Connect with us

Crime

16 ಹುಡುಗರು, ಮೂವರು ಯುವತಿಯರನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡ ಮದನಾರಿ

Published

on

– ಪೊಲೀಸರ ಬಲೆಗೆ ಬಿದ್ದಿದ್ದೇಗೆ ದುಂಡು ಮಲ್ಲಿಗೆ ಸುಂದರಿ?
– ಹೋಟೆಲ್ ರೂಂ ಕಾಯ್ದಿರಿಸಿ ಬಾ, ಬಾ ಅಂತಿದ್ಳು

ಮುಂಬೈ: ಡೇಟಿಂಗ್ ಆ್ಯಪ್ ಮೂಲಕ 16 ಹುಡುಗರು ಮತ್ತು ಮೂವರು ಯುವತಿಯರನ್ನ ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡಿದ್ದ ದುಂಡು ಮಲ್ಲಿಗೆ ಸುಂದರಿಯನ್ನ ಪೊಲೀಸರು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ಪಿಂಪರಿ-ಚಿಂಚವಾಡಾ ಠಾಣೆಯ ನಾಲ್ವರು ಅಧಿಕಾರಿಗಳ ತಂಡ ಸುಂದರಿಯನ್ನ ಅರೆಸ್ಟ್ ಮಾಡಿದ್ದಾರೆ.

27ರ ಸಯಾಲಿ ಉರ್ಫ್ ಶಿಖಾ ದೇವೇಂದ್ರ ಕಾಳೆ ಬಂಧಿತ ವಂಚಕಿ. ಆರೋಪಿ ಸಯಾಲಿ 16 ಯುವಕರನ್ನ ತನ್ನ ಪ್ರೇಮದ ಪಾಶದಲ್ಲಿ ಬಂಧಿಸಿ ಅವರ ಬಳಿಯಲ್ಲಿರುವ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗುತ್ತಿದ್ದಳು. ಬಂಬಲ್ ಡೇಟಿಂಗ್ ಆ್ಯಪ್ ನಲ್ಲಿ ಸೆಕ್ಸ್ ಗಾಗಿ ಹುಡುಗಿಯರನ್ನ ಹುಡುಕುತ್ತಿರೋ ಯುವಕರನ್ನೇ ಸಯಾಲಿ ಟಾರ್ಗೆಟ್ ಮಾಡಿಕೊಂಡು ಅವರ ಸ್ನೇಹ ಬೆಳೆಸುತ್ತಿದ್ದಳು.

ಹೋಟೆಲ್ ರೂಂ ಕಾಯ್ದಿರಿಸಿ ಬಾ ಅಂತಿದ್ಳು: ಹುಡುಗರ ವೀಕ್‍ನೆಸ್ ಲಾಭವಾಗಿ ಬಳಸಿಕೊಳ್ಳುತ್ತಿದ್ದ ಸಯಾಲಿ ಹೋಟೆಲ್ ರೂಂ ಬುಕ್ ಮಾಡಿ ಯುವಕರಿಗೆ ಆಹ್ವಾನ ನೀಡುತ್ತಿದ್ದಳು. ದುಂಡು ಮಲ್ಲಿಗೆಯ ತೋಳುಗಳಲ್ಲಿ ಬಂಧಿಯಾಗಲು ಓಡೋಡಿ ಬರುತ್ತಿದ್ದ ಯುವಕರಿಗೆ ಮದ್ಯದಲ್ಲಿ ನಿದ್ದೆ ಮಾತ್ರೆ ಸೇರಿಸಿ ಕೊಡುತ್ತಿದ್ದಳು. ಮದ್ಯ ಕುಡಿದ ಯುವಕ ನಿದ್ದೆಗೆ ಜಾರುತ್ತಿದ್ದಂತೆ ಅವರ ಬಳಿಯಲ್ಲಿರುವ ಚೈನ್, ಉಂಗುರ, ವಾಚ್, ಮೊಬೈಲ್ ಮತ್ತು ಹಣ ಕಿತ್ಕೊಂಡು ಜೂಟ್ ಆಗುತ್ತಿದ್ದಳು. ನಂತರ ಆತನೊಂದಿಗೆ ಚಾಟ್ ಮಾಡಿದ್ದ ಮೊಬೈಲ್ ನಂಬರ್, ಡೇಟಿಂಗ್ ಆ್ಯಪ್ ಖಾತೆಯನ್ನ ಡಿಲೀಟ್ ಮಾಡುತ್ತಿದ್ದಳು. ಹೀಗೆ 16 ಹುಡುಗರಿಗೆ ದಾಳಿಂಬೆ ಹಲ್ಲುಗಳನ್ನ ಫಳ ಫಳ ಅಂತ ತೋರಿಸಿ ಮಕ್ಮಲ್ ಟೋಪಿ ಹಾಕಿದ್ದಳು.

ಬುರುಡೆ ಮದನಾರಿ: ಸಯಾಲಿಯಿಂದ ವಂಚಿತ ಯುವಕರು ದೂರು ಸಲ್ಲಿಸುವಾಗ ಓರ್ವ ಮಹಿಳೆ ತಮ್ಮನ್ನ ಡೇಟಿಂಗ್ ಆ್ಯಪ್ ಮೂಲಕ ಮೋಸ ಮಾಡಿದ್ದಾಳೆ ಅಂತ ಮಾತ್ರ ಆರೋಪಿ ಬಗ್ಗೆ ಮಾಹಿತಿ ನೀಡುತ್ತಿದ್ದರು. ಮೇಲ್ನೋಟಕ್ಕೆ ತಾನು ಖಾಸಗಿ ಕಂಪನಿಯ ಉದ್ಯೋಗಿ ಅಂತ ಎಲ್ಲರ ಬಳಿಯೂ ಮದನಾರಿ ಬುರುಡೆ ಬಿಟ್ಟಿದ್ದಳು.

ನಕಲಿ ಖಾತೆಯ ಖೆಡ್ಡಾಗೆ ಬಿದ್ಳು: ಯಾವುದೇ ಸಾಕ್ಷ್ಯ, ಸುಳಿವು ಸಿಗದ ಕಾರಣ ಪೊಲೀಸರು ಆರಂಭದಲ್ಲಿ ತಲೆಯನ್ನ ಚಚ್ಚಿಕೊಂಡಿದ್ದುಂಟು. ಕೊನೆಗೆ ಪಿಂಪರಿ ಚಿಂಚವಾಡ ಬ್ರ್ಯಾಂಚ್ ಪೊಲೀಸರು ನಾಲ್ಕು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಟೀಂ ರಚನೆ ಮಾಡಿದ್ರು. ಇನ್‍ಸ್ಪೆಕ್ಟರ್ ಪ್ರಸಾದ್ ಗೋಖಲೆ ತಮ್ಮ ತಂಡದ ಸದಸ್ಯರೊಂದಿಗೆ ಅದೇ ಡೇಟಿಂಗ್ ಆ್ಯಪ್ ನಲ್ಲಿ ಖಾತೆ ತರೆದು ಸಯಾಲಿಗಾಗಿ ಶೋಧ ನಡೆಸಿದರು. ಈ ವೇಳೆ ಸಯಾಲಿ ಕೆಲವರಿಗೆ ಫ್ರೆಂಡ್ ರಿಕ್ವೇಸ್ಟ್ ಕಳಸಿದ್ದಾಳೆ. ಆರಂಭದಲ್ಲಿ ಪೊಲೀಸರು ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಳ್ಳದಿದ್ದರೂ ಪದೇ ಪದೇ ಅವರನ್ನ ಸಯಾಲಿ ಸಂಪರ್ಕಿಸಿದ್ದಾಳೆ.

ಪೊಲೀಸರು ಸ್ಮೈಲ್‍ಗಿಕ್ ಹೆಸರಿನ ಖಾತೆ ಮೂಲಕ ಆಕೆಯೊಂದಿಗೆ ಮಾತನಾಡಿದ್ದಾರೆ. ನಂತರ ಆಕೆಯೊಂದಿಗೆ ಚಾಟ್ ಮಾಡಿ ಪರಸ್ಪರ ಮೊಬೈಲ್ ನಂಬರ್ ಚೇಂಜ್ ಮಾಡಿಕೊಂಡಿದ್ದಾರೆ. ಎಲ್ಲರಿಗೆ ಮಕ್ಮಲ್ ಟೋಪಿ ಹಾಕಿದ್ದ ಫಳ ಫಳ ಹಲ್ಲಿನ ಸುಂದರಿ ಪೊಲೀಸಪ್ಪನಿಗೆಯೇ ಟೋಪಿ ಹಾಕಲು ಪ್ಲಾನ್ ಮಾಡಿ, ಅವರನ್ನ ಮನೆಗೆ ಬರುವಂತೆ ಆಹ್ವಾನ ನೀಡಿದ್ದಾಳೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸಯಾಲಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಸಯಾಲಿ ಇದುವರೆಗೂ ಮೂವರು ಯುವತಿಯರು ಮತ್ತು 16 ಯುವಕರಿಗೆ ಪ್ರೀತಿ ಹೆಸರಲ್ಲಿ ಮೋಸ ಮಾಡಿರೋದಾಗಿ ಒಪ್ಪಿಕೊಂಡಿದ್ದಾಳೆ. ಲಾಕ್‍ಡೌನ್ ವೇಳೆ ಕೆಲಸ ಕಳೆದುಕೊಂಡಿದ್ದರಿಂದ ಈ ಕೃತ್ಯಕ್ಕೆ ಸಯಾಲಿ ಮುಂದಾಗಿದ್ದಳು ಎಂದು ವರದಿಯಾಗಿದೆ.

Click to comment

Leave a Reply

Your email address will not be published. Required fields are marked *