Connect with us

Latest

ರಿಲಾಯನ್ಸ್ ನಿಂದ ಧೀರೂಭಾಯಿ ಅಂಬಾನಿ ಸ್ಕ್ವೇರ್ ಲೋಕಾರ್ಪಣೆ

Published

on

– ಬಡ ಮಕ್ಕಳಿಗೆ ಇಂದಿನಿಂದ ಅನ್ನದಾನ

ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈ ಜನತೆಗಾಗಿ ರಿಲಯನ್ಸ್ ಇಂಡಸ್ಟ್ರಿಯ ಮುಖ್ಯಸ್ಥ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಇಂದು ‘ಧೀರೂಭಾಯಿ ಸ್ಕ್ವೇರ್’ ಲೋಕಾರ್ಪಣೆ ಮಾಡಿದರು. ಇದು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಬಳಿಯ ಧೀರೂಭಾಯಿ ಅಂಬಾನಿ ಅಂತರಾಷ್ಟ್ರೀಯ ಶಾಲೆಯ ಬಳಿ ನಿರ್ಮಾಣಗೊಂಡಿದೆ.

ಧೀರೂಭಾಯಿ ಸ್ಕ್ವೇರ್ ಜಿಯೋ ವರ್ಲ್ಡ್ ಸೆಂಟರ್ ನ ಭಾಗವಾಗಿದೆ. ಜಿಯೋ ವರ್ಲ್ಡ್  ಸೆಂಟರ್ ಮತ್ತು ರಿಲಯನ್ಸ್ ಉದ್ಯಮ ದೇಶದ ಅತ್ಯುನ್ನತ ಸಂಸ್ಥೆಯಾಗಿದ್ದು, ದೇಶದ ಜನತೆ ಹಲವು ಸೇವೆಗಳನ್ನು ನೀಡುತ್ತಿದೆ. ಜಾಗತಿಕ ಮಟ್ಟದ ಸೇವೆ ಮತ್ತು ಸೌಲಭ್ಯಗಳನ್ನು ಭಾರತದ ಜನತೆ ನೀಡುವ ಉದ್ದೇಶದಿಂದ ರಿಲಯನ್ಸ್ ಉದ್ಯಮ ಕೆಲಸ ಮಾಡುತ್ತಿದೆ.

ಈ ವೇಳೆ ಮಾತನಾಡಿದ ರಿಲಯನ್ಸ್ ಫೌಂಡೇಶನ್‍ನ ಮುಖ್ಯಸ್ಥೆ ಮತ್ತು ಸ್ಥಾಪಕಿ ನೀತಾ ಅಂಬಾನಿ, ಜಾಗತಿಕ ಮಟ್ಟದಲ್ಲಿ ಭಾರತದ ಅಭಿವೃದ್ಧಿಯಲ್ಲಿ ದೇಶದ ಇಬ್ಬರು ಸುಪುತ್ರರಂತೆ ಧೀರೂಭಾಯಿ ಸ್ಕ್ವೇರ್ ಮತ್ತು ಜಿಯೋ ವರ್ಲ್ಡ್ ಸೆಂಟರ್ ಕೆಲಸ ಮಾಡುತ್ತಿವೆ. ಇಂದಿನ ಸಂಜೆ ನಮಗೆ ಸ್ಪೆಶಲ್ ಆಗಿದ್ದು, ಮುಂಬೈನ ಮಕ್ಕಳಿಗಾಗಿ ನಾವು ಇಂದು ಸುಂದರ ಕಾಣಿಕೆಯನ್ನು ನೀಡುತ್ತಿದ್ದೇವೆ. ನಮ್ಮನ್ನು ಈ ಸ್ಥಾನಕ್ಕೆ ತಂದ ಮುಂಬೈ ಮಹಾನಗರಿಗೆ ಧನ್ಯವಾದ ಹೇಳುವ ಸಂಜೆ ಇದಾಗಿದೆ ಅಂದ್ರು.

ಈ ಕಾರ್ಯಕ್ರಮಕ್ಕೆ 2 ಸಾವಿರ ಮಕ್ಕಳನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ರಿಲಯನ್ಸ್ ಫೌಂಡೇಶನ್ ಅಡಿಯಲ್ಲಿರುವ ಎನ್‍ಜಿಓ ಗಳಿಂದ ಆಗಮಿಸಿದ್ದ ಮಕ್ಕಳಿಗಾಗಿ ಧೀರೂಭಾಯಿ ಸ್ಕ್ವೇರ್ ನಲ್ಲಿ ಸಂಗೀತ ಕಾರಂಜಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ವಂದೇ ಮಾತರಂ ಮತ್ತು ಜೈ ಹೋ ಹಾಡಿಗೆ ಬಣ್ಣ ಬಣ್ಣಗಳ ಕಾರಂಜಿಯ ಚಿತ್ತಾರವನ್ನು ನೋಡಿ ಮಕ್ಕಳು ಖುಷಿಪಟ್ಟರು.

ಸಂಗೀತ ಕಾರಂಜಿ ಕುರಿತು ಮಾತನಾಡಿದ ನೀತಾ ಅಂಬಾನಿ, ಮುಂದಿನ ದಿನಗಳ ಮುಂಬೈನ ಎಲ್ಲ ನಿವಾಸಿಗಳಿಗೂ ಮ್ಯೂಸಿಕಲ್ ಫೌಂಟೇನ್ ನೋಡುವ ಅವಕಾಶ ಸಿಗಲಿದೆ. ಮುಂಬೈ ನಿವಾಸಿಗಳಿಗೆ ವರ್ಲ್ಡ್ ಕ್ಲಾಸ್ ಧೀರೂಭಾಯಿ ಸ್ಕ್ವೇರ್ ಭೇಟಿ ನೀಡಬಹುದು. ಜಿಯೋ ವರ್ಲ್ಡ್ ಸೆಂಟರ್ ದೇಶದ ಅತಿದೊಡ್ಡ ಅತ್ಯತ್ತಮ ಜಾಗತಿಕ ಸಮಾವೇಶ ಕೇಂದ್ರವಾಗಲಿದೆ ಎಂದು ಹೇಳಿದರು.

ಜಿಯೋ ವರ್ಲ್ಡ್ ಸೆಂಟರ್ ಈ ವರ್ಷದ ಅಂತ್ಯದವರೆಗೆ ತೆರೆಯಲಿದ್ದು, ಎಲ್ಲ ತರಹದ ಜನರು ಇಲ್ಲಿ ಸೇರಬಹುದು. ಕಲೆ, ಆಚಾರ, ವಿಚಾರ, ಸಂಪ್ರದಾಯದ ಬಗ್ಗೆ ತಮ್ಮ ಅನುಭವವಗಳನ್ನು ಇಲ್ಲಿ ಹಂಚಿಕೊಳ್ಳಬಹುದಾಗಿದೆ. ಇದರಿಂದ ನಮ್ಮ ದೇಶದ ಸಂಸ್ಕೃತಿಯ ಉಳಿಸುವ ಉದ್ದೇಶವನ್ನು ಜಿಯೋ ಹೊಂದಿದೆ ಎಂದರು.

ಅನ್ನದಾನ: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಇಂದಿನಿಂದ ಮಾರ್ಚ್ 16ರವರೆಗೆ ಮುಂಬೈನ ಎಲ್ಲ ಆನಾಥಾಶ್ರಮ ಮತ್ತು ವೃದ್ಧಾಶ್ರಮಗಳಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಧೀರೂಭಾಯಿ ಸ್ಕ್ವೇರ್ ಮುಂಬೈ ನಿವಾಸಿಗಳಿಗೆ ಸಮರ್ಪಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರು ಈ ಸ್ಥಳಕ್ಕೆ ಭೇಟಿ ನೀಡಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv