Connect with us

Crime

ನಿತ್ಯವೂ ಜಗಳವಾಡುತ್ತಿದ್ದ ಪತ್ನಿಯರನ್ನು ಕೊಲೆಗೈದು ನೇಣಿಗೆ ಶರಣಾದ ಪತಿ

Published

on

ಭುವನೇಶ್ವರ: ನಿತ್ಯವೂ ಜಗಳವಾಡುತ್ತಿದ್ದ ಪತ್ನಿಯರನ್ನು ಪತಿಯೊಬ್ಬ ಕೊಲೆಗೈದು, ಬಳಿಕ ತಾನೂ ನೇಣು ಹಾಕಿಕೊಂಡ ಘಟನೆ ಒಡಿಶಾದಲ್ಲಿ ನಡೆದಿದೆ.

ಮಯೂರ್ಭಂಜ್ ಜಿಲ್ಲೆಯ ತಡಕಿಸೊಲ್ ಗ್ರಾಮದ ಫುಲ್ಮಾನಿ ಮರಂಡಿ (52) ಹಾಗೂ ಶುಕ್ಲಾ (51) ಕೊಲೆಯಾದ ಪತ್ನಿಯರು. ಶ್ಯಾಮ ಮರಂಡಿ (55) ಕೊಲೆಗೈದು ನೇಣಿಗೆ ಶರಣಾದ ಪತಿ.

ಶ್ಯಾಮ ಮರಂಡಿ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಫುಲ್ಮಾನಿ ಹಾಗೂ ಶುಕ್ಲಾರನ್ನು ವಿವಾಹವಾಗಿದ್ದ. ಆದರೆ ಪತ್ನಿಯರು ನಿತ್ಯವೂ ಜಗಳವಾಡುತ್ತಿದ್ದರು. ಇದರಿಂದ ಬೇಸತ್ತ ಶ್ಯಾಮ ಮರಂಡಿ ಮಂಗಳವಾರ ರಾತ್ರಿ ಮನೆಯಲ್ಲಿದ್ದ ಇಬ್ಬರು ಪತ್ನಿಯರಿಗೂ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ.

ಪತ್ನಿಯರನ್ನು ಕೊಲೆ ಮಾಡಿದ ಬಳಿಕ ಮನೆಯಿಂದ ಹೊರ ಬಂದಿದ್ದಾನೆ. ಬಳಿಕ ಮನೆಯ ಮುಂದೆ ಇದ್ದ ಮರಕ್ಕೆ ನೇಣುಹಾಕಿಕೊಂಡಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ ಎಂದು ವರದಿಯಾಗಿದೆ.