Connect with us

International

ಉತ್ತರ ಕೊರಿಯಾದಲ್ಲಿ ಬ್ಲಾಕ್ ಟೀ ಬೆಲೆ 5,167 ರೂ., 1 ಕೆಜಿ ಬಾಳೆಹಣ್ಣಿಗೆ 3,336 ರೂ.

Published

on

Share this

– ಆಹಾರ ಸಮಸ್ಯೆಯಿಂದ ಜನ ಕಂಗಾಲು
– ಕನಿಷ್ಟ 2 ಲೀಟರ್ ಮೂತ್ರ ಸಂಗ್ರಹಿಸಿ
– ಕಿಮ್ ಜಾಂಗ್ ಉನ್ ಆದೇಶ

ಪ್ಯಾನ್‍ಯಾಂಗ್: ಮಿಲಿಟರಿಯಲ್ಲಿ ಸೂಪರ್ ಪವರ್ ರಾಷ್ಟ್ರವಾಗಬೇಕು ಎಂದು ಕನಸು ಹೊತ್ತಿದ್ದ ಉತ್ತರ ಕೊರಿಯಾದಲ್ಲಿ ಈಗ ಭಾರೀ ಆಹಾರ ಸಮಸ್ಯೆ ಎದುರಾಗಿದೆ. ಎಷ್ಟು ಸಮಸ್ಯೆ ಎದುರಾಗಿದೆ ಎಂದರೆ ಬ್ಲಾಕ್ ಟೀ ಪ್ಯಾಕೆಟ್ ಬೆಲೆ 5,167 ರೂಪಾಯಿ ಆಗಿದ್ದರೆ ಒಂದು ಕೆಜಿ ಬಾಳೆಹಣ್ಣಿನ ಬೆಲೆ 3,336 ರೂ.ಗೆ ಏರಿಕೆಯಾಗಿದೆ.

ಕಳೆದ ವಾರ ನಡೆಸಿದ ಸರ್ಕಾರದ ಸಭೆಯಲ್ಲಿ ಕೋವಿಡ್, ಚಂಡಮಾರುತ ಮತ್ತು ಪ್ರವಾಹದಿಂದಾಗಿ ದೇಶದಲ್ಲಿ ಆಹಾರ ಕೊರತೆಯಾಗುವ ಸಾಧ್ಯತೆ ಇದೆ ಉತ್ತರ ಕೊರಿಯಾ ಅಧ್ಯಕ್ಷ, ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಎಚ್ಚರಿಕೆ ನೀಡಿದ್ದರು.  ಈಗ ಆಹಾರ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

ಸಮಸ್ಯೆ ಯಾಕೆ?
ಮಿಲಿಟರಿಯಲ್ಲಿ ಪ್ರಭುತ್ವ ಸಾಧಿಸಲು ಅಣ್ವಸ್ತ್ರ ಮತ್ತು ಕ್ಷಿಪಣಿ ಪ್ರಯೋಗ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಹಲವು ದೇಶಗಳು ಉತ್ತರ ಕೊರಿಯಾ ಮೇಲೆ ನಿರ್ಬಂಧ ವಿಧಿಸಿದ್ದರಿಂದ ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಈಗ ಕೋವಿಡ್‍ನಿಂದಾಗಿ ದೇಶದ ಗಡಿಯನ್ನು ಮುಚ್ಚಿದೆ. ರಫ್ತು ಮಾಡಲು ಉತ್ಪನ್ನಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಆಮದು ಆಗುತ್ತಿಲ್ಲ. ಇದರಿಂದಾಗಿ ಆರ್ಥಿಕತೆಯ ಮೇಲೆ ಭಾರೀ ಹೊಡೆತ ಬಿದ್ದಿದೆ. ಇದನ್ನೂ ಓದಿ: ವಿಶ್ವಕ್ಕೆ ಕೊರೊನಾ ಬಂದರೂ ಉತ್ತರ ಕೊರಿಯಾಗೆ ಬಂದಿಲ್ಲ- ಪ್ರಜೆಗಳಿಗೆ ಕಿಮ್‌ ಧನ್ಯವಾದ

ಕೃಷಿ ಬೀಜ, ರಸಗೊಬ್ಬರ ಕೂಡ ಚೀನಾದಿಂದ ಆಮದು ಆಗುತ್ತಿತ್ತು. ಕೊರೋನಾಗೂ ಮೊದಲು ಉತ್ತರ ಕೊರಿಯಾ ಚೀನಾದಿಂದ 500 ದಶಲಕ್ಷ ಡಾಲರ್ ಮೊತ್ತದಷ್ಟು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಈ ಮೊತ್ತ ಕೇವಲ 2.5 ದಶಲಕ್ಷ ಡಾಲರ್ ಗೆ ಇಳಿದಿದೆ.

ಆಹಾರ ಉತ್ಪನ್ನವೇ ದುಬಾರಿಯಾಗಿರುವ ಕಾರಣ ರಸಗೊಬ್ಬರ ಆಮದು ಅಥವಾ ಖರೀದಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೀಗಾಗಿ ರೈತರು ಪ್ರತಿನಿತ್ಯ ಕನಿಷ್ಠ 2 ಲೀಟರ್ ನಷ್ಟು  ತಮ್ಮ ಮೂತ್ರಗಳನ್ನು ಸಂಗ್ರಹಿಸಿ ರಸಗೊಬ್ಬರ ಉತ್ಪಾದಿಸಲು ನೆರವಾಗಬೇಕು ಎಂದು ಆದೇಶಿಸಲಾಗಿದೆ. ಇದನ್ನೂ ಓದಿ: ಉತ್ತರ ಕೊರಿಯಾ ಅಧ್ಯಕ್ಷನ ಹುಚ್ಚು ಅಣ್ವಸ್ತ್ರ ಪರೀಕ್ಷೆಗೆ 200 ಕಾರ್ಮಿಕರು ಬಲಿ

ಅಣ್ವಸ್ತ್ರ, ಮಿಲಿಟರಿಗೆ ಹೆಚ್ಚಿನ ಹಣ ವಿನಿಯೋಗಿಸಿದ್ದ ಉತ್ತರ ಕೊರಿಯಾ ಆಹಾರ ಉತ್ಪಾದನೆಯತ್ತ ಗಮನ ಹರಿಸಿರಲಿಲ್ಲ. ಕಳೆದ ಪ್ರವಾಹ, ಬಿರುಗಾಳಿಯಿಂದ ಬೆಳೆಗಳು ನಾಶವಾಗಿತ್ತು. ಈ ಎಲ್ಲ ಕಾರಣಗಳಿಂದ ಈಗ ಉತ್ತರ ಕೊರಿಯಾದಲ್ಲಿ ಆಹಾರ ಕ್ಷಾಮ ಬಂದಿದೆ.

Click to comment

Leave a Reply

Your email address will not be published. Required fields are marked *

Advertisement