Connect with us

ಧಾರವಾಡದ ಹುಣಶಿಕುಮರಿ ಗ್ರಾಮದಲ್ಲಿಲ್ಲ ಒಂದೇ ಒಂದು ಕೊರೊನಾ ಪ್ರಕರಣ..!

ಧಾರವಾಡದ ಹುಣಶಿಕುಮರಿ ಗ್ರಾಮದಲ್ಲಿಲ್ಲ ಒಂದೇ ಒಂದು ಕೊರೊನಾ ಪ್ರಕರಣ..!

ಧಾರವಾಡ: ಕೋವಿಡ್ ಮೊದಲ ಅಲೆಯ ಬಳಿಕ ರಾಜ್ಯದಲ್ಲಿ ಈಗ ಕೋವಿಡ್ 2ನೇ ಅಲೆಯ ಅಬ್ಬರ ಜೋರಾಗಿದೆ. ಹಳ್ಳಿಗಳಿಗೆ ಸೋಂಕು ಹಬ್ಬುತ್ತಿದೆ. ಆದರೆ ಧಾರವಾಡದ ಈ ಊರಲ್ಲಿ ಇದುವರೆಗೆ ಒಬ್ಬರಿಗೂ ಸೋಂಕು ಹಬ್ಬಿಲ್ಲ ಎನ್ನುವುದು ಸಮಾಧಾನದ ಸಂಗತಿ.

ಹೌದು. ಧಾರವಾಡ ನಗರದಿಂದ 30 ಕಿಲೋ ಮೀಟರ್ ದೂರಲ್ಲಿರುವ ಹುಣಶಿಕುಮರಿ ಗ್ರಾಮದಲ್ಲಿ ಇಲ್ಲಿವರೆಗೆ ಒಂದೇ ಒಂದು ಕೊರೊನಾ ಕೇಸ್ ಬಂದಿಲ್ಲ. ಗ್ರಾಮದಲ್ಲಿ 100 ಮನೆಗಳಿದ್ದು, 800 ಮಂದಿ ಇದ್ದಾರೆ. ಆದರೆ ಸೋಂಕು ಬಂದಿಲ್ಲ ಎಂದು ಗ್ರಾಮದ ಜನ ನಿರ್ಲಕ್ಷ್ಯ ಮಾಡಿಲ್ಲ.

ನಗರಕ್ಕೆ ಯಾರೂ ಹೋಗದಂತೆ, ಯಾರೂ ನಗರದಿಂದ ಗ್ರಾಮಕ್ಕೆ ಬರದಂತೆ ಗ್ರಾಮಸ್ಥರೇ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. ಅಗತ್ಯ ವಸ್ತುಗಳು ಬೇಕಾದರೆ ಅಕ್ಕಪಕ್ಕದ ಗ್ರಾಮಗಳಿಗೆ ಹೋಗಿ ದಿನಸಿ ಹಾಗೂ ಕಾಯಿಪಲ್ಲೆ ತರುತ್ತಿದ್ದಾರೆ. ಇನ್ನು ಶಹರದ ಕಡೆ ಯಾರಿಗೂ ಹೋಗದಂತೆ ಎಚ್ಚರಿಕೆ ನೀಡಿರುವ ಗ್ರಾಮಸ್ಥರು, ಶಹರದಿಂದ ಗ್ರಾಮಕ್ಕೆ ಬಂದವರಿಗೆ ಪ್ರವೇಶ ನೀಡುತ್ತಿಲ್ಲ.

Advertisement
Advertisement