Connect with us

Crime

ಶೂಟಿಂಗ್‍ಗೆ ಬಂದ ಯುವತಿಯ ಮೇಲೆ ಆತ್ಯಾಚಾರ

Published

on

-ಆರೋಪಿಯ ಬಂಧನ

ಲಕ್ನೋ: ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ ನಲ್ಲಿ ಚಿತ್ರೀಕರಣಕ್ಕೆ ತೆರಳಿದ್ದ ಯುವತಿಯನ್ನ ಸಹೋದ್ಯೋಗಿ ಅತ್ಯಾಚಾರ ಎಸಗಿದ್ದಾನೆ. ಈ ಸಂಬಂಧ ಯುವತಿ ದೂರು ದಾಖಲಿಸಿದ್ದು, ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಗಾಜಿಯಾಬಾದ್ ನ ವೈಶಾಲಿ ಸೆಕ್ಟರ್-5ರ ವಾಸವಾಗಿದ್ದ ಯುವತಿ ಕಾರ್ಪೋರೇಟರ್ ಚಿತ್ರೀಕರಣಕ್ಕಾಗಿ ಕೆಲ ಸಹೋದ್ಯೋಗಿಗಳ ಜೊತೆ ಆಗಸ್ಟ್ 13ರಂದು ಸೆಕ್ಟರ್-31ಕ್ಕೆ ತೆರಳಿದ್ದರು. ಇವರ ಜೊತೆ ರೋನಿ ಅಲಿಯಾಸ್ ಪೃಥ್ವಿ ಸಹ ಕೆಲಸ ಮಾಡುತ್ತಿದ್ದ. ಅಂದು ರಾತ್ರಿ ಸುಮಾರು 11 ಗಂಟೆಯ ಆಸುಪಾಸಿನಲ್ಲಿ ಎಲ್ಲರೂ ಜೊತೆ ಊಟ ಮಾಡಿದ್ದಾರೆ. ಊಟದ ಜೊತೆ ಮದ್ಯ ಸಹ ಸೇವಿಸಿದ್ದಾರೆ. ಬೆಳಗಿನ ಜಾವ ಸುಮಾರು 4 ಗಂಟೆಗೆ ಪೃಥ್ವಿ ಜೊತೆಯಲ್ಲಿದ್ದ ಯುವತಿಯನ್ನು ಅತ್ಯಾಚಾರ ಗೈದಿದ್ದಾನೆ. ಈ ವೇಳೆ ಯುವತಿಯ ಸ್ನೇಹಿತೆ ನಿದ್ದೆಯಲ್ಲಿದ್ದಳು ಎಂದು ಅಪರ ಪೊಲೀಸ್ ಆಯುಕ್ತ ರಣ್‍ವಿಜಯ್ ಸಿಂಗ್ ಹೇಳಿದ್ದಾರೆ.

ಸಂತ್ರಸ್ಥೆ ನಡೆದ ಘಟನೆಯನ್ನು ಮೊದಲು ಪೋಷಕರಿಗೆ ತಿಳಿಸಿ, ಅವರ ಸಲಹೆ ಮೇರೆಗೆ ತಡರಾತ್ರಿ ಸೆಕ್ಸರ್-20 ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಯುವತಿಯ ಮೇಲೆ ಅತ್ಯಾಚಾರ ನಡೆದಿರೋದನ್ನು ವೈದ್ಯರು ಖಚಿತಪಡಿಸಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ರೋನಿ ಅಲಿಯಾಸ್ ಪೃಥ್ವಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *