ್ದಿದೆ. ಪಾಲಿಕೆ ಬಿಟ್ಟು ಮಾತೃ ಇಲಾಖೆಗೆ ವಾಪಸ್ ಆಗಿ ಎಂದು ಆದೇಶ ಹೊರಡಿಸಿದೆ. ಬರೋಬ್ಬರಿ 25 ಕಾರ್ಯಪಾಲಕ ಅಭಿಯಂತರನ್ನು ಮಾತೃ ಇಲಾಖೆಗೆ ವಾಪಸ್ ಕಳಿಸಲು ಆದೇಶ ಹೊರಡಿಸಿದೆ.
ವರ್ಗಾವಣೆ ಪಟ್ಟಿಯಲ್ಲಿರುವ ಅಧಿಕಾರಿಗಳ ಲೆಕ್ಕ:
ಜಕ್ಕಸಂದ್ರ ವಾರ್ಡ್ ಪ್ರದೀಪ್ ಕುಮಾರ್ 6 ವರ್ಷ, ಸರ್ವಜ್ಞ ನಗರ ಕ್ಷೇತ್ರ ಕಾರ್ಯಪಾಲಕ ಅಭಿಯಂತರ ಮೋಹನ್ ಗೌಡ 8 ವರ್ಷ, ಪಟ್ಟಾಭಿರಾಮನಗರದ ಸಹಾಯಕ ಕಾರ್ಯುಪಾಲಕ ಸತೀಶ್ ಕುಮಾರ್ 5 ವರ್ಷ, ಪಾದರಾಯನಗರದ ಸಹಾಯಕ ಕಾರ್ಯಪಾಲಕ ಮುಜಾಹಿದ್ ಪಾಷ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಈಗ ಮಾತೃ ಇಲಾಖೆಗೆ ವಾಪಸ್ ಆಗಬೇಕಿದೆ.
ಕೋರ್ಟ್ ಆದೇಶದ ಪ್ರಕಾರ ವರ್ಗಾವಣೆ ಸಂಬಂಧಿತ ಶಿಫಾರಸ್ಸು ಪತ್ರ ನೀಡುವಂತಿಲ್ಲ. ಶಾಸಕರು, ಮಿನಿಸ್ಟರ್ ಗಳು ಪತ್ರ ವ್ಯವಹಾರ ಮಾಡುವಂತಿಲ್ಲ. ಪಾಲಿಕೆ ಮಾಡಬೇಕಾದ ಕೆಲಸ ನಗರಾಭಿವೃದ್ಧಿ ಇಲಾಖೆಯೇ ಪ್ರವೇಶ ಮಾಡಿದೆ. ಈ ವರ್ಗಾವಣೆ ಚಾಲ್ತಿ ಆಗಲೇ ಬೇಕಾಗಿದೆ. ಒಂದೊಮ್ಮೆ ಶಿಫಾರಸ್ಸು ಪತ್ರ ನೀಡಿ ಮತ್ತೆ ಪಾಲಿಕೆಯಲ್ಲಿ ಉಳಿಯಲು ಪ್ರಯತ್ನ ಪಟ್ಟರೆ ಅದು ಬಿಬಿಎಂಪಿ ಮೂಲಕ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾದಂತೆ ಆಗುತ್ತದೆ.
