Sunday, 18th August 2019

Recent News

ಬಸ್ ಚಾಲಕ, ನಿರ್ವಾಹಕರಿಗೆ ಸಂಚಾರಿ ನಿಯಂತ್ರಕ ಖಡಕ್ ವಾರ್ನಿಂಗ್..!

ಚಿಕ್ಕಬಳ್ಳಾಪುರ: ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯುವ ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಬಸ್ ನಿಲ್ದಾಣಕ್ಕೆ ಬಸ್ ತರಬೇಡಿ ಎಂದು ಚಾಲಕ ಹಾಗೂ ನಿರ್ವಾಹಕರಿಗೆ ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕ ವಾರ್ನಿಂಗ್ ನೀಡಿದ್ದಾರೆ.

ಬೆಳಗ್ಗೆ ಜಿಲ್ಲೆಯ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಬಸ್ ತಂದು ಕರ್ತವ್ಯ ನಿರ್ವಹಿಸಲು ಬಂದ ಚಾಲಕ ಹಾಗೂ ನಿರ್ವಾಹಕರಿಗೆ ಸಂಚಾರಿ ನಿಯಂತ್ರಕ ಆವಲಪ್ಪ ವಾರ್ನಿಂಗ್ ನೀಡಿದ್ದಾರೆ. ಇಂದು ಬಂದ್, ನಿಲ್ದಾಣಕ್ಕೆ ಬಸ್ ತರಬೇಡಿ ವಾಪಾಸ್ ಡಿಪೋಗೆ ತೆಗೆದುಕೊಂಡು ಹೋಗಿ ಎಂದು ತಾಕೀತು ಮಾಡಿದ್ದಾರೆ. ಅಲ್ಲದೆ ಯಾರೂ ಕೂಡ ಇಂದು ಕರ್ತವ್ಯ ನಿರ್ವಹಿಸುವಂತಿಲ್ಲ ಅಂತ ನಿಲ್ದಾಣಕ್ಕೆ ಬಂದ ಚಾಲಕರು ಹಾಗೂ ನಿರ್ವಾಹಕರನ್ನು ಹಿಂದಿರುಗುವುದಕ್ಕೆ ಹೇಳಿದ್ದಾರೆ.

ಪ್ರಯಾಣಿಕರ ಅನುಕೂಲಕ್ಕೆ ಕೆಲಸ ಮಾಡಬೇಕಾದ ಅಧಿಕಾರಿಯಿಂದಲೇ ಸರ್ಕಾರದ ವಿರೋಧಿ ಕೆಲಸ ನಡೆಯುತ್ತಿದೆ. ಆದ್ರೆ ಮುಷ್ಕರಕ್ಕೆ ಬೆಂಬಲ ನೀಡದಿರಲು ನಿರ್ಧರಿಸಿರುವ ಸಿಬ್ಬಂದಿ ಬಸ್ ನಿಲ್ದಾಣಕ್ಕೆ ಕೆಲ ಬಸ್‍ಗಳನ್ನು ತರುತ್ತಿದ್ದಾರೆ. ಹೀಗಾಗಿ ಮುಷ್ಕರಕ್ಕೆ ಬೆಂಬಲ ಕೊಡಬೇಕು. ಬಸ್ ಸ್ಟಾಂಡ್‍ನಲ್ಲಿ ಬಸ್ ಕಾಣಿಸಬಾರದು ಎಂದು ಸಿಬ್ಬಂದಿಗೆ ಸಂಚಾರಿ ನಿಯಂತ್ರಕ ಅವಾಜ್ ಹಾಕಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *