Connect with us

Cricket

ಮತ್ತೊಮ್ಮೆ ಭಾರತದ ಮಗಳು ಭೀಕರವಾಗಿ ಹಿಂಸೆಗೊಳಗಾಗಿದ್ದಾಳೆ: ಯುವರಾಜ್

Published

on

– ಯುಪಿ ಗ್ಯಾಂಗ್‍ರೇಪ್ ವಿರುದ್ಧ ಯುವಿ ಕಿಡಿ

ನವದೆಹಲಿ: ಮತ್ತೊಮ್ಮೆ ಭಾರತದ ಮಗಳು ಭೀಕರವಾಗಿ ಹಿಂಸೆಗೊಳಗಾಗಿದ್ದಾಳೆ ಎಂದು ಟ್ವೀಟ್ ಮಾಡುವ ಮೂಲಕ ಉತ್ತರ ಪ್ರದೇಶದಲ್ಲಿ ನಡೆದ ಗ್ಯಾಂಗ್ ರೇಪ್ ವಿರುದ್ಧ ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಕಿಡಿಕಾರಿದ್ದಾರೆ.

ಸೆಪ್ಟೆಂಬರ್ 14ರಂದು ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಯುವತಿ ತನ್ನ ತಾಯಿಯೊಂದಿಗೆ ಹುಲ್ಲು ತರಲು ಹೋಗಿದ್ದಳು. ಈ ವೇಳೆ ನಾಲ್ವರು ಕಾಮುಕರು ಆಕೆಯನ್ನು ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸದ್ಯ ಯುವತಿ ಸಾವನ್ನಪ್ಪಿದ್ದ ಆಕೆಗಾದ ಅನ್ಯಾಯದ ಬಗ್ಗೆ ದೇಶದ್ಯಾಂತ ಚೆರ್ಚೆಯಾಗುತ್ತಿದೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಯುವರಾಜ್ ಅವರು, ಮತ್ತೊಮ್ಮೆ ಭಾರತದ ಮಗಳು ಭೀಕರವಾಗಿ ಹಿಂಸೆಗೊಳಗಾಗಿದ್ದಾಳೆ. ಹತ್ರಾಸ್‍ನಲ್ಲಿ ನಡೆದ ಘಟನೆಯ ಬಗ್ಗೆ ಹೇಳಲಾಗದಷ್ಟು ಕೋಪ ಮತ್ತು ದುಃಖವಾಗುತ್ತಿದೆ. ಈ ಘೋರ ಅಪರಾಧದಿಂದ ತಮ್ಮ ಪ್ರೀತಿಯ ಮಗಳನ್ನು ಕಳೆದುಕೊಂಡ ಕುಟುಂಬದೊಂದಿಗೆ ನಾನು ನಿಲ್ಲುತ್ತೇನೆ. ಈ ಅಮಾನವೀಯ ಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿ ಒತ್ತಾಯ ಮಾಡಿದ್ದಾರೆ.

ಸೆಪ್ಟೆಂಬರ್ 14ರಂದು ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಯುವತಿ ತನ್ನ ತಾಯಿಯೊಂದಿಗೆ ಹುಲ್ಲು ತರಲು ಹೋಗಿದ್ದಳು. ಈ ವೇಳೆ ನಾಲ್ವರು ಕಾಮುಕರು ಆಕೆಯನ್ನು ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲದೆ ಆಕೆಯ ನಾಲಿಗೆ ಕತ್ತರಿಸಿ, ಬೆನ್ನುಮೂಳೆ ಹಾಗೂ ಕತ್ತಿಗೆ ಗಂಭೀರವಾಗಿ ಹಾನಿ ಮಾಡಿದ್ದರು. ಘಟನೆಯಿಂದ ತೀವ್ರ ಅಸ್ವಸ್ಥಳಾಗಿದ್ದ ಸಂತ್ರಸ್ತೆಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯಿಸಿರೆಳೆದಿದ್ದಳು. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣ – ಸಂತ್ರಸ್ತೆ ಕುಟುಂಬ ಹೊರಗಿಟ್ಟು 2.30ಕ್ಕೆ ಪೊಲೀಸರಿಂದ್ಲೇ ಅಂತ್ಯಕ್ರಿಯೆ!

ಇತ್ತ ಮಗಳನ್ನು ಕಳೆದುಕೊಳ್ಳುತ್ತಿದ್ದಂತೆಯೇ ಸಂತ್ರಸ್ತೆಯ ಕುಟುಂಬದವರ ರೋಧನ ಮುಗಿಲುಮುಟ್ಟಿತ್ತು. ಅಲ್ಲದೇ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಯಿತು. ಸಂತ್ರಸ್ತೆಯ ಸಾವು ಖಂಡಿಸಿ ಆಕೆಯ ಸಹೋದರ ಹಾಗೂ ತಂದೆ ಪ್ರತಿಭಟನೆ ನಡೆಸುತ್ತಿದ್ದಂತೆಯೇ, ಇತ್ತ ಪೊಲೀಸರು ಸಂತ್ರಸ್ತೆಯ ಮೃತದೇಹವನ್ನು ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ಸಾಗಿಸಿ ನಸುಕಿನ ಜಾವ 2.30ರ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Click to comment

Leave a Reply

Your email address will not be published. Required fields are marked *