Wednesday, 19th February 2020

Recent News

ಆಪರೇಷನ್ ಕಮಲ ಮೊದಲ ಹಂತ ಯಶಸ್ವಿ: ಎರಡನೇ ಹಂತದಲ್ಲಿ ಏನಾಗುತ್ತೆ?

ಬೆಂಗಳೂರು: ಪಕ್ಷೇತರ ಶಾಸಕರ ಬೆಂಬಲವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡಿ, ಮೊದಲ ಹಂತದ ಆಪರೇಷನ್ ಕಮಲದಲ್ಲಿ ಯಶಸ್ವಿಯಾದ ಬಿಜೆಪಿ ನಾಯಕರು ಬುಧವಾರ ಎರಡನೇ ಹಂತ ಆಪರೇಷನ್ ಕಮಲ ನಡೆಸಲು ಮುಂದಾಗಲಿದ್ದಾರೆ.

ಎರಡನೇ ಹಂತದಲ್ಲಿ ಅತೃಪ್ತ ಕಾಂಗ್ರೆಸ್‍ನ ಆರು ಶಾಸಕರಿಂದ ರಾಜೀನಾಮೆ ಕೊಡಿಸಲು ಬಿಜೆಪಿ ಮೆಗಾ ಪ್ಲಾನ್ ರೂಪಿಸಿದೆ. ಈ ನಿಟ್ಟಿನಲ್ಲಿ ನಾಳೆಯೇ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಖಚಿತ ಮೂಲಗಳಿಂದ ಲಭ್ಯವಾಗಿದೆ.

ಆ 6 ಮಂದಿ ಯಾರು?
ಸಚಿವ ಸ್ಥಾನ ಕಳೆದುಕೊಂಡ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್, ಕಂಪ್ಲಿಯ ಜೆ.ಎನ್, ಗಣೇಶ್ ಹಾಗೂ ಚಿಂಚೋಳಿ ಶಾಸಕ ಉಮೇಶ್ ಜಾದವ್ ಕಾಂಗ್ರೆಸ್‍ಗೆ ಗುಡ್‍ಬೈ ಹೇಳುವುದು ಬಹುತೇಕ ಖಚಿತವಾಗಿದೆ.

ಲೋಕಸಭಾ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ವೇಳೆ ಶಾಸಕ ನಾಗೇಂದ್ರ ಅವರು, ಸಹೋದರನಿಗೆ ಟಿಕೆಟ್ ಕೇಳಿದ್ದರು. ಆದರೆ ಟಿಕೆಟ್ ಅನ್ನು ಉಗ್ರಪ್ಪ ಅವರಿಗೆ ನೀಡಲಾಗಿತ್ತು. ಬಳಿಕ ತಮಗೆ ಸಚಿವ ಸ್ಥಾನ ನೀಡುವಂತೆ ಕೇಳಿದ್ದರು. ಆಗಲೂ ಹಿನ್ನಡೆಯಾಗಿದ್ದರಿಂದ ಕಾಂಗ್ರೆಸ್ ನಾಯಕರ ವಿರುದ್ಧ ನಾಗೇಂದ್ರ ಅವರು ಕಿಡಿಕಾರಲು ಆರಂಭಿಸಿದ್ದರು. ಈ ಬೆಳವಣಿಗೆಯಿಂದ ಸಮ್ಮಿಶ್ರ ಸರ್ಕಾರ ಬೀಳಿಸಿ ಹೊಸ ಸರ್ಕಾರ ರಚಿಸಿ ಮಂತ್ರಿಯಾಗಿಯೇ ಬಳ್ಳಾರಿಗೆ ಬರುತ್ತೇನೆ ಅಂತ ಶಾಸಕ ನಾಗೇಂದ್ರ ಶಪಥ ಮಾಡಿದ್ದಾರಂತೆ. ಇದರಿಂದಾಗಿ ಶಾಸಕ ನಾಗೇಂದ್ರ ಅವರು ಬಿಜೆಪಿ ಸೇರುವುದು ಖಚಿತ ಎನ್ನಲಾಗುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *