Thursday, 18th July 2019

ಫೋನಿ ಅಬ್ಬರ: ಧರೆಗುರುಳಿದ ಪವರ್ ಗ್ರಿಡ್ – ಸಾವಿನ ಸಂಖ್ಯೆ 37ಕ್ಕೆ ಏರಿಕೆ

ಭುವನೇಶ್ವರ: ಫೋನಿ ಚಂಡಮಾರುತಕ್ಕೆ ಒಡಿಶಾ ನಲುಗಿ ಹೋಗಿದ್ದು, ಇದುವರೆಗೂ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.

ಒಡಿಶಾದಾದ್ಯಂತ ವಿದ್ಯುತ್, ಕುಡಿಯುವ ನೀರು, ದೂರವಾಣಿ ಸಂಪರ್ಕ ಜಾಲ ಭಾಗಶಃ ನಾಶವಾಗಿದ್ದು, ಭುವನೇಶ್ವರದ ಚಂದಕಾದಲ್ಲಿ ಫೋನಿ ಹಬ್ಬರಕ್ಕೆ ಬೃಹತ್ ಪವರ್ ಗ್ರಿಡ್ ಧರೆಗೆ ಅಪ್ಪಳಿಸಿದೆ. ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಈ ವ್ಯವಸ್ಥೆಯನ್ನು ಸರಿಪಡಿಸಲು 72 ಗಂಟೆಗಳ ಅವಧಿಯನ್ನು ಸರ್ಕಾರ ಕೇಳಿದೆ.

ರಾಜ್ಯ ಸರ್ಕಾರ ಚಂಡಮಾರುತದಿಂದ ಉಂಟಾಗಿರುವ ಹಾನಿಯನ್ನು ಪರಿಹರಿಸಲು ಕೇಂದ್ರಕ್ಕೆ ಮನವಿ ಮಾಡಿದ್ದು, ರಾಜ್ಯ ಸರ್ಕಾರದ ಮನವಿ ಮೇರೆಗೆ ಸಚಿವ ಧರ್ಮೇಂದ್ರ ಪ್ರಧಾನ್ ಪರಿಶೀಲನೆ ಮುಂದಾಗಿದ್ದಾರೆ. ಚಂಡಮಾರುತದಿಂದ ಸುಮಾರು 1.56 ಲಕ್ಷ ವಿದ್ಯುತ್ ಕಂಬಗಳು ಹಾನಿಗೊಳಗಾಗಿದೆ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿದೆ.

ಬರೋಬ್ಬರಿ 200 ಕಿಮೀ ವೇಗದಲ್ಲಿ ಒಡಿಶಾಗೆ ಅಪ್ಪಳಿದ ಫೋನಿ ಸಾಕಷ್ಟು ಅವಾಂತವನ್ನೇ ಸೃಷ್ಟಿಸಿದೆ. ಒಂದು ವರದಿಯ ಅನ್ವಯ ಚಂಡಮಾರುತದಿಂದ ಉಂಟಾಗಿರುವ ಹಾನಿಯನ್ನು ಸಹಜ ಸ್ಥಿತಿಗೆ ತರಲು ಸುಮಾರು 1 ವಾರದ ಅವಧಿ ಅಗತ್ಯವಿದೆ ಎಂಬ ಮಾಹಿತಿ ಲಭಿಸಿದೆ. ಪ್ರಮುಖವಾಗಿ ಒಡಿಶಾದ ಪುರಿ, ಖುರ್ದಾ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ಈ ವ್ಯವಸ್ಥೆಯನ್ನ ಸರಿಪಡಿಸಲು ಸಿಬ್ಬಂದಿ ಕೊರತೆಯನ್ನು ಕೂಡ ರಾಜ್ಯ ಸರ್ಕಾರ ಎದುರಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ಸುಮಾರು 5 ಸಾವಿರ ಮಂದಿ ಕೌಶಲ್ಯ ಹೊಂದಿರುವ ಸಿಬ್ಬಂದಿಗೆ ರಾಜ್ಯ ಸರ್ಕಾರ ಬೇಡಿಕೆ ಇಟ್ಟಿದೆ. ಇತ್ತ ಶೇ.80 ರಷ್ಟು ಸರ್ಕಾರಿ ಸಾರಿಗೆ ಸೇವೆ ಆರಂಭವಾಗಿದ್ದು, ಜನರ ನೆರವಿಗೆ ಧಾವಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಒಡಿಶಾ ನೆರವಿಗೆ ಆಗಮಿಸಿ 15 ಕೋಟಿ ರೂ. ನೆರವು ನೀಡಿದ್ದಾರೆ.

Leave a Reply

Your email address will not be published. Required fields are marked *