Connect with us

Karnataka

ಹಳೆಯ 100 ರೂ. ಹಿಂಪಡೆಯುವುದಿಲ್ಲ – ಆರ್‌ಬಿಐ ಸ್ಪಷ್ಟನೆ

Published

on

ಮುಂಬೈ: ದೇಶದಲ್ಲಿ ಈಗ ಚಲಾವಣೆಯಾಗುತ್ತಿರುವ ಹಳೆಯ 100, 10, ಮತ್ತು 5 ರೂಪಾಯಿ ನೋಟುಗಳನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ.

ಕೆಲದಿನಗಳ ಹಿಂದೆ 100 ರೂಪಾಯಿ ಹಳೆಯನೋಟುಗಳ ಚಲಾವಣೆ ಸ್ಥಗಿತಗೊಳಿಸಿ ಹೊಸ ಸೀರಿಸ್‍ನ ನೋಟುಗಳನ್ನು ಚಲಾವಣೆಗೆ ತರಲಾಗುವುದು ಎಂದು ವರದಿಯಾಗಿತ್ತು. ಈ ಕುರಿತು ಯಾವುದೇ ರೀತಿ ನಿರ್ಧಾರ ಮಾಡಿಲ್ಲ ಎಂದು ಆರ್‌ಬಿಐ  ಸ್ಪಷ್ಟಪಡಿಸಿದೆ.

2018ರಲ್ಲಿ ಹೊಸ 100 ರೂಪಾಯಿ ಮುಖಬೆಲೆಯ ನೋಟುಗಳು ಹೊಸ ಬಣ್ಣದಿಂದ ಚಲಾವಣೆಗೆ ಬಂದಿದೆ. ಅದರೊಂದಿಗೆ ಹಳೆಯ ಮುಖಬೆಲೆಯ ನೋಟುಗಳು ಮುಂದುವರಿಯುತ್ತದೆ ಎಂದು ಆರ್‌ಬಿಐ  ತಿಳಿಸಿದೆ.

 

Click to comment

Leave a Reply

Your email address will not be published. Required fields are marked *