ಬೆಂಗಳೂರು: ಹೊಟ್ಟೆಪಾಡಿಗಾಗಿ ದೂರದ ಗೋವಾಗೆ ಹೋದವರು ಅಲ್ಲೇ ನೆಲೆ ನಿಂತು 40 ವರ್ಷಗಳೇ ಕಳೆದಿದೆ. ಹೇಗೋ ಗುಡಿಸಲು ಹಾಕೊಂಡು ಕೂಲಿ ನಾಲಿ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಗೋವಾ ಸರ್ಕಾರ ಗುಡಿಸಲುಗಳನ್ನ ತೆರವು ಮಾಡಿದರು.
62ನೇ ಕನ್ನಡ ರಾಜ್ಯೋತ್ಸವದ ಹೊತ್ತಲ್ಲಿ ನಮ್ಮ ಜನಪ್ರತಿನಿಧಿಗಳು ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಮಾರುದ್ದ ಭಾಷಣ ಮಾಡಿದರು. ಆದರೆ ನೆರೆಯ ಗೋವಾ ರಾಜ್ಯದಿಂದ ಹೊರ ದಬ್ಬಿಸಿಕೊಂಡ ಕನ್ನಡಿಗರ ಬದುಕಿಗೆ ಮಾತ್ರ ಯಾರೂ ನ್ಯಾಯ ಒದಗಿಸಿಕೊಡಲಿಲ್ಲ. ಸಿಎಂ ಸಿದ್ದರಾಮಯ್ಯ ನಿರಾಶ್ರಿತ ಕನ್ನಡಿಗರಿಗೆ 50 ಕೋಟಿ ರೂ. ಅನುದಾನ ಕೊಡಿಸೋದಾಗಿ ಹೇಳಿದ್ದರು. ಇಲ್ಲಿವರೆಗೆ ಅವರು ನೆರವು ನೀಡಿಲ್ಲ.
Advertisement
ಸಿಎಂ ಕೂಡಲೇ ಗೋವಾ ನಿರಾಶ್ರಿತ ಕನ್ನಡಿಗರ ನೆರವಿಗೆ ಬರಬೇಕು. ಇಲ್ಲವಾದರೆ ವಿಧಾನಸೌಧದ ಮುಂದೆ ವಿಷ ಕುಡಿದು ಪ್ರಾಣ ಬಿಡುತ್ತೇವೆ ಎಂದು ಗಡಿ ಹೋರಾಟಗಾರರು ಹೇಳುತ್ತಿದ್ದಾರೆ. ಗೋವಾ ಕನ್ನಡಿಗರ ಪರ ಕೆಲಸ ಮಾಡಬೇಕಾದ ಗಡಿ ಪ್ರಾಧಿಕಾರದ ಅಧ್ಯಕ್ಷರು ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ಗಡಿ ಹೋರಾಟ ಸಮಿತಿ ಆರೋಪಿಸುತ್ತಿದೆ.