Connect with us

Karnataka

ಕಷ್ಟವನ್ನು ಮೆಟ್ಟಿನಿಂತು ಪ್ರಾಧ್ಯಾಪಕನಾದ ಸೆಕ್ಯೂರಿಟಿ ಗಾರ್ಡ್

Published

on

ತಿರುವನಂತಪುರಂ: ರಾತ್ರಿ ಕಾವಲುಗಾರನಾಗಿದ್ದ ಯುವಕ ಈಗ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕಗೊಂಡಿದ್ದಾರೆ. ಇದೀಗ ಇವರು ಫೇಸ್‍ಬುಕ್‍ನಲ್ಲಿ ಹಾಕಿದ್ದ ಪೋಸ್ಟ್ ಒಂದು ವೈರಲ್ ಆಗಿದೆ.

ರಂಜಿತ್ ರಾಮಚಂದ್ರನ್ ಐಐಎಂ ರಾಂಚಿಯ ಪ್ರೊಫೆಸರ್ ಆಗಿ ಆಯ್ಕೆಗೊಂಡಿದ್ದಾರೆ. ಆದರೆ ಇವರು ಈ ಹುದ್ದೆಗೆ ಏರುವ ಮೊದಲು ತಾವು ಅನುಭವಿಸಿರುವ ಕಷ್ಟವನ್ನು ಎಳೆಎಳೆಯಾಗಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬಿಚ್ಚಿಟ್ಟಿದ್ದಾರೆ. ಹಲವರು ಇವರ ಸಾಧನೆಗೆ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಐಐಎಂ ರಾಂಚಿಯ ಪ್ರೊಫೆಸರ್ ಆಗಿ ಆಯ್ಕೆಯಾಗಿರುವ ರಂಜಿತ್ ರಾಮಚಂದ್ರನ್ ಹುಟ್ಟಿ ಬೆಳೆದ ಕಾಸರಗೋಡಿನಿಂದ ಹೊರಗಡೆ ಎಂದೂ ಹೋಗಿರದ ಯುವಕ ಈಗ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ. ತನ್ನಂತೆ ಕಷ್ಟ ಪಡುತ್ತಿರುವ ಯುವಜನರಿಗೆ ಇದು ಪ್ರೇರಣೆಯಾಗಲಿ ಎಂದು ತಮ್ಮ ಜೀವನದ ಪಯಣವನ್ನು ಫೇಸ್‍ಬುಕ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.

ഈ വീട്ടിലാണ് ഞാൻ ജനിച്ചത്, ഇവിടെ ആണ് വളർന്നത്, ഇപ്പോൾ ഇവിടെ ആണ് ജീവിക്കുന്നത്…… ഒരുപ്പാട് സന്തോഷത്തോടെ പറയട്ടെ ഈ…

Posted by Ranjith R Panathur on Friday, 9 April 2021

 

ನಾನು ಕಾಸರಗೋಡಿನ ಪಾಣತ್ತೂರಿನಲ್ಲಿ ಬಿಎಸ್‍ಎನ್‍ಎಲ್ ದೂರವಾಣಿ ವಿನಿಮಯ ಕೇಂದ್ರದಲ್ಲಿ ರಾತ್ರಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದೆನು. ತಂದೆ ಟೈಲರ್ ಆಗಿದ್ದು, ತಾಯಿ ಉದ್ಯೋಗ ಖಾತರಿ ಯೋಜನೆಯಡಿ ದೈನಂದಿನ ಕೂಲಿ ಕಾರ್ಮಿಕರಾಗಿದ್ದಾರೆ. ನಾವು ಮೂವರು ಮಕ್ಕಳಿದ್ದು, ನಾನು ಹಿರಿಯವನು. ಸೋರುವ ಮಾಡಿಗೆ ಪ್ಲಾಸ್ಟಿಕ್ ಮುಚ್ಚಿದ ಮನೆಯಲ್ಲಿ ಬದುಕು ನಡೆಸಿ ಬಂದಿದ್ದೇನೆ. ಕಾವಲು ಕಾಯುವ ಕೆಲಸ ಮಾಡುವ ಸಂದರ್ಭದಲ್ಲಿ ಅರ್ಥಶಾಸ್ತ್ರದ ಪದವಿ ಪಡೆಯುತ್ತಿದ್ದೆನು. ಹಗಲು ಕಾಲೇಜಿಗೆ ಹೋಗಿ ರಾತ್ರಿ ದೂರವಾಣಿ ವಿನಿಮಯ ಕೇಂದ್ರದಲ್ಲಿ ನೈಟ್ ವಾಚ್‍ಮನ್ ಆಗಿ ಕೆಲಸ ಮಾಡುತ್ತಿದ್ದೆ. ಪದವಿ ಪಡೆದ ಬಳಿಕ ಮದ್ರಾಸ್ ಐಐಟಿಗೆ ಸೇರಿದೆ.

ಮಲಯಾಳಂ ಮಾತ್ರ ತಿಳಿದಿದ್ದರಿಂದ ಅಲ್ಲಿ ಅಧ್ಯಯನ ಮಾಡಲು ಕಷ್ಟವಾಯಿತು. ಇದರಿಂದ ನಿರಾಸೆಗೊಂಡು ಪಿಎಚ್.ಡಿ. ಮಾಡುವುದನ್ನು ಬಿಡಲು ನಿರ್ಧರಿಸಿದೆ. ಆದರೆ ಮಾರ್ಗದರ್ಶಕರಾಗಿದ್ದ ಡಾ. ಸುಭಾಷ್ ಅವರು ಇದಕ್ಕೆ ಅವಕಾಶ ನೀಡಲಿಲ್ಲ. ಅವರ ಸಹಕಾರದಿಂದ ನಾನು ಅಧ್ಯಯನವನ್ನು ಮುಂದುವರಿಸಿದೆ. ಕಳೆದ ವರ್ಷ ಡಾಕ್ಟರೇಟ್ ಪದವಿಯನ್ನು ಪಡೆದೆ.

ಕಳೆದ ಎರಡು ತಿಂಗಳುಗಳಿಂದ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಜೀವನ ಕಥೆ ಕೆಲವರಿಗೆ ಸ್ಫೂರ್ತಿ ನೀಡುತ್ತದೆ ಎಂದು ಆಶಿಸಿದ್ದೇನೆ. ಪ್ರತಿ ಯೊಬ್ಬರೂ ಒಳ್ಳೆಯ ಕನಸು ಕಾಣಬೇಕು ಮತ್ತು ಅವರ ಕನಸುಗಳಿಗಾಗಿ ಹೋರಾಡಬೇಕೆಂದು ನಾನು ಬಯಸುತ್ತೇನೆ. ಇದರಿಂದ ಕೆಲವರು ಪ್ರೇರಿತರಾಗಿ ಯಶಸ್ಸನ್ನು ಕಂಡುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *