Wednesday, 17th July 2019

ಕಾಫಿ ಮಗ್ ಮೂಲಕ ಚಂದನ್‍ಗೆ ತನ್ನ ಮನದ ಮಾತು ತಿಳಿಸಿದ ನಿವೇದಿತಾ

ಬೆಂಗಳೂರು: ಬಿಗ್‍ಬಾಸ್ ಸೀಸನ್-5ನೇ ಸ್ಪರ್ಧಿ ಬಾರ್ಬಿ ಡಾಲ್ ನಿವೇದಿತಾ ಗೌಡ ತನ್ನ ಆತ್ಮೀಯ ಗೆಳೆಯ ರ‍್ಯಾಪರ್ ಚಂದನ್ ಶೆಟ್ಟಿಗೆ ಕಾಫಿ ಮಗ್ ಮೂಲಕ ತಮ್ಮ ಮನದ ಮಾತನ್ನು ಹೇಳಿದ್ದಾರೆ.

ನಿವೇದಿತಾ ತಮ್ಮ ಗೆಳೆಯ ಚಂದನ್ ಅವರಿಗೆ ಒಂದು ಕಾಫಿ ಮಗ್ ನೀಡಿದ್ದಾರೆ. ಆ ಕಾಫಿ ಮಗ್ ಮೇಲೆ “ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀನು ನನ್ನ ಪಕ್ಕದಲ್ಲೇ ಇರಬೇಕು ಎಂದು ನಾನು ಬಯಸುತ್ತೇನೆ. ನಿನ್ನ ಪ್ರೀತಿಯ ನಿವೇದಿತಾ” ಎಂದು ಬರೆದು ಅದನ್ನು ಚಂದನ್‍ಗೆ ಕಳುಹಿಸಿದ್ದಾರೆ.

 

View this post on Instagram

 

This Means a lot for me Nivii .. even I missed u soo much wen u wer inside .. lots of love 💖 @niveditha__gowda also tnx to @levistacoffee

A post shared by Chandan Shetty (@chandanshettyofficial) on

ಚಂದನ್ ಶೆಟ್ಟಿ ಅವರು ನಿವೇದಿತಾ ನೀಡಿದ ಮಗ್ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ಇದು ನನಗೆ ತುಂಬಾ ಮುಖ್ಯವಾಗುತ್ತದೆ ನಿವಿ. ನಾನು ಕೂಡ ನಿನ್ನನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ಕಾರವಾರದಲ್ಲಿ ನಡೆದ ಅಂಕೋಲಾ ಉತ್ಸವದಲ್ಲಿ ಚಂದನ್ ವೇದಿಕೆ ಮೇಲೆ ತಮ್ಮ ಗೆಳೆತಿ ನಿವೇದಿತಾ ಅವರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಈ ವೇಳೆ ನಿವೇದಿತಾ ಅವರು ಎಲ್ಲರೂ ಕಾರ್ಯಕ್ರಮವನ್ನು ಚೆನ್ನಾಗಿ ಎಂಜಾಯ್ ಮಾಡಿ ಎಂದು ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *