Connect with us

Bengaluru City

ನೈಜೀರಿಯನ್ಸ್ ಯುವತಿಯರಿಂದ ಮಾಂಸ ದಂಧೆ ಬಯಲು

Published

on

– ಶಾಸಕನ ಮನೆ ಮುಂದೆನೇ ದಂಧೆ
– ಅರ್ಧ ಕಿ.ಮೀ ದೂರದಲ್ಲಿದೆ ಪೊಲೀಸ್ ಠಾಣೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೈಜೀರಿಯನ್ಸ್ ಯುವತಿಯರು ಮಾಂಸ ದಂಧೆ ನಡೆಸುತ್ತಿದ್ದಾರೆ. ಈ ದಂಧೆಯ ಕರಾಳ ಮುಖವನ್ನು ಪಬ್ಲಿಕ್ ಟಿವಿ ಬಯಲು ಮಾಡಿದೆ.

ನೈಜೀರಿಯನ್ಸ್ ಪ್ರಜೆಗಳು ಎಂದರೆ ಸಾಕು, ನಮ್ಮ ಕಣ್ಣ ಮುಂದೆ ಬರೋದು, ಕಪ್ಪು ವರ್ಣದ ದೈತ್ಯ ದೇಹ. ಹೆಲ್ಮೆಟ್ ಇಲ್ಲದೆ ಟ್ರಾಫಿಕ್ ರೂಲ್ಸ್ ಗೆ ಡೋಂಟ್ ಕೇರ್ ಎಂದುಕೊಂಡು ಪೊಲೀಸರಿಗೆ ಅವಾಜ್ ಹಾಕುತ್ತಾರೆ. ಅಲ್ಲದೆ ಕಂಠಪೂರ್ತಿ ಕುಡಿದು ಮಧ್ಯರಾತ್ರಿವರೆಗೂ ಮೋಜು ಮಸ್ತಿ ಮಾಡುತ್ತಾರೆ. ಇಷ್ಟೆಲ್ಲ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ನೈಜೀರಿಯನ್ಸ್ ಪ್ರಜೆಗಳು ವೇಶ್ಯವಾಟಿಕೆ ದಂಧೆ ಮಾಡುವ ಮೂಲಕ ನಮ್ಮ ಬೆಂಗಳೂರಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪಬ್ಲಿಕ್ ಟಿವಿ ತಂಡ, ನೇರವಾಗಿ ಬೆಂಗಳೂರಿನ ಕಲ್ಯಾಣನಗರ ಸಿಗ್ನಲ್‍ಗೆ ಹೋಗಿದೆ. ಅಲ್ಲಿಗೆ ಹೋಗಿ ಕಾರು ಇಳಿದ ತಂಡಕ್ಕೆ ಶಾಕ್ ಆಗಿತ್ತು. ಏಕೆಂದರೆ ಕಲ್ಯಾಣನಗರ ಸಿಗ್ನಲ್ ಸುತ್ತಮುತ್ತಲಿನ ಸುಮಾರು 4 ಕಿ.ಮೀ ಸುತ್ತಮುತ್ತ ಕೇವಲ ನೈಜೀರಿಯನ್ಸ್ ಯುವತಿಯರ ಗುಂಪು ಇರುತ್ತದೆ.

ಇವರ ಜೊತೆ ಮಾತನಾಡಿಸಲು ಪಬ್ಲಿಕ್ ಟಿವಿ ತಂಡ ಕಾರಿನಿಂದ ರಸ್ತೆಗೆ ಇಳಿಯುತ್ತಿದ್ದ ಹಾಗೆ ಅರ್ಥವಾಗದ ಇಂಗ್ಲೀಷ್ ಭಾಷೆಯಲ್ಲಿ ಮಾತಾಡಿಸುತ್ತಾ ಹತ್ತಿರಕ್ಕೆ ಬಂದರು. ಬಳಿಕ ತಂಡ ಹಾಗೂ ನೈಜೀರಿಯನ್ಸ್ ಯುವತಿ ನಡುವೆ ನಡೆದ ಸಂಭಾಷಣೆ ಇಲ್ಲಿದೆ;

ಪಬ್ಲಿಕ್ ಟಿವಿ – ಎಷ್ಟು ರೇಟು
ನೈಜೀರಿಯನ್ಸ್ ಯುವತಿ – ಐದು ಸಾವಿರ
ಪಬ್ಲಿಕ್ ಟಿವಿ – ಇಡೀ ರಾತ್ರಿಗೆ ಎಷ್ಟು
ಯುವತಿ ಹತ್ತು ಸಾವಿರ
ಪಬ್ಲಿಕ್ ಟಿವಿ – ಕ್ಯಾಶ್ ಅಥವಾ ಕಾರ್ಡ್
ಯುವತಿ – ಒನ್ಲೀ ಕ್ಯಾಶ್

ಪಬ್ಲಿಕ್ ಟಿವಿ – ನಾವು ಇಬ್ಬರು ಇದ್ದೀವಿ ಎಷ್ಟು?
ಯುವತಿ- ಐದು ಸಾವಿರ
ಪಬ್ಲಿಕ್ ಟಿವಿ – ಮನೆ?
ಯುವತಿ – ಇಲ್ಲೇ ಪಕ್ಕದಲ್ಲಿ ನಮ್ಮ ಜಾಗ ಇದೆ, ಎರಡು ನಿಮಿಷ ಜರ್ನಿ ಅಷ್ಟೇ
ಪಬ್ಲಿಕ್ ಟಿವಿ – ನಿಮ್ಮ ಜೊತೆಯಲ್ಲಿ ಯಾರಿದ್ದಾರೆ?
ಯುವತಿ – ನನ್ನ ತಂಗಿ ಇದ್ದಾಳೆ. ಏನೂ ಪ್ರಾಬ್ಲಮ್ ಇಲ್ಲ.
ಪಬ್ಲಿಕ್ ಟಿವಿ – ನಮ್ಮ ಜೊತೆ ಬನ್ನಿ
ಯುವತಿ – ನೋ

ಪಬ್ಲಿಕ್ ಟಿವಿ – ಫಸ್ಟ್ ಟೈಂ ಬರುತ್ತಿದ್ದೀವಿ, ಪೊಲೀಸರು?
ಯುವತಿ – ಏನೂ ಪ್ರಾಬ್ಲಮ್ ಇಲ್ಲ. ನಮ್ಮದೆ ಮನೆ ಇದೆ. ಯಾರೂ ಬರಲ್ಲ.. ಆಟೋ ಕರೀಲಾ? ಹೋಗೋಣ.
ಯುವತಿ- ಇಬ್ಬರಿಗೆ 3 ಸಾವಿರ, ಫುಲ್ ನೈಟ್ 10 ಸಾವಿರ

ಪಬ್ಲಿಕ್ ಟಿವಿ – ನಿಮ್ಮ ಜಾಗ ಎಲ್ಲಿದೆ.
ಯುವತಿ- ಟು ಬಿಎಚ್‍ಕೆ ಮನೆ ಇದೆ. ನಾವು ಇಬ್ಬರು ಹುಡುಗಿಯರು ಇದ್ದೇವೆ. ಏನೂ ಪ್ರಾಬ್ಲಮ್ ಇಲ್ಲ. ಪೊಲೀಸರು ಆ ಕಡೆ ಬರಲ್ಲ. (ಒಬ್ಬರ ನಂತರ ಒಬ್ಬರು ಇಬ್ಬರು ಯುವತಿಯರು ಆಟೋ ಹತ್ತಿರ ಬಂದು ಮಾತಾಡ್ತಾರೆ)
ಪಬ್ಲಿಕ್ ಟಿವಿ – ಓಕೆ ಕ್ಯಾಷ್ ಇಲ್ಲ. ಎಟಿಎಂ ನಿಂದ ದುಡ್ಡು ತರುತ್ತೀವಿ ಇರಿ

ಮತ್ತೊಂದು ಇಂಟರೆಸ್ಟಿಂಗ್ ವಿಚಾರ ಎಂದರೆ ಅನರ್ಹ ಶಾಸಕ ಬಿಸಿ ಪಾಟೀಲ್ ಮನೆ ಕೂಡ ಇಲ್ಲಿಯೇ ಇದೆ. ಬಿ.ಸಿ ಪಾಟೀಲ್ ಅವರಿಗೆ ಗೊತ್ತಿದೆಯೋ ಇಲ್ಲವೋ. ಆದರೆ ಈ ಕಪ್ಪು ಸುಂದರಿಯರು ಅವರ ಮನೆ ಮುಂದೆನೇ ರಾಜಾರೋಷವಾಗಿ ಮಾಂಸ ದಂಧೆ ನಡೆಸುತ್ತಿದ್ದಾರೆ. ಇಲ್ಲಿಂದ ಕೇವಲ ಅರ್ಧ ಕಿ.ಮೀ ದೂರದಲ್ಲೇ ಬಾಣಸವಾಡಿ ಪೊಲೀಸ್ ಠಾಣೆ ಕೂಡ ಇದೆ. ಹೊಯ್ಸಳ ವಾಹನ ಬಂದಾಗ ಕತ್ತಲೆಗೆ ಸರಿಯುವ ಈ ಯುವತಿಯರು, ಹೊಯ್ಸಳ ಪಾಸ್ ಆಗುತ್ತಿದ್ದಂತೆಯೇ ಮತ್ತೆ ರೋಡಿಗೆ ಬರುತ್ತಾರೆ.

ಈ ವಿಚಾರ ಪೊಲೀಸರಿಗೂ ಗೊತ್ತಿದೆ. ನಾವು ಪೊಲೀಸರನ್ನು ಏನ್ ಸಾರ್ ಇದೆಲ್ಲ, ನೀವು ಏನ್ ಮಾಡಲ್ವಾ ಎಂದು ಪ್ರಶ್ನಿಸಿದಾಗ, ನಮಗೂ ಓಡಿಸಿ ಓಡಿಸಿ ಸಾಕಾಗಿದೆ. ಠಾಣೆಗೆ ಕರೆದುಕೊಂಡು ಹೋದರೆ, ಬಟ್ಟೆ ಹರಿದುಕೊಂಡು ಗಲಾಟೆ ಮಾಡುತ್ತಾರೆ. ಇಲ್ಲಿಯೇ ಹಿಡಿಯೋಕೆ ಹೋದರೆ ನಮ್ಮ ಮೇಲೆಯೇ ಗಲಾಟೆಗೆ ಬರುತ್ತಾರೆ. ನಾವ್ ತಾನೇ ಏನ್ ಮಾಡಲಿ ಎಂದು ಪೊಲೀಸರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.