ಶಿವಮೊಗ್ಗ: 2 ತಿಂಗಳ ಬಳಿಕ ವಾಹನ ಸಂಚಾರಕ್ಕೆ ಮುಕ್ತವಾಗಿದ್ದ ನಗರದ ಶಿವಮೊಗ್ಗ-ಬೆಂಗಳೂರು ಮಾರ್ಗ ರಸ್ತೆಯ ತುಂಗಾ ನದಿ ಹಳೆ ಸೇತುವೆ ಮತ್ತೆ ಬಂದ್ ಆಗಿದೆ.
ಭಾರಿ ವಾಹನಗಳು ಸಂಚಾರ ತಡೆಗೆ ಸೇತುವೆ ಎರಡೂ ಭಾಗದಲ್ಲಿ ಆ್ಯಂಗ್ಲರ್ ಅಳವಡಿಕೆ ಮಾಡಲಾಗಿತ್ತು. ಆದರೆ ಅಳವಡಿಸಲಾಗಿದ್ದ ಆ್ಯಂಗ್ಲರ್ ಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದಿರುವ ಪರಿಣಾಮ ಆ್ಯಂಗ್ಲರ್ ಬೆಂಡ್ ಆಗಿದ್ದು, ಸೇತುವೆ ಮೇಲೆ ವಾಹನ ಸಂಚಾರ ಪುನಃ ಸ್ಥಗಿತಗೊಂಡಿದೆ.
Advertisement
Advertisement
ಮಳೆಗೆ ಹಳೆ ಸೇತುವೆ ಮುಂಭಾಗ ರಸ್ತೆಯಲ್ಲಿ ಸೀಳು ಬಿಟ್ಟಿತ್ತು. ಆದ್ದರಿಂದ ದುರಸ್ಥಿ ಕಾಮಗಾರಿ ನಡೆದ 2 ತಿಂಗಳ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಅಪಘಾತದ ಬಳಿಕ ಸಂಚಾರ ಸ್ಥಗಿತಗೊಳಿಸಿದ್ದು, ದಿಢೀರ್ ವಾಹನಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.