Connect with us

ಅಮ್ಮನ ಧ್ವನಿ ಕೇಳಿ ಗಳಗಳನೇ ಅತ್ತ ನಿಧಿ

ಅಮ್ಮನ ಧ್ವನಿ ಕೇಳಿ ಗಳಗಳನೇ ಅತ್ತ ನಿಧಿ

ಬಿಗ್‍ಬಾಸ್ ರಿಯಾಲಿಟಿ ಶೋ ಅಂತ್ಯದ ಹೊತ್ತಿಗೆ ಸ್ಪರ್ಧಿಗಳ ಆಸೆಯನ್ನು ಬಿಗ್‍ಬಾಸ್ ಈಡೇರಿಸುತ್ತಿದ್ದಾರೆ. ದೊಡ್ಮನೆಯ ಬಹುತೇಕ ಮಂದಿ ತಮ್ಮ ಮನೆಯವರ ಧ್ವನಿಯನ್ನು ಕೇಳಿದ್ದಾರೆ. ಮನೆಯಿಂದ ದೂರವಿದ್ದ ನಿಧಿ ಸುಬ್ಬಯ್ಯಗೆ ಮನೆಯಿಂದ ಮಾತ್ರ ಇಷ್ಟು ದಿನ ಯಾವುದೇ ಸಂದೇಶ ಬಂದಿರಲಿಲ್ಲ. ಆದರೆ ಇಂದು ನಿಧಿಗೆ ಅವರ ತಾಯಿ ವಾಯ್ಸ್ ರೆಕಾರ್ಡ್ ಕಳುಹಿಸಿದ್ದಾರೆ.

ಹಾಯ್ ಕಂದ, ಹೇಗಿದ್ಯಾಮ್ಮ ಎಂದು ಮೊದಲಿಗೆ ಕೊಂಕಣಿಯಲ್ಲಿ ಮಾತನಾಡಲು ಆರಂಭಿಸಿದ ನಿಧಿ ತಾಯಿ ನಂತರ ಮಿಸ್ ಯೂ ಸೋ ಮಚ್.. ನಾನು ಮಾಜಿ ಬಾಬ್ಲೂ ಎಲ್ಲಾ ಚೆನ್ನಾಗಿದ್ದೇವಿ. ನೀನು ಮೊನ್ನೆ ಮಡಿಕೇರಿ ಸಿಪಾಯಿ ಸಾಂಗ್ ಹಾಡುತ್ತಿದ್ದಾಗ ಟಿವಿ ಬಳಿ ಬಂದು ತಲೆನಾ ಲೆಫ್ಟ್ ಟೂ, ರೈಟ್ ಲೆಫ್ಟ್ ಟೂ ರೈಲ್ ಅಲ್ಲಡಿಸುತ್ತಿದ್ದ. ಆಮೇಲೆ ಒಂದು ವಾಕ್ ಕರೆದುಕೊಂಡು ಹೋದ ನಂತರ ಸರಿಹೋದ. ನಮ್ಮ ಬಗ್ಗೆ ವರಿ ಮಾಡಬೇಡ. ನೀನು ಎಲ್ಲರ ಜೊತೆ ಚೆನ್ನಾಗಿ ಮಿಂಗಲ್ ಆಗಿ. ಚೆನ್ನಾಗಿ ಖುಷಿಯಾಗಿದ್ದೀಯಾ. ತುಂಬಾ ನಗುತ್ತಿರುತ್ತೀಯಾ, ಚೆನ್ನಾಗಿಯೂ ಆಡುತ್ತಿದ್ದಿಯಾ, ಹಾಗೆ ಇರು ಕಂದ. ಎಲ್ಲ ಸ್ಪರ್ಧಿಗಳಿಗೂ ನನ್ನ ಬೆಸ್ಟ್ ವಿಶಸ್ ತಿಳಿಸು. ಯು ಟೆಕ್ ಕೇರ್ ಕಂದ ಲವ್ ಯೂ ಸೋ ಮಚ್ ಬಾಯ್ ಎಂದು ವಿಶ್ ಮಾಡಿದ್ದಾರೆ.

ಎಷ್ಟೋ ದಿನದ ನಂತರ ಅಮ್ಮನ ಧನಿ ಕೇಳಿ ನಿಧಿ ಸುಬ್ಬಯ್ಯ ಆನಂದ ಬಾಷ್ಪ ಸುರಿಸಿದ್ದಾರೆ. ಈ ವೇಳೆ ಮನೆ ಮಂದಿ ಎಲ್ಲಾ ಚಪ್ಪಾಳೆ ತಟ್ಟುತ್ತಾ, ನಿಧಿ ಸುಬ್ಬಯ್ಯ ಬಳಿ ಬಂದು ಅಳಬೇಡ ಎಂದು ಸಮಾಧಾನ ಮಾಡುತ್ತಾ ಮತ್ತೆ ಮೇಕಪ್ ಹಾಕಿಕೊಳ್ಳಬೇಕಲ್ಲಪ್ಪಾ ಎಂದು ರೇಗಿಸುತ್ತಾರೆ. ನಂತರ ನಿಧಿ ಸುಬ್ಬಯ್ಯ ಬಿಗ್‍ಬಾಸ್‍ಗೆ ಧನ್ಯವಾದ ತಿಳಿಸಿದ್ದಾರೆ.

Advertisement
Advertisement