Connect with us

Bengaluru City

ಚಂದನ್ ಬೆಂಬಲಕ್ಕೆ ನಿಂತ ಬಾರ್ಬಿ ಗರ್ಲ್

Published

on

ಬೆಂಗಳೂರು: ಗಾಂಜಾ ಕಿಕ್ ಸಾಂಗ್ ಮೂಲಕ ಬಿಗ್ ಬಾಸ್ ನ ವಿನ್ನರ್ ಚಂದನ್ ಶೆಟ್ಟಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಈಗ ಚಂದನ್ ಬೆಂಬಲಕ್ಕೆ ಬಿಗ್ ಬಾಸ್‍ನ ಮತ್ತೋರ್ವ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ನಿಂತಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ನಿವೇದಿತಾ ಗೌಡ, ಆ ಸಾಂಗ್ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿರಲಿಲ್ಲ. ಚಂದನ್ ಒಬ್ಬ ಗಾಯಕರಾಗಿ ಆ ಹಾಡನ್ನು ಹಾಡಿದ್ದಾರೆ. ಅವರೇನು ಲಿರಿಕ್ಸ್ ಮಾಡಿಲ್ಲ. ಇದೊಂದು ಹಳೆಯ ಹಾಡು ಅಷ್ಟೆ. ಉದ್ದೇಶ ಪೂರ್ವಕವಾಗಿ ಈ ಹಾಡು ಮಾದಕ ವಸ್ತುಗಳಿಗೆ ಪ್ರಚೋದನೆ ಮಾಡುತ್ತಿಲ್ಲ. ಇದು ಒಂದು ಹಾಡು, ಅದನ್ನು ಒಬ್ಬ ಸಿಂಗರಾಗಿ ಹಾಡಿದ್ದಾರೆ ಅಷ್ಟೆ ಎಂದು ಹೇಳಿದ್ದಾರೆ.

ಚಂದನ್ ಲಿರಿಕ್ಷ್ ಬರೆದು ಹಾಡಿಲ್ಲ. ಆದ್ದರಿಂದ ಅವರ ಮೇಲೆ ಈ ರೀತಿ ಕೇಸ್ ಹಾಕುವುದು ಸರಿಯಲ್ಲ. ಈ ರೀತಿ ಘಟನೆಗಳು ಸಾಮಾನ್ಯವಾಗಿದೆ. ಈ ಪರಿಸ್ಥಿತಿಯನ್ನು ಚಂದನ್ ಚನ್ನಾಗಿ ನಿಭಾಯಿಸುತ್ತಾರೆ. ತಮ್ಮ ತಪ್ಪು ಏನು ಇಲ್ಲ ಎಂದು ಚಂದನ್ ಗೆ ಗೊತ್ತಿದ್ದರಿಂದ ಶಾಂತವಾಗಿದ್ದಾರೆ. ಅದೇ ರೀತಿ ಶಾಂತವಾಗಿ ನಿಭಾಯಿಸುತ್ತಿದ್ದಾರೆ. ಈ ಹಾಡು ಇತ್ತೀಚೆಗೆ ಮಾಡಿಲ್ಲ. ಆದ್ದರಿಂದ ಇದನ್ನು ದೊಡ್ಡದಾಗಿ ಮಾಡುವ ಅವಶ್ಯಕತೆ ಇಲ್ಲ ಎಂದು ಚಂದನ್ ಪರ ಮಾತನಾಡಿದ್ದಾರೆ.

ಮಂಗಳವಾರ ಚಂದನ್ ಸಿಸಿಬಿ ಪೊಲೀಸ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದು, ಬಳಿಕ ಹೊರ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ನನ್ನದು ಯಾವುದೇ ತಪ್ಪಿಲ್ಲ. ಅಂತ್ಯ ಚಿತ್ರಕ್ಕಾಗಿ ಮುತ್ತು ಎಂಬವರು ಸಾಹಿತ್ಯ ಬರೆದಿದ್ದು, ಕೇವಲ 5 ಸಾವಿರ ರೂ. ಸಂಭಾವನೆಗಾಗಿ ನಾನು ನನ್ನ ಜವಾಬ್ದಾರಿ ಮರೆತು ಸಂಗೀತ ಸಂಯೋಜನೆ ಮಾಡಿ ಹಾಡಿರುವುದಾಗಿ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿರುವೆ ಎಂದು ತಿಳಿಸಿದ್ದರು.

ಏನಿದು ಪ್ರಕರಣ?
ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸಿಂಗರ್ ಚಂದನ್ ಶೆಟ್ಟಿಗೆ ಬಂಧನ ಭೀತಿ ಎದುರಾಗಿತ್ತು. ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ಅಂತ್ಯ ಸಿನಿಮಾದ ಗಾಂಜಾ ಕಿಕ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವಿಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv