Advertisements
ಬೆಳಗಾವಿ: ಸಿಲಿಂಡರ್ (Gas Cylinder) ಸೋರಿಕೆಯಾಗಿ ಹೊತ್ತಿಕೊಂಡ ಬೆಂಕಿಯಿಂದ ನರ್ಸಿಂಗ್ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ನಡೆದಿದೆ.
Advertisements
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನರ್ಸಿಂಗ್ ಓದುತ್ತಿದ್ದ ಶ್ರೀಧರ್ ಪ್ಯಾಟಿ (19) ಮೃತ ಯುವಕನಾಗಿದ್ದಾನೆ. ಇದನ್ನೂ ಓದಿ: ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿದ ಅಪ್ಪು ಅಭಿಮಾನಿಗಳು – ಗಂಧದಗುಡಿ ಸಿನಿಮಾ ಕೆಲಕಾಲ ಸ್ಥಗಿತ
Advertisements
ಮನೆಯಲ್ಲಿ ಸಂಜೆ ವೇಳೆ ಟೀ (Tea) ಮಾಡಲು ಹೋಗಿದ್ದಾಗ ಗ್ಯಾಸ್ ಆನ್ ಮಾಡಿ ಲೈಟರ್ ಹುಡುಕಿದ್ದಾನೆ. ಸ್ವಲ್ಪ ಸಮಯದ ಬಳಿಕ ಲೈಟರ್ ಸಿಕ್ಕಿದೆ. ಅಷ್ಟೊತ್ತಿಗಾಗಲೇ ಅಡುಗೆ ಮನೆ ತುಂಬಾ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿದೆ. ಲೈಟರ್ ಹಚ್ಚುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಥಳದಲ್ಲೇ ಶ್ರೀಧರ್ ಸಾವನ್ನಪ್ಪಿದ್ದಾನೆ.
ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Live Tv
Advertisements