Connect with us

Bollywood

22ನೇ ಮದುವೆ ವಾರ್ಷಿಕೋತ್ಸವಕ್ಕೆ ಭಾವನಾತ್ಮಕ ಟ್ವೀಟ್ ಮಾಡಿದ ಬೋನಿ ಕಪೂರ್

Published

on

ಮುಂಬೈ: ನಟಿ, ಬಾಲಿವುಡ್ ಚಾಂದಿನಿ ಶ್ರೀದೇವಿ, ನಿರ್ಮಾಪಕ ಬೋನಿ ಕಪೂರ್ ರನ್ನು ಮದುವೆಯಾಗಿ ಇಂದಿಗೆ 22 ವರ್ಷಗಳಾಯಿತು. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀದೇವಿ ಇನ್ನೂ ಜೀವಂತವಾಗಿದ್ದು, ಪತಿ ಬೋನಿ ಕಪೂರ್ ಶ್ರೀದೇವಿಯವರ ಟ್ವಿಟ್ಟರ್, ಇನ್ ಸ್ಟಾಗ್ರಾಂಗಳನ್ನು ಚಾಲನೆ ಮಾಡುತ್ತಿದ್ದಾರೆ.

ಇಂದು ಬೋನಿ ಕಪೂರ್ ಶ್ರೀದೇವಿಯ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಇಂದಿಗೆ ನಾವಿಬ್ಬರೂ ಮದ್ವೆಯಾಗಿ 22 ವರ್ಷಗಳಾಯಿತು. ನೀನು ನನಗೆ ಪತ್ನಿ, ಜೀವದ ಗೆಳತಿ, ನಿಜವಾದ ಪ್ರೀತಿಗೆ ನೀನು ಉದಾಹರಣೆ, ನನ್ನ ಜೀವನದ ನಗು ನೀನಾಗಿದ್ದು, ನನ್ನದೊಂದಿಗೆ ನೀನು ಯಾವಾಗಲೂ ಇರುತ್ತೀಯಾ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

1996ರಲ್ಲಿ ಶ್ರೀದೇವಿ, ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದ್ವೆಯಾಗುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ರು. ಬೋನಿ ಕಪೂರ್ ಮತ್ತು ಶ್ರೀದೇವಿ ಪ್ರೀತಿಯ ಸಂಕೇತವಾಗಿ ಇಂದು ನಮ್ಮೆದುರು ಜಾಹ್ನವಿ ಮತ್ತು ಖುಷಿ ಇದ್ದಾರೆ. ಇದೇ ಫೆಬ್ರವರಿ ತಿಂಗಳಲ್ಲಿ ಶ್ರೀದೇವಿ ತಮ್ಮ ಸೋದರ ಸಂಬಂಧಿಯ ಮೋಹಿತ್ ವರ್ಮಾ ವಿವಾಹ ಸಮಾರಂಭದಲ್ಲಿ ಭಾಗಿಯಾಗಲು ದುಬೈಗೆ ತೆರಳಿದ್ದರು.

ದುಬೈ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದ ಶ್ರೀದೇವಿ ಆಕಸ್ಮಿಕವಾಗಿ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಶ್ರೀದೇವಿ ಸಾವಿನ ಬಳಿಕ ಮಾಮ್ ಚಿತ್ರದಲ್ಲಿ ಅಮೋಘ ಅಭಿನಯಕ್ಕಾಗಿ ಭಾರತ ಸರ್ಕಾರ ಉತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಿತ್ತು.