Connect with us

Corona

ವಿಶ್ವಕ್ಕೆ ಕೊರೊನಾ ಬಂದರೂ ಉತ್ತರ ಕೊರಿಯಾಗೆ ಬಂದಿಲ್ಲ- ಪ್ರಜೆಗಳಿಗೆ ಕಿಮ್‌ ಧನ್ಯವಾದ

Published

on

ಪ್ಯಾನ್‌ಯಾಂಗ್: ಉತ್ತರ ಕೊರಿಯಾದಲ್ಲಿ ಒಬ್ಬನೇ ಒಬ್ಬ ಕೋವಿಡ್‌ 19ಗೆ ತುತ್ತಾಗಿಲ್ಲ ಎಂದು ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಹೇಳಿದ್ದಾನೆ.

ಶನಿವಾರ ಉತ್ತರ ಕೊರಿಯಾದ ಆಡಳಿತಾರೂಢ ವರ್ಕರ್ಸ್ ಪಕ್ಷದ 75ನೇ ಸಂಸ್ಥಾಪನಾ ವರ್ಷಾಚರಣೆ ನಡೆಯಿತು. ಈ ವೇಳೆ ವಾಹಿನಿಯ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಕಿಮ್ ಜಾಂಗ್ ಉನ್ ಮಾತನಾಡಿದ್ದಾನೆ.

ವಿಶ್ವವೇ ಕೊರೋನಾ ವೈರಸ್ ನಿಂದ ತತ್ತರಿಸುತ್ತಿದ್ದರೆ ಉತ್ತರ ಕೊರಿಯಾದಲ್ಲಿ ಇಲ್ಲಿಯವರೆಗೆ ಯಾರಿಗೂ ಸೋಂಕು ಬಂದಿಲ್ಲ. ಈ ಸಂಕಷ್ಟದ ಸಂದರ್ಭದಲ್ಲಿ ದೇಶದ ನಾಗರಿಕರು ಉತ್ತಮ ಆರೋಗ್ಯ ಕಾಳಜಿ ಕಾಪಾಡಿಕೊಂಡಿರುವುದಕ್ಕೆ ಕಿಮ್‌ ಜಾಂಗ್‌ ಉನ್‌ ಧನ್ಯವಾದ ಹೇಳಿದ್ದಾನೆ.

ಸೋಂಕಿಗೆ ತುತ್ತಾಗದೆ ಜನರು ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದಾರೆ. ನಮ್ಮ ಪಕ್ಷಕ್ಕೆ ಪ್ರತಿಯೊಬ್ಬ ಪ್ರಜೆಯ ಜೀವ ಮುಖ್ಯ. ಆರೋಗ್ಯವನ್ನು ಕಾಪಾಡುವ ಮೂಲಕ ಉತ್ತರ ಕೊರಿಯಾ ಜನ ಜಯ ಸಾಧಿಸಿದ್ದಾರೆ ಎಂದು ಕಿಮ್‌ ಕೊಂಡಾಡಿದ್ದಾನೆ.

ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಕಿಮ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಳೆದ 100 ವರ್ಷಗಳಲ್ಲಿಯೇ ಇಡೀ ವಿಶ್ವ ಕಂಡು ಕೇಳರಿಯದ ಸಮಸ್ಯೆಗೆ ಸಿಲುಕಿದೆ. ಕೊರೊನಾ ವೈರಸ್‌ ಎಲ್ಲ ಕಡೆ ಹರಡುತ್ತಿದೆ. ಇಷ್ಟೆಲ್ಲದರ ನಡುವೆ ಉತ್ತರ ಕೊರಿಯಾ ಯಾವುದೇ ಸಮಸ್ಯೆಗೆ ಸಿಲುಕದಿರುವುದು ಪ್ರಶಂಸನೀಯ ಸಂಗತಿ ಎಂದು ಜಿನ್ ಪಿಂಗ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ವುಹಾನ್‌ ನಗರದಿಂದ ಸೃಷ್ಟಿಯಾದ ಕೊರೊನಾ ವೈರಸ್‌ ವಿಶ್ವಕ್ಕೆ ಹರಡಿದೆ. ಆದರೆ ಚೀನಾ ಜೊತೆ ಗಡಿಯನ್ನು ಹಂಚಿಕೊಂಡಿರುವ ಉತ್ತರ ಕೊರಿಯಾಗೆ ಯಾವುದೇ ವೈರಸ್‌ ಬಂದಿಲ್ಲ.

Click to comment

Leave a Reply

Your email address will not be published. Required fields are marked *