Bengaluru City
ಬೆಂಗಳೂರಲ್ಲಿ ಮತ್ತೊಬ್ಬರಿಗೆ ಬ್ರಿಟನ್ ವೈರಸ್ ಪತ್ತೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಬ್ಬರಿಗೆ ಬ್ರಿಟನ್ ವೈರಸ್ ಪತ್ತೆಯಾಗಿದ್ದು, ಬೆಂಗಳೂರಿನಲ್ಲೊ ಸೋಂಕಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಒಟ್ಟು 9 ಜನರ ಜೀನೋಮ್ ಸೀಕ್ವೆನ್ಸಿಂಗ್ ಮಾಡಲಾಗಿತ್ತು. ಇದರಲ್ಲಿ ಒಬ್ಬರಿಗೆ ಸೋಂಕು ತಗುಲಿರೋದು ದೃಢವಾಗಿದೆ.
ಸೋಮವಾರ ಸಂಜೆ ಕೇಂದ್ರ ಆರೋಗ್ಯ ಇಲಾಖೆಗೆ ಜೀನೋಮ್ ಸೀಕ್ವೆನ್ಸಿಂಗ್ ವರದಿಯನ್ನ ನಿಮ್ಹಾನ್ಸ್ ಕಳುಹಿಸಿತ್ತು. ಸೋಂಕು ತಗುಲಿರುವ ವ್ಯಕ್ತಿ ಯಾರು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಸಂಜೆ ಮಾಹಿತಿ ಸಿಗಲಿದೆ. ರಾಜ್ಯದಲ್ಲಿ ಇದವರೆಗೂ 11 ಜನರಿಗೆ ಬ್ರಿಟನ್ ವೈರಸ್ ಸೋಂಕು ತಗುಲಿದೆ. ಶಿವಮೊಗ್ಗ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಬೆಂಗಳೂರಿನ ವ್ಯಕ್ತಿಗೆ ಸೋಂಕು ತಗುಲಿದೆ ಎನ್ನಲಾಗಿದೆ.
ದೇಶದಲ್ಲಿ ಬ್ರಿಟನ್ ವೈರಸ್ ಸೋಂಕಿತರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ದೆಹಲಿಯ ಲ್ಯಾಬ್ ನಲ್ಲಿ ಇಲ್ಲಿಯವರೆಗೆ 19 ಮಂದಿ ಮತ್ತು ಪುಣೆಯ ಲ್ಯಾಬ್ ನಲ್ಲಿ 20 ಜನರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.
