Connect with us

Bengaluru City

ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗಾಗಿ ಬೈಕ್ ರೈಡರ್ಸ್ ತಂಡದಿಂದ ಟ್ಯಾಬ್

Published

on

ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ನವೆಂಬರ್ ತಿಂಗಳಲ್ಲಿ ಶೇವ್ ಮಾಡದೇ ಶೇವಿಂಗ್‍ಗೆ ಬಳಸುವ ದುಡ್ಡನ್ನು ಕ್ಯಾನ್ಸರ್ ರೋಗಿಗಳಿಗೆ ತಲುಪಿಸುತ್ತಿದ್ದ ಬೆಂಗಳೂರಿನ ಒಂದು ರೈಡರ್ಸ್ ತಂಡ ಈ ಬಾರಿ ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಟ್ಯಾಬ್ ಒದಗಿಸುವ ಕಾರ್ಯ ಕೈಗೊಂಡಿದೆ.

ಬ್ರೋಸ್ ಅನ್ ವೀಲ್ಸ್ ಎನ್ನುವ ರೈಡರ್ಸ್ ತಂಡ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಕ್ಯಾನ್ಸರ್ ಪೀಡಿತ ವಿದ್ಯಾರ್ಥಿಗಳಿಗೆ ಟ್ಯಾಬ್ (ಬಡ್ಲಿ -ರೀಫರ್ಬಿಷ್ಡ ಎಲೆಕ್ಟ್ರಾನಿಕ ಸಂಸ್ಥೆ ಸಹಯೋಗದಿಂದ) 12 12 ಸ್ಮಾರ್ಟ್ ಫೋನ್ ಹಾಗೂ 1 ವರ್ಷದ ಇಂಟರ್ನೆಟ್‍ನ್ನು ಒದಗಿಸಲಿದೆ. ಕ್ಯಾನ್ಸರ್ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಈ ಯುವ ತಂಡ ಮಾಡುತ್ತಿದೆ.

ಈ ತಿಂಗಳು ಯಾರೂ ಶೇವ್ ಮಾಡಬೇಡಿ. ನೀವು ಶೇವ್‍ಗೆ ಬಳಸುವ ಹಣ ಹಲವರಿಗೆ ಸಹಯವಾಗುತ್ತದೆ. ಹಣ ಸಂಗ್ರಹಮಾಡಿ ಸಮಾಜಕ್ಕೆ ಈ ಕೊರೋನಾ ಟೈಂನಲ್ಲಿ ಪಾಸಿಟಿವ್ ಸಂದೇಶವನ್ನು ಈ ಯುವ ತಂಡ ನೀಡುತ್ತಿದೆ. ಇಲ್ಲಿಯವರೆಗೂ ಸುಮಾರು 4.50 ಲಕ್ಷಕ್ಕೂ ಹೆಚ್ಚು ಹಣವನ್ನು ಈ ಬ್ರೋಸ್ ಅನ್ ವೀಲ್ಸ್ ತಂಡ ಸಂಗ್ರಹಿಸಿದೆ. ಈ ಹಣವನ್ನ ಕ್ಯಾನ್ಸರ್ ಪೀಡಿತರಿಗಾಗಿ ಕೆಲಸ ಮಾಡುವ ಸಮೀಕ್ಷಾ ಫೌಂಡೇಶನಿಗೆ ತಲುಪಿಸಿದ್ದಾರೆ.

ಬ್ರೋಸ್ ಅನ್ ವೀಲ್ಸ್ 10 ವರ್ಷದಿಂದ ಪರಿಚಯ ಇರುವ ಹುಡುಗರು ಈ ರೀತಿಯಾಗಿ ಸಮಾಜಕ್ಕೆ ಒಳಿತು ಮಾಡೋನಿಟ್ಟಿನಲ್ಲಿ ಈ ತಂಡವನ್ನ ಸಿದ್ದ ಮಾಡಿಕೊಂಡಿದ್ದಾರೆ. ಮೋಟರ್ ಸೈಕಲ್ ಓಡಿಸೋ ಪ್ಯಾಷನ್ ನಿಂದ ಒಂದಾದ ತಂಡ ಇಂದು ಸಾಮಾಜಿಕ ಕಳಕಳಿಯನ್ನ ತೋರುತ್ತಿದೆ. ನೀವು ನೀಡುವ ಎಲ್ಲಾ ದುಡ್ಡು ಪಾರದರ್ಶಕವಾಗಿರುತ್ತೆ. ಒಂದೊಂದು ರೂಪಾಯಿ ಯಾರಿಗೆ ಸೇರುತ್ತಿದೆ ಎನ್ನುವುದನ್ನು ನೀವು ನೋಡಬಹುದು ಎಂದು ಪಾರದರ್ಶಕವಾಗಿ ಸಮಾಜ ಮುಖಿಯಾಗಿ ಈ ತಂಡ ಕೆಲಸ ಮಾಡುತ್ತಿದೆ.

Click to comment

Leave a Reply

Your email address will not be published. Required fields are marked *

www.publictv.in